ಹೆಸರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ; ಜನರ ದುಡ್ಡು ಕಿತ್ತು ಕೊಬ್ಬಿದ ಗೂಳಿ! ಗದಗ, ದಾವಣಗೆರೆ, ಶಿವಮೊಗ್ಗದಲ್ಲಿ ನಾಲ್ಕು ಮನೆ, ತೋಟ, 9 ಕೇಜಿ ಚಿನ್ನ, 15 ಲಕ್ಷ ನಗದು ಸೇರಿ ಕೋಟ್ಯಂತರ ಆಸ್ತಿ ಪತ್ತೆ !!

24-11-21 12:03 pm       HK news Desk   ಕರ್ನಾಟಕ

ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಎಂಬ ಭ್ರಷ್ಟ ಅಧಿಕಾರಿಯ ಅಸಲಿ ಬಣ್ಣ ಬಯಲಿಗೆ ಬಂದಿದೆ.

ಗದಗ, ನ.24: ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಟಿ. ರುದ್ರೇಶಪ್ಪ ಎಂಬ ಭ್ರಷ್ಟ ಅಧಿಕಾರಿಯ ಅಸಲಿ ಬಣ್ಣ ಬಯಲಿಗೆ ಬಂದಿದೆ. ಆತನ ಮನೆ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 

ಗದಗದ ನಿವಾಸದಲ್ಲಿ 3.5 ಕೋಟಿ ಬೆಲೆಬಾಳುವ 9 ಕೇಜಿ ಚಿನ್ನಾಭರಣ ಮತ್ತು ಗೋಲ್ಡ್ ಬಿಸ್ಕೆಟ್ ಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.‌ ಅಲ್ಲದೆ, ಮನೆಯಲ್ಲಿ ಕೂಡಿಟ್ಟಿದ್ದ 15 ಲಕ್ಷ ನಗದನ್ನೂ ವಶಕ್ಕೆ ಪಡೆದಿದ್ದಾರೆ. 

ಇದಲ್ಲದೆ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ತೋಟದ ಮನೆ, ಶಿವಮೊಗ್ಗದ ಚಾಲುಕ್ಯ ನಗರದ 4ನೇ ತಿರುವಿನಲ್ಲಿ ಒಂದು ಮನೆ, ಗೋಪಾಲ ಬಡಾವಣೆಯಲ್ಲಿ ಇನ್ನೊಂದು ಮನೆ ಹೊಂದಿದ್ದು ಏಕಕಾಲದಲ್ಲಿ ದಾಳಿ ನಡೆದಿದೆ. ಅಧಿಕಾರಿ ರುದ್ರೇಶನನ್ನು ಪಕ್ಕದಲ್ಲಿ ಕೂರಿಸಿಕೊಂಡು 8 ಕ್ಕೂ ಅಧಿಕ ಸಿಬ್ಬಂದಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕಂಪ್ಯೂಟರ್ ನಲ್ಲಿ ಇರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಭ್ರಷ್ಟ ಅಧಿಕಾರಿಯನ್ನು ಎಸಿಬಿ ವಶಕ್ಕೆ ಪಡೆದಿದೆ. 

ರುದ್ರೇಶಪ್ಪ ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಿವಾಸಿಯಾಗಿದ್ದು ಹಾಲಿ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ಆಯುಕ್ತನಾಗಿದ್ದಾನೆ.

Gadag Agriculture joint commissioner house raided by ACB, 9 Kilo gold and 15 lakh cash seized. Several regions of Karnataka hae been raided by ACB in the early hours of Wednesday.