ನದಿಗೆ ಬಿದ್ದ ಸೇನಾ ವಾಹನ ; ಏಳು ಮಂದಿ ಯೋಧರು ಹುತಾತ್ಮ 

27-05-22 05:37 pm       HK News Desk   ದೇಶ - ವಿದೇಶ

ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ.

ಜಮ್ಮು-ಕಾಶ್ಮೀರ, ಮೆ 27: ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ.

26 ಯೋಧರಿದ್ದ ಸೇನಾ ವಾಹನವು ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಹುತಾತ್ಮರಾಗಿದ್ದಾರೆ.

7 Army Jawans Killed In Ladakh Road Accident

Ladakh: 7 Army men dead, several injured in accident after their vehicle  falls into Shyok river - The Economic Times Video | ET Now

ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

An army vehicle has met with an accident in the Turtuk sector of Ladakh. There were 26 soldiers in it. Seven of these have lost their lives. Others have also suffered serious injuries. The vehicle slipped off the road and fell into the Shyok river. Due to this, the jawans sitting in the vehicle were seriously injured. This group of soldiers was moving towards the forward front of Sub Sector Hanif from the transit camp of Partapur.