ಬೆಂಗಳೂರು ಪ್ರಕರಣ ಬೆನ್ನಲ್ಲೇ ಶೃಂಗೇರಿಯಲ್ಲಿ ಕಿಡಿಗೇಡಿ ಕೃತ್ಯ , ಶಂಕರಾಚಾರ್ಯ ಪುತ್ಥಳಿಗೆ ಎಸ್ ಡಿಪಿಐ ಬಾವುಟ

13-08-20 05:46 pm       Headline Karnataka News Network   ಕರ್ನಾಟಕ

ಶೃಂಗೇರಿ ಪಟ್ಟಣದಲ್ಲಿರುವ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ ಡಿಪಿಐ ಪಕ್ಷದ ಬಾವುಟ ಹಾರಿಸಲಾಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕೋಮು ಸಾಮರಸ್ಯ ಕದಡುವ ಯತ್ನವಾಗಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ.

ಚಿಕ್ಕಮಗಳೂರು, ಆಗಸ್ಟ್ 13: ಬೆಂಗಳೂರಿನ ಮತಾಂಧರ ಘಟನೆ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲೂ ಹಿಂದು ಭಾವನೆಯನ್ನು ಘಾಸಿಗೊಳಿಸುವ ಯತ್ನ ನಡೆದಿದೆ. ಶೃಂಗೇರಿ ಪಟ್ಟಣದಲ್ಲಿರುವ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ ಡಿಪಿಐ ಪಕ್ಷದ ಬಾವುಟ ಹಾರಿಸಲಾಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. 

ಕೋಮು ಸಾಮರಸ್ಯ ಕದಡುವ ಯತ್ನವಾಗಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಕೃತ್ಯದ ವಿರುದ್ಧ ಶೃಂಗೇರಿ ಮಠದ ಭಕ್ತರು ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

ಕಿಡಿಗೇಡಿಗಳನ್ನ ಕೂಡಲೇ ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಶೃಂಗೇರಿಯ ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನೆಲೆಯಾಗಿತ್ತು.