ಬ್ರೇಕಿಂಗ್ ನ್ಯೂಸ್
13-03-21 12:29 pm Headline Karnataka News Network ಕರ್ನಾಟಕ
ಕಲಬುರಗಿ, ಮಾ.13: ಹೊಲದ ಬದುವಿಗೆ ಹಚ್ಚಿದ ಬೆಂಕಿ ಕಿಡಿಯಿಂದ ಗುಡಿಸಲಿಗೆ ಬೆಂಕಿ ವ್ಯಾಪಿಸಿದ ಪರಿಣಾಮ ಹಸುವೊಂದು ಸಜೀವ ದಹನಗೊಂಡ ದಾರುಣ ಘಟನೆ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಾನಂದ ಮರತೂರ ಅವರಿಗೆ ಸೇರಿದ ಹಸು ಸಜೀವ ದಹನವಾಗಿದೆ. ಇನ್ನೊಂದು ಹಸುವಿನ ದೇಹ ಕೂಡಾ ಬಹುತೇಕ ಸುಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಕೊಟ್ಟಿಗೆಯಲ್ಲಿ ಆಕಳು, ಎತ್ತು ಮತ್ತು ಕರುವನ್ನ ಕಟ್ಟಲಾಗಿತ್ತು. ಬೆಂಕಿ ತಗುಲಿದ ಪರಿಣಾಮ ಆಕಳಿಗೆ ಬೆಂಕಿ ಆವರಿಸಿದೆ. ಇನ್ನೂ ಬೆಂಕಿ ತಗುಲಿದ್ದರೂ, ಜೀವ ರಕ್ಷಣೆಗಾಗಿ ಬೆಂಕಿಯಿಂದ ಹಸು ಹೊರ ಬಂದಿದ್ದು, ತೀವ್ರ ಸುಟ್ಟ ಗಾಯಗಳಿಂದ ನರಳಿ ಸಾವನ್ನಪ್ಪಿದೆ.

ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದ್ದು, ಮನಕಲುಕುವಂತಿವೆ. ಉಳಿದಂತೆ ಎತ್ತು, ಕರುಗಳಿಗೂ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗುಡುಸಿಲಿನಲ್ಲಿದ್ದ ಆಹಾರ ಧಾನ್ಯ ಸಹ ಸುಟ್ಟು ಭಸ್ಮವಾಗಿದ್ದು, ರೈತನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಸಂಬಂಧ ಶಹಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Cow burnt alive after the hut was gutted in fire in Kalaburgi
11-12-25 08:03 pm
HK News Desk
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 04:21 pm
Mangalore Correspondent
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am