ಡಿಜೆ ಹಳ್ಳಿ ಗಲಭೆ: ಅವಹೇಳನಕಾರಿ ಪೋಸ್ಟ್‌ ಆರೋಪಿ ನವೀನ್‌ಗೆ ನ್ಯಾಯಾಂಗ ಬಂಧನ

17-08-20 05:28 pm       Bangalore Correspondent   ಕರ್ನಾಟಕ

ಇಸ್ಲಾಂ ಧರ್ಮ ಪ್ರವರ್ತಕ ಮಹಮ್ಮದ್‌ ಪೈಗಂಬರ್‌ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕುವ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರಚೋಧನೆ ನೀಡಿದ್ದ ನವೀನ್‌ ಅವರನ್ನು 14ದಿನ ನ್ಯಾಯಾಂಗ ಬಂಧಕ್ಕೆ ಒಳಪಡಿಸಲಾಗಿದೆ.

ಬೆಂಗಳೂರು, ಆಗಸ್ಟ್ 17: ಇಸ್ಲಾಂ ಧರ್ಮ ಪ್ರವರ್ತಕ ಮಹಮ್ಮದ್‌ ಪೈಗಂಬರ್‌ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕುವ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರಚೋಧನೆ ನೀಡಿದ್ದ ಶಾಸಕ ಅಖಂಡ ಶ್ರೀನಿವಾಸ್ ಅವರ ಸಂಬಂಧಿ ನವೀನ್‌ ಅವರನ್ನು 14ದಿನ ನ್ಯಾಯಾಂಗ ಬಂಧಕ್ಕೆ ಒಳಪಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನವೀನ್‌ನನ್ನು ಬಂಧಿಸಿದ್ದ ಪೊಲೀಸರು ಇಂದು ಆತನನ್ನು 11ನೇ ಎಸಿಎಂಎಂ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರು ಪಡಿಸಿದ್ದರು. ಪ್ರಕರಣದ ಗಂಬೀರತೆಯನ್ನು ಅರಿತು ನ್ಯಾಯಾಲಯ ಆರೋಪಿಯ ವಿಚಾರಣೆಯ ಬಳಿಕ ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಆರೋಪಿ ನವೀನ್‌ ಮಹಮ್ಮದ್‌ ಪೈಂಗಬರ್‌ ವಿರುದ್ಧ ಅಶ್ಲೀಲಕರವಾದ ಪೋಸ್ಟ್ ಒಂದನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದರು. ಇದು ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಆರೋಪಿ ನವೀನ್‌ ಮತ್ತು ಆತನ ಸಂಬಂಧಿ ಹಾಗೂ ಶಾಸಕ ಅಖಂಡ ಶ್ರೀನಿವಾಸ್‌ ಮನೆ ಮೇಲೆ ಕಳೆದ ಮಂಗಳವಾರ ತಡರಾತ್ರಿ ಕೆಲ ಆಗಂತುಕರ ತಂಡ ದಾಳಿ ಮಾಡಿತ್ತು.

ಈ ದಾಳಿಯಲ್ಲಿ ಅಖಂಡ ಶ್ರೀನಿವಾಸ್‌ ಮನೆ ಮತ್ತು ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ಕೆನ್ನಾಲಗೆಗೆ ಶಾಸಕಕ ಮನೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದಲ್ಲದೆ ಗಲಭೆಕೋರರು ಅಪಾರ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಈ ಗಲಭೆಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು.