ಬ್ರೇಕಿಂಗ್ ನ್ಯೂಸ್
27-05-22 04:43 pm HK News Desk ದೇಶ - ವಿದೇಶ
ಮುಂಬೈ, ಮೇ 27: ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ಲೀನ್ ಚಿಟ್ ನೀಡಿದೆ.
ಈ ಪ್ರಕರಣದಲ್ಲಿ ಇತರ ನಾಲ್ವರೊಂದಿಗೆ ಸಂಸ್ಥೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದು ಹೇಳಿದೆ. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು ಅಕ್ಟೋಬರ್ ಆರಂಭದಲ್ಲಿ ಬಂಧಿಸಲಾಗಿತ್ತು.
ಏನಿದು ಪ್ರಕರಣ?:
ಆರ್ಯನ್ ಖಾನ್ 2021ರ ಅಕ್ಟೋಬರ್‌ನಲ್ಲಿ ಡ್ರಗ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದರು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್ 8ರಂದು ಆತನನ್ನು ಬಂಧಿಸಲಾಗಿತ್ತು. ಹಲವು ದಿನಗಳ ಕಾಲ ಜೈಲಿನಲ್ಲಿದ್ದ ಆರ್ಯನ್‌ಗೆ ಸತತ ಪ್ರಯತ್ನದ ನಂತರ ಅಕ್ಟೋಬರ್ 28ರ ವೇಳೆಗೆ ಆತನಿಗೆ ಜಾಮೀನು ಸಿಕ್ಕಿತ್ತು.
ಜಾಮೀನು ಸಿಕ್ಕಿದ ನಂತರವೂ ಆತನ ವಿರುದ್ಧ ತನಿಖೆ ಮುಂದುವರೆದಿತ್ತು. ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಸಿಬಿಯ ಎಸ್‌ಐಟಿ 90 ದಿನಗಳ ಕಾಲಾವಕಾಶ ಕೋರಿತ್ತು. ಅದರಂತೆ ಇಂದು ಎನ್‌ಸಿಬಿ ಅಂತಿಮ ವರದಿಯನ್ನು ಸಲ್ಲಿಸಿದೆ.
ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಎನ್‌ಸಿಬಿ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಆರ್ಯನ್ ಖಾನ್ ಸೇರಿ 14 ಮಂದಿಯನ್ನು ಬಂಧಿಸಲಾಗಿತ್ತು. ದಾಳಿ ವೇಳೆ ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು 1.33 ಲಕ್ಷ ರೂ. ನಗದನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು. ಮುಂಬೈ ಡ್ರಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಆರ್ಯನ್ ಖಾನ್ 25 ದಿನಕ್ಕೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದರು. ಬಳಿಕ ಆತನಿಗೆ ಜಾಮೀನು ಸಿಕ್ಕಿತ್ತು.
ದಾಳಿ ವೇಳೆ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ನ ಭಾಗವಾಗಿದ್ದರು ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಎಸಿಬಿ ವರದಿ ಸಲ್ಲಿಸಿದೆ. ಹೀಗಾಗಿ ಆರ್ಯನ್ ಖಾನ್ ಈ ಪ್ರಕರಣದಲ್ಲಿ ನಿರ್ದೋಷಿ ಎಂದು ಎನ್‌ಸಿಬಿ ಘೋಷಿಸಿದೆ.
Shah Rukh Khan and Gauri Khan’s son Aryan Khan was arrested by the Narcotics Control Bureau along with his friend Arbaaz Merchant and model Munmun Dhamecha in relation to the Cordelia cruise drug case. The case had stirred a huge controversy and Khan was later granted bail by the Bombay High Court and he walked out of jail on October 30, 2021. It has now been reported that NCB has given a clean chit to Aryan Khan.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm