ಬ್ರೇಕಿಂಗ್ ನ್ಯೂಸ್
28-12-21 01:48 pm HK Desk news ಕರ್ನಾಟಕ
ಹುಬ್ಬಳ್ಳಿ, ಡಿ.28 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಡಿ.28 ಮತ್ತು 29ರಂದು ನಡೆಯುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ ಅವರು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬದ್ಧತೆ ಇರುವ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ. ಅವರನ್ನು ಬದಲಾವಣೆ ಮಾಡುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರು ಸ್ವಇಚ್ಛೆಯಿಂದಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು ಎಂದು ಪ್ರಶ್ನೆಯೊಂದಕ್ಕೆ ಅರುಣ್ ಸಿಂಗ್ ಉತ್ತರಿಸಿದರು. ಗುತ್ತಿಗೆದಾರರು ಮಾಡಿರುವ 40 ಶೇ. ಕಮಿಷನ್ ಆರೋಪದಲ್ಲಿ ಹುರುಳಿಲ್ಲ. ಸರಕಾರ ಪ್ರಾಮಾಣಿಕವಾಗಿದ್ದು ಕೆಲವೊಂದು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರಬಹುದು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿಯಲ್ಲಿ ಸೋಲಲು ಕಾರಣವಾದ ಅಂಶಗಳ ಬಗ್ಗೆ ಪರಿಶೀಲನೆಗೆ ಸಮಿತಿ ರಚಿಸಲಾಗುವುದು. ಅದಕ್ಕೆ ಪೂರಕವಾಗಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು. ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವರಾಗುವ ಯೋಗವಿದೆ ಎಂಬ ಸಚಿವ ನಿರಾಣಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಈ ಬಗ್ಗೆ ಅವರಲ್ಲೇ ಮಾಹಿತಿ ಕೇಳಿದ್ದೇನೆ. ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ನಿರಾಣಿ ಸ್ಪಷ್ಟಪಡಿಸಿದ್ದಾಗಿ ಹೇಳಿದರು.
Ahead of the Karnataka BJP executive committee meeting on Tuesday in Hubballi, Arun Singh, BJP national general secretary and in charge BJP Karnataka, has ruled out a change in leadership in the State.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am