ಹಿಂದು, ಕ್ರೈಸ್ತರೇ ಸಮಾಧಿ ಕಟ್ಟಲು ತಯಾರಾಗಿ, ಹೂವು, ಅಕ್ಕಿ ರೆಡಿ ಮಾಡಿಕೊಳ್ಳಿ, ಧೂಪ, ಸಾಂಬ್ರಾಣಿಯನ್ನೂ ರೆಡಿ ಮಾಡಿಸಿ ; ಪಿಎಫ್ಐ ಪ್ರತಿಭಟನೆಯಲ್ಲಿ ಬೆದರಿಕೆ !

23-05-22 09:22 pm       HK News Desk   ದೇಶ - ವಿದೇಶ

ಪಿಎಫ್ಐ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದು ಮತ್ತು ಕ್ರೈಸ್ತರಿಗೆ ಬಹಿರಂಗ ಬೆದರಿಕೆ ಹಾಕುವ ಘೋಷಣೆಗಳ ವಿಡಿಯೋ ಕೇರಳದಲ್ಲಿ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ತಿರುವನಂತಪುರಂ, ಮೇ 23: ಪಿಎಫ್ಐ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದು ಮತ್ತು ಕ್ರೈಸ್ತರಿಗೆ ಬಹಿರಂಗ ಬೆದರಿಕೆ ಹಾಕುವ ಘೋಷಣೆಗಳ ವಿಡಿಯೋ ಕೇರಳದಲ್ಲಿ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಆಲಪ್ಪುಳ ಜಿಲ್ಲೆಯಲ್ಲಿ ಮೇ 21ರಂದು ಜನ ಮಹಾ ಸಮ್ಮೇಳನ ಹೆಸರಲ್ಲಿ ಪಿಎಫ್ಐ ವತಿಯಿಂದ ಬೃಹತ್ ಮೆರವಣಿಗೆ ನಡೆದಿದ್ದು, ಅದರಲ್ಲಿ ಈ ಘೋಷಣೆ ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ, ವಿಡಿಯೋ ಭಾನುವಾರವಷ್ಟೇ ಲಭ್ಯವಾಗಿದ್ದು, ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದು ಇದರಲ್ಲಿ ಅಪ್ರಾಪ್ತ ಬಾಲಕನೊಬ್ಬ ಕೂಗುತ್ತಿದ್ದ ಘೋಷಣೆಯನ್ನು ಇತರರು ಅನುಮೋದಿಸುತ್ತಿರುವುದು ವಿಡಿಯೋದಲ್ಲಿದೆ. ಮರ್ಯಾದೆಯಿಂದ ಜೀವಿಸದಿದ್ದರೆ ಹಿಂದು, ಕ್ರೈಸ್ತರಿಗೆ ಗತಿ ಕಾಣಿಸಲು ನಾವು ರೆಡಿಯಾಗಿದ್ದೇವೆ. ನಾವು ಗುಜರಾತ್ ಹತ್ಯಾಕಾಂಡ ಮರೆತಿಲ್ಲ. ಕೇರಳದಲ್ಲಿ ಸಂಘ ಪರಿವಾರ ಕುಕೃತ್ಯಗಳಿಗೆ ಕೈಹಾಕಿದರೆ ಸೂಕ್ತ ಉತ್ತರ ನೀಡಬಲ್ಲೆವು ಎನ್ನುವ ಘೋಷಣೆಗಳು ವೈರಲ್ ವಿಡಿಯೋದಲ್ಲಿ ಕೇಳಿಬರುತ್ತವೆ.

ನೀವು ನ್ಯಾಯಯುತವಾಗಿ ಜೀವಿಸದಿದ್ದರೆ, ನಿಮಗೆ ಸಮಾಧಿ ಕಟ್ಟಲು ನಮ್ಮ ಯುವಕರು ತಯಾರಾಗಿದ್ದಾರೆ. ಹಿಂದುಗಳು ಕೊನೆಯ ಸಮಾಧಿಗೆ ಅಕ್ಕಿ, ಹೂವು ರೆಡಿ ಮಾಡಿಕೊಳ್ಳಿ. ಕ್ರೈಸ್ತರು ತಮ್ಮ ಅಂತಿಮ ಕಾರ್ಯಕ್ಕೆ ಧೂಪ, ಸಾಂಬ್ರಾಣಿ ರೆಡಿ ಮಾಡಿಕೊಳ್ಳಿ. ನಾವು ಬರುತ್ತಿದ್ದೇವೆ, ನಿಮಗೆ ಉತ್ತರ ನೀಡಲಿದ್ದೇವೆ. ನಾವೆಂದೂ ಪಾಕಿಸ್ಥಾನ, ಬಾಂಗ್ಲಾದೇಶಕ್ಕೆ ಹೋಗಲ್ಲ. ನಾವು ಇಲ್ಲೇ ಇರುತ್ತೇವೆ. ಇಲ್ಲಿ ನಾವು ಹೇಳಿದಂತೆ ನೀವು ಕೇಳದಿದ್ದರೆ, ನಿಮ್ಮನ್ನು ಬಾಯಿ ಮುಚ್ಚಿಸಲು ನಮಗೆ ಗೊತ್ತು. ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಕೊಲ್ಲುತ್ತೇವೆ. ನಾವು ಹುತಾತ್ಮರಾಗಲು ರೆಡಿ ಇದ್ದೇವೆ. ನಿಮಗೆ ಸರಿಯಾಗಿ ಬದುಕಲು ಸಾಧ್ಯವಾಗದಿದ್ದರೆ ಸಾಯಲು ತಯಾರಾಗಿ. ನಾವು ಆಜಾದಿ ಘೋಷಣೆ ಮಾಡುತ್ತೇವೆ ಎಂದು ಮಲಯಾಳದಲ್ಲಿ ಬೆದರಿಕೆ ಹಾಕುವ ಬೆದರಿಕೆ ಬಂದಿದೆ.

ಇದಲ್ಲದೆ, ವಿವಾದಿತ ಬಾಬ್ರಿ ಮಸೀದಿ ಕಟ್ಟಡ ಇರುವಲ್ಲೇ ಮತ್ತೆ ಪ್ರಾರ್ಥನೆ(ಸುಜೂದ್) ಮಾಡುತ್ತೇವೆ. ವಾರಣಾಸಿಯ ಗ್ಯಾನವಾಪಿ ಮಸೀದಿಯಲ್ಲೂ ನಮಾಜ್ ಮಾಡುತ್ತೇವೆ. ನಾವು ಪಾಕಿಸ್ಥಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲ್ಲ. ಹಾಗೆ ಹೋಗುವುದಿದ್ದರೆ ಸಂಘ ಪರಿವಾರದವರನ್ನೂ ಕರೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ವೈರಲ್ ವಿಡಿಯೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ.

Kerala Police have launched a probe after a video of a Kerala boy making provocative slogans against Hindus and Christian went viral on social media platforms.