ಬ್ರೇಕಿಂಗ್ ನ್ಯೂಸ್
21-09-26 12:58 pm HK News Staffer ಕರ್ನಾಟಕ
ಬೆಂಗಳೂರು, ಸೆ.21: ದೇಶದಲ್ಲಿ ಎಡಪಂಥೀಯ ಉಗ್ರವಾದ ಹರಡುವುದಕ್ಕಾಗಿ ಬೆಂಗಳೂರಿನ ಎರಡು ನಕಲಿ ಕಂಪೆನಿಗಳಿಗೆ ಅಮೆರಿಕ ಮೂಲದ ಕ್ರೈಸ್ತ ಸೇವಾ ಸಂಸ್ಥೆ ದಿ ಟಿಮೋಟಿ ಇನಿಶೇಟಿವ್ (ಟಿಟಿಐ) ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು ಇದರ ಬಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ವಿಚಿತ್ರ ಎಂದರೆ ಲೀಡ್ ಎಲ್ಎಲ್ಪಿ ಮತ್ತು ಕ್ರಾಸ್ವೈಸ್ ಎಲ್ಎಲ್ಪಿ ಎಂಬ ಎರಡು ಶೆಲ್ ಕಂಪನಿಗಳು ಬೆಂಗಳೂರನ್ನು ಕೇಂದ್ರ ಕಚೇರಿಯನ್ನಾಗಿಸಿ ಎಡಪಂಥೀಯ ಉಗ್ರವಾದಕ್ಕಾಗಿ ಹಣ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯವು ಕೇಂದ್ರ ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಇಡೀ ಕಾರ್ಯಾಚರಣೆಯ ಸೂತ್ರಧಾರ ಮಥಾಯಿ ಎಂಬ ಹೆಸರನ್ನು ಸೂಚಿಸಿದೆ. ಈ ಸಂಬಂಧ ಆಗಸ್ಟ್ 28ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಇ.ಡಿ ಅಧಿಕಾರಿಗಳು ಕಳೆದ ಏಪ್ರಿಲ್ 18ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುತ್ತಿದ್ದ ಮೈಕಾ ಮಾರ್ಕ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಆತನ ಬಳಿ ಅಮೆರಿಕದ ಟ್ರಸ್ಟ್ ಬ್ಯಾಂಕಿಗೆ ಸೇರಿದ 24 ಎಟಿಎಂ ಡೆಬಿಟ್ ಕಾರ್ಡ್ಗಳು ಪತ್ತೆಯಾಗಿದ್ದವು. ಎಲ್ಲವೂ 'ಸಂತೋಷ್ ಕುಮಾರ್' ಎಂಬ ಹೆಸರಿನಲ್ಲಿ ಮುದ್ರಿತವಾಗಿದ್ದವು. ಸಂತೋಷ್ ಕುಮಾರ್ ಎಂಬುದು ಭಾರತದಲ್ಲಿ ತುಂಬಾ ಸಾಮಾನ್ಯ ಹೆಸರಾಗಿದ್ದು ಯಾವುದೇ ಅನುಮಾನ ಬಾರದಂತೆ ಈ ಹೆಸರನ್ನು ಬಳಸಿಕೊಂಡಿದ್ದರು. ಆದರೆ ಇಷ್ಟೊಂದು ನಕಲಿ ಎಟಿಎಂ ಕಾರ್ಡ್ ಗಳನ್ನು ತರುತ್ತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಮಾರ್ಕ್ ಹಲವು ಬಾರಿ ವಿದೇಶಕ್ಕೆ ಹೋಗಿ ಬಂದಿರುವುದು, ಪ್ರತಿ ಬಾರಿಯೂ ಎಟಿಎಂ ಕಾರ್ಡ್ ತಂದು ಭಾರತದಲ್ಲಿ ಹಂಚಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಮೈಕಲ್ ಮಾರ್ಕ್ ಭಾರತದಲ್ಲಿ ದಿ ಟಿಮೋಟಿ ಇನಿಶಿಯೇಟಿವ್ ಸಂಸ್ಥೆಯ ಹಣಕಾಸು ವಹಿವಾಟು ನಿರ್ವಹಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಇಂತಹ ಡೆಬಿಟ್ ಕಾರ್ಡ್ಗಳನ್ನು ವಿತರಿಸಿರುವುದು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ. ಈ ಎಟಿಎಂ ಕಾರ್ಡ್ ಗಳ ಮೂಲಕ ಕರ್ನಾಟಕ, ಛತ್ತೀಸ್ ಗಢ, ಅಸ್ಸಾಂ ರಾಜ್ಯಗಳಲ್ಲಿ 92 ಕೋಟಿಗೂ ಹೆಚ್ಚು ಹಣವನ್ನು ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿರುವ ಮಥಾಯಿ ನಿವಾಸದಿಂದ ವಿದೇಶಿ ಡೆಬಿಟ್ ಕಾರ್ಡ್ ಗಳ ಮೂಲಕ ವಿತ್ ಡ್ರಾ ಮಾಡಲಾಗಿದ್ದ 37 ಲಕ್ಷ ರೂ. ನಗದನ್ನು ಇಡಿ ಅಧಿಕಾರಿಗಳು ವಶಪಡಿಸಿದ್ದಾರೆ.
ಸಿಬಿಐ ಆಗಸ್ಟ್ 27ರಂದು ದಾಖಲಿಸಿರುವ ಎಫ್ಐಆರ್ ನಲ್ಲಿ ಜೊನಾಥನ್ ಎಸ್. ರಾಜನ್, ಮೈಕಾ ಮಾರ್ಕ್, ಅಜಿತ್ ವರ್ಗೀಸ್ ಮಥಾಯಿ, ಬಾಬು ಕುರ್ಮಿ, ಸುಪ್ರೀಂ ಜಾಯ್, ವರ್ಗೀಸ್ ಚಾಕೋ ಮತ್ತು ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸು ದಾಖಲಾಗಿದೆ. 2025ರ ನವೆಂಬರ್ ನಿಂದ 2026ರ ಎಪ್ರಿಲ್ ನಡುವೆ 92 ಕೋಟಿಗೂ ಹೆಚ್ಚು ಹಣವನ್ನು ನಗದೀಕರಿಸಿರುವುದಾಗಿ ತಿಳಿಸಿದೆ. ಅಲ್ಲದೆ, ರಾಜನ್ ಭಾರತದಲ್ಲಿ ಟಿಟಿಐ ಸಂಸ್ಥೆಯ ಒಟ್ಟಾರೆ ಕಾರ್ಯಾಚರಣೆ ಉಸ್ತುವಾರಿ ಎಂದು ಹೇಳಲಾಗುತ್ತಿದೆ. ಚಾಕೋ, ಜಾಯ್ ಮತ್ತು ಕುರ್ಮಿ ಕ್ಷೇತ್ರ ಮಟ್ಟದ ಕಾರ್ಯಕರ್ತರಾಗಿದ್ದು ಇವರು ಹಣವನ್ನು ವಿತ್ ಡ್ರಾ ಮಾಡಿ ಬೇರೆ ಬೇರೆ ಮಿಶನರಿ ಚಟುವಟಿಕೆಗಳಿಗೆ ಬಳಸಿಕೊಂಡಿದ್ದರೆಂದು ಹೇಳಲಾಗಿದೆ. ಪ್ರತಿ ಹಳ್ಳಿಯಲ್ಲಿ ಚರ್ಚ್, ಎಲ್ಲ ಕಡೆಯೂ ಚರ್ಚ್ ನಿರ್ಮಾಣ ಎನ್ನುವುದು ಟಿಟಿಐ ತಂಡದ ಧ್ಯೇಯವಾಗಿತ್ತು.
ವಿದೇಶಿ ಬ್ಯಾಂಕ್ ಹೆಸರಲ್ಲಿ ವಿತ್ಡ್ರಾ ಮಾಡಿರುವ ನಗದು ಎಫ್ಸಿಆರ್ಎ 2010ರ ಸೆಕ್ಷನ್ 2(1)(ಎಚ್) ಅಡಿಯಲ್ಲಿ 'ಅಪರಾಧ'ವಾಗಿದ್ದು ಸಿಬಿಐ ಮತ್ತು ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ರಾಜನ್ ಮತ್ತು ಮಥಾಯಿ ಒಟ್ಟು ಸಂಸ್ಥೆಯನ್ನು ಭಾರತದಲ್ಲಿ ಮುನ್ನಡೆಸುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ, ಛತ್ತೀಸ್ ಗಢ, ಅಸ್ಸಾಂ ಮೂಲದ ಬಡವರನ್ನು ಹಣದ ಆಮಿಷವೊಡ್ಡಿ ಇವರ ಗ್ರೂಪ್ ಸೇರಿಸಿ ಬ್ರೇನ್ ವಾಷ್ ಮಾಡುತ್ತಿದ್ದರು. ರಾಜನ್, ಮಾರ್ಕ್ ಮತ್ತು ಮಥಾಯಿ ಬೆಂಗಳೂರು ಮೂಲದವರು, ಜಾಯ್ ಮೈಸೂರು, ಕುರ್ಮಿ ಅಸ್ಸಾಂನ ಗೋಲ್ದಾರಾ, ಮತ್ತು ಚಾಕೋ ಛತ್ತೀಸ್ಗಢ ಮೂಲದವರು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm