ಬ್ರೇಕಿಂಗ್ ನ್ಯೂಸ್
14-03-21 08:21 pm Headline Karnataka News Network ಕರ್ನಾಟಕ
ಹೊಸಕೋಟೆ, ಮಾ 14: ಪಟ್ಟಣದ ಎಂ ವಿ ಬಡಾವಣೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆಯ ಅಶ್ವಿನಿ (23) ಮೃತ ಯುವತಿ. ಮೂರು ದಿನಗಳ ಹಿಂದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ. ಎರಡು ವರ್ಷಗಳ ಹಿಂದೆ ಅಶ್ವಿನಿಗೆ ಫೇಸ್‌ಬುಕ್‌ನಲ್ಲಿ ಆಟೋ ಚಾಲಕ ಸುರೇಶ್ ಎಂಬಾತನ ಪರಿಚಯವಾಗಿತ್ತು. ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದ ಅಶ್ವಿನಿ ಕೆಲಸಕ್ಕೆ ಹೋಗುವಾಗ ಆಟೋ ಚಾಲಕ ಸುರೇಶ್, ದಿನಾಲು ಆಕೆಯನ್ನು ಡ್ರಾಪ್ ಮಾಡುತ್ತಿದ್ದ.
ಈ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಎರಡು ತಿಂಗಳ ಹಿಂದೆ ಸುರೇಶ್ ಅಶ್ವಿನಿಯನ್ನು ಹೊಸಕೋಟೆಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆತಂದು ಆಕೆಯ ಜೊತೆಗೆ ವಾಸವಿದ್ದ ಎಂದು ತಿಳಿದು ಬಂದಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಅಶ್ವಿನಿ ಮತ್ತು ಸುರೇಶ್ ಇಬ್ಬರೂ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಸುರೇಶ್ ತನಗೆ ವಂಚಿಸಿರುವುದಾಗಿ ಅಶ್ವಿನಿ ಸೂಲಿಬೆಲೆ ಪೊಲೀಸರ ಮೊರೆ ಹೋಗಿದ್ದಳು. ಈ ವೇಳೆ ಅಶ್ವಿನಿ ಮತ್ತು ಸುರೇಶ್ ಅನ್ನು ಕರೆದು ಮಾತನಾಡಿಸಿದ ಪೊಲೀಸರು, ಇಬ್ಬರ ನಡುವೆ ರಾಜಿ ಮಾಡಿ ಕಳಿಸಿದ್ದರು.

ಆದರೆ, ಇದೀಗ ಅಶ್ವಿನಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ, ಅಶ್ವಿನಿಯನ್ನು ಸುರೇಶ್ ಕೊಲೆ ಮಾಡಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುರೇಶ್ಗಾಗಿ ಹುಡುಕಾಡುತ್ತಿದ್ದಾರೆ.
ಮೃತ ಅಶ್ವಿನಿಯ ಚಿಕ್ಕಮ್ಮ ಅಂಬಿಕಾ ಮಾತನಾಡಿ, ಸುರೇಶ್ ದುಡ್ಡಿಗಾಗಿ ಅಶ್ವಿನಿಯನ್ನು ಪೀಡಿಸುತ್ತಿದ್ದ. 35 ಸಾವಿರ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದ. ಹಣ ತಂದರೆ ಮಾತ್ರ ಮನೆಗೆ ಬಾ, ಇಲ್ಲದಿದ್ದರೆ ಸತ್ತು ಹೋಗು ಎಂದು ಗಲಾಟೆ ಮಾಡಿದ್ದ. ಇದನ್ನು ಸಾಯುವ ಮುನ್ನ ಅಶ್ವಿನಿ ಹೇಳಿಕೊಂಡಿದ್ದಾಳೆ.
ನಮ್ಮ ಮಗುವನ್ನು ಸುರೇಶ್ ಮೋಸ ಮಾಡಿ ಕರೆತಂದು, ಕೊಲೆ ಮಾಡಿದ್ದಾನೆ. ಈ ಮೊದಲು ಅಶ್ವಿನಿಗೆ ಮದುವೆಯಾಗಿದ್ದು, ಗಂಡನಿಂದ ದೂರವಾಗಿದ್ದಳು. ಆಕೆಗೆ ಒಂದು ಮಗು ಕೂಡ ಇದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಕಳೆದ 2 ತಿಂಗಳ ಹಿಂದೆ ಮದುವೆಯಾಗದೆ ಒಂದೇ ಮನೆಯಲ್ಲಿ ವಾಸವಿದ್ದರು. ದುಡ್ಡಿಗಾಗಿ ಪೀಡಿಸಿ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂದು ಆರೋಪಿಸಿದ್ದಾರೆ.
Boyfriend whose a auto driver by profession is alleged of Killing his girlfriend for the sake of money in Tumkur.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm