ವಿಸ್ಮಯಾ ಆತ್ಮಹತ್ಯೆ ಪ್ರಕರಣ ; ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಾವು, ಪತಿ ಆರ್ ಟಿಓ ಅಧಿಕಾರಿಗೆ ಹತ್ತು ವರ್ಷ ಶಿಕ್ಷೆ, ಸಾವಿಗೆ ವರ್ಷ ತುಂಬುವ ಮೊದಲೇ ಜೈಲು ಸೇರಿದ ಪತಿರಾಯ!  

24-05-22 10:04 pm       HK News Desk   ದೇಶ - ವಿದೇಶ

ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಪತ್ನಿಯ ಆತ್ಮಹತ್ಯೆಗೆ ಕಾರಣನಾಗಿದ್ದ ಪತಿಗೆ ಕೊಲ್ಲಂ ಅಡಿಶನಲ್ ಸೆಷನ್ಸ್ ಕೋರ್ಟ್ ಹತ್ತು ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಿದೆ.

Photo credits : Onmanorama

ಕೊಲ್ಲಂ, ಮೇ 24: ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಪತ್ನಿಯ ಆತ್ಮಹತ್ಯೆಗೆ ಕಾರಣನಾಗಿದ್ದ ಪತಿಗೆ ಕೊಲ್ಲಂ ಅಡಿಶನಲ್ ಸೆಷನ್ಸ್ ಕೋರ್ಟ್ ಹತ್ತು ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಿದೆ. 24 ವರ್ಷದ ವಿಸ್ಮಯಾ ಎಂಬ ಹೆಣ್ಣು ಮಗಳ ಸಾವಿಗೆ ಕಾರಣನಾಗಿದ್ದ ಆರ್ ಟಿಓ ಇನ್ ಸ್ಪೆಕ್ಟರ್ ಆಗಿದ್ದ ಕಿರಣ್ (31) ಹತ್ತು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾನೆ.

ಐಪಿಸಿ ಸೆಕ್ಷನ್ 306 ಅಡಿ ಸಾವಿಗೆ ದುಷ್ಪ್ರೇರಣೆ ಮತ್ತು ಸೆಕ್ಷನ್ 498ಎ ಅಡಿ ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ತಲಾ ಎರಡು ವರ್ಷ, 304ಬಿ ಅಡಿ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರು ವರ್ಷಗಳ ಶಿಕ್ಷೆಯನ್ನು ಕೊಲ್ಲಂ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ.ಎನ್.ಸುಜಿತ್ ಜಾರಿಗೊಳಿಸಿದ್ದಾರೆ. ಅಲ್ಲದೆ, 12.55 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ಪೈಕಿ ಎರಡು ಲಕ್ಷ ರೂ. ವಿಸ್ಮಯಾ ಹೆತ್ತವರಿಗೆ ನೀಡುವಂತೆ ಕೋರ್ಟ್ ಹೇಳಿದೆ.

Vismaya's husband Kiran dismissed from service | Kerala News | Onmanorama

ಪ್ರಕರಣದಲ್ಲಿ ಆರೋಪಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ಸೋಮವಾರ ಘೋಷಿಸಿದ್ದು, ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಸೋಮವಾರ ಅಪರಾಧಿಯೆಂದು ಘೋಷಣೆ ಮಾಡಿದ ಕೂಡಲೇ ಕಿರಣ್ ಕುಮಾರ್ ಕೋರ್ಟ್ ಮುಂದೆ ಶಿಕ್ಷೆ ಕಡಿಮೆಗೊಳಿಸುವಂತೆ ಕೇಳಿಕೊಂಡಿದ್ದ. ತಂದೆ, ತಾಯಿಗೆ ತಾನೊಬ್ಬನೇ ಆಸರೆಯಾಗಿದ್ದು, ಕಡಿಮೆ ಶಿಕ್ಷೆ ನೀಡುವಂತೆ ಕೇಳಿದ್ದ. ಆದರೆ, ಪ್ರಾಸಿಕ್ಯೂಶನ್ ಪರ ವಕೀಲರು ಗರಿಷ್ಠ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು.

We got justice, but expected life imprisonment for Kiran,' says Vismaya's  mother Sajitha | Kollam | Onmanorama

ಮದುವೆಯ ಸಂದರ್ಭದಲ್ಲಿ ಕಿರಣ್ ಕುಮಾರ್ ಗೆ ಗಿಫ್ಟ್ ನೀಡಿದ್ದ ಕಾರಿನಲ್ಲಿಯೇ ವಿಸ್ಮಯಾ ತಂದೆ ತ್ರಿವಿಕ್ರಮನ್ ನಾಯರ್ ಮತ್ತು ತಾಯಿ ಸಜಿತಾ ಆಗಮಿಸಿದ್ದು ಕೋರ್ಟ್ ತೀರ್ಪು ಕೇಳಿ ಭಾವುಕರಾಗಿದ್ದಾರೆ. ವಿಸ್ಮಯಾ ಸಾವಿಗೆ ನ್ಯಾಯ ಸಿಕ್ಕಿದೆ. ಪ್ರಾಸಿಕ್ಯೂಶನ್ ಮತ್ತು ಪೊಲೀಸರ ಶ್ರಮಕ್ಕೆ ಅಭಿನಂದಿಸಲು ನನ್ನಲ್ಲಿ ಪದಗಳಿಲ್ಲ ಎಂದು ನಾಯರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಕಾರಿನಲ್ಲಿ ಸದಾ ವಿಸ್ಮಯಾಳಿಗಾಗಿ ಒಂದು ಸೀಟು ಕಾದಿರಿಸುತ್ತೇನೆ. ಈ ಕಾರು ಅವಳಿಗಾಗಿಯೇ ಗಿಫ್ಟ್ ಕೊಟ್ಟಿದ್ದೆ ಎಂದು ಕಣ್ಣೀರು ಹರಿಸುತ್ತಾ ಹೇಳಿದ್ದಾರೆ.

Vismaya dowry death case: Husband sentenced to 10-year imprisonment - The  Hindu

ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದ ವಿಸ್ಮಯಾ 2021ರ ಜೂನ್ 21ರಂದು ಗಂಡನ ಮನೆ ಕೊಲ್ಲಂ ಜಿಲ್ಲೆಯ ಸಾಸ್ತಂಕೊಟ್ಟ ಎಂಬಲ್ಲಿ ಸಾವಿಗೆ ಶರಣಾಗಿದ್ದಳು. ಸಾವಿಗೂ ಮುನ್ನ ಗಂಡನ ಕಿರುಕುಳ, ದೈಹಿಕ ಹಲ್ಲೆ ನಡೆಸಿದ ಬಗ್ಗೆ ಪೋಟೋಗಳನ್ನು ವಾಟ್ಸಪ್ ನಲ್ಲಿ ಹೆತ್ತವರಿಗೆ ಕಳುಹಿಸಿದ್ದಳು. 2020ರಲ್ಲಿ ಮೋಟರ್ ವೆಹಿಕಲ್ ಇನ್ ಸ್ಪೆಕ್ಟರ್ ಆಗಿದ್ದ ಕಿರಣ್ ಕುಮಾರ್ ಜೊತೆಗೆ ವಿಸ್ಮಯಾ ಮದುವೆ ಮಾಡಲಾಗಿತ್ತು. ಈ ವೇಳೆ, ಆಕೆಯ ಹೆತ್ತವರು 100 ಸವರಿನ್ ಚಿನ್ನಾಭರಣ(ಒಂದು ಸವರಿನ್ ಅಂದರೆ ಎಂಟು ಗ್ರಾಮ್), ಒಂದು ಎಕ್ರೆ ಜಾಗ ಮತ್ತು ಹತ್ತು ಲಕ್ಷ ಮೌಲ್ಯದ ಕಾರನ್ನು ವರದಕ್ಷಿಣೆ ರೂಪದಲ್ಲಿ ಗಿಫ್ಟ್ ನೀಡಿದ್ದರು. ಆದರೆ ಕಿರಣ್ ಕುಮಾರ್, ಇನ್ನಷ್ಟು ಹಣ ತರುವಂತೆ ವಿಸ್ಮಯಾಗೆ ಕಿರುಕುಳ ನೀಡುತ್ತಿದ್ದ. ಕಾರು ಬೇಡ, ಅದರ ಬದಲಿಗೆ ಹತ್ತು ಲಕ್ಷ ಹಣವನ್ನೇ ತಂದುಕೊಡುವಂತೆ ಪೀಡಿಸಿದ್ದಾಗಿ ವಿಸ್ಮಯಾ ಹೆತ್ತವರಲ್ಲಿ ಅಳಲು ತೋಡಿಕೊಂಡಿದ್ದಳು.

The Kollam Additional Sessions Court-1 sentenced S Kiran Kumar to 10 years' jail term over the death f his wife Vismaya, 24, on charges of dowry harassment. He was found guilty by the court on Monday.