ಬ್ರೇಕಿಂಗ್ ನ್ಯೂಸ್
28-05-22 09:44 pm HK News Desk ದೇಶ - ವಿದೇಶ
ಜೈಪುರ, ಮೇ 28: ಮೂವರು ಸೋದರಿಯರು ಮತ್ತು ಇಬ್ಬರು ಪುಟಾಣಿ ಮಕ್ಕಳು ಬಾವಿಯಲ್ಲಿ ದುರಂತ ಸಾವು ಕಂಡ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು ಅವರನ್ನು ಗಂಡನ ಮನೆಯವರೇ ಕೊಂದು ಬಾವಿಗೆ ಎಸೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕಾಳು ದೇವಿ(27), ಮಮತಾ(23), ಕಮಲೇಶ್(20) ಮೂವರು ಸೋದರಿಯರಾಗಿದ್ದು, ಅವರನ್ನು ಕಿರಿಯವಳಿಗೆ ಒಂದು ವರ್ಷ ಇರುವಾಗಲೇ ಹೆತ್ತವರು ಬಾಲ್ಯ ವಿವಾಹ ಮಾಡಿಸಿದ್ದರು. ಅದರಂತೆ, ದೊಡ್ಡವರಾದ ಬಳಿಕ ಒಂದೇ ಕುಟುಂಬದ ಮೂವರು ಸೋದರರು ಬಾಲ್ಯವಿವಾಹದ ಉದ್ಧಟತನದಿಂದ ಮನೆಗೇ ಬಂದು ತೀಟೆ ತೀರಿಸುತ್ತಿದ್ದರು ಎನ್ನಲಾಗಿದೆ. ದೊಡ್ಡಾಕೆ ಕಾಳು ದೇವಿಗೆ ನಾಲ್ಕು ವರ್ಷದ ಮಗ ಮತ್ತು 27 ದಿನದ ಇನ್ನೊಂದು ಮಗು ಇತ್ತು. ಇನ್ನಿಬ್ಬರು ಮಮತಾ ಮತ್ತು ಕಮಲೇಶ್ ತುಂಬು ಗರ್ಭಿಣಿಯರಾಗಿದ್ದರು. ಕಾಳು ದೇವಿ ತಿಂಗಳ ಹಿಂದಷ್ಟೆ ಮಗುವಿಗೆ ಜನ್ಮ ಕೊಟ್ಟಿದ್ದಳು.
ನಾಲ್ಕು ದಿನಗಳ ಹಿಂದೆ ಮೂವರು ಸೋದರಿಯರು ಮತ್ತು ಮಕ್ಕಳು ಕಾಣೆಯಾಗಿದ್ದರು. ಪೊಲೀಸರಿಗೂ ದೂರು ಕೊಡಲಾಗಿತ್ತು. ಆದರೆ, ಪೊಲೀಸರು ಹುಡುಕಾಟ ನಡೆಸಿರಲಿಲ್ಲ. ಇದೀಗ ಮನೆ ಪಕ್ಕದ ಬಾವಿಯಲ್ಲಿ ಮೂವರು ಸೋದರಿಯರು ಮತ್ತು ಇಬ್ಬರು ಮಕ್ಕಳು ದುರಂತ ಸಾವು ಕಂಡ ರೀತಿ ಪತ್ತೆಯಾಗಿದ್ದಾರೆ. ಮೂವರಿಗೂ ಗಂಡಂದಿರು ಕುಡಿದು ಬಂದು ಹೊಡೆಯುತ್ತಿದ್ದರು. ಕಾಳು ದೇವಿಗೆ ಇದೇ ರೀತಿ ಹೊಡೆದು ಕಣ್ಣಿಗೆ ಪೆಟ್ಟಾಗಿ 15 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದಳು. ಮೂವರು ಕೂಡ ತಮ್ಮ ಮನೆಯಲ್ಲೇ ಇದ್ದರೂ, ಗಂಡಂದಿರು ಅಲ್ಲಿಗೆ ಬಂದು ತಮ್ಮ ಪತ್ನಿಯರೆಂದು ಕಿರುಕುಳ ಕೊಡುತ್ತಿದ್ದರು.
ಮೂವರೂ ಹೆಣ್ಣು ಮಕ್ಕಳಾಗಿದ್ದರಿಂದ ಹೆತ್ತವರಿಗೆ ಹೆಣ್ಮಕ್ಕಳು ಎಂಬ ತಾತ್ಸಾರ ಇತ್ತು. ಆದರೆ, ಮೂವರು ಸೋದರಿಯರು ತಮ್ಮ ಬಾಲ್ಯವಿವಾಹ ತಿಳಿದಿದ್ದರೂ ಬಡತನದ ನಡುವೆ ಕಷ್ಟಪಟ್ಟು ಕಲಿಯುತ್ತಿದ್ದರು. ತಾವೇ ತಮ್ಮ ದುಡಿಮೆ ಮಾಡಿಕೊಳ್ಳಬೇಕೆಂದು ಶಿಕ್ಷಣ ಪಡೆದಿದ್ದು ಮಮತಾ ಇತ್ತೀಚೆಗೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಬರೆದು ಪಾಸ್ ಆಗಿದ್ದಳು. ಕಾಳು ದೇವಿ ಬಿಎ ಪದವಿ ಅಂತಿಮ ವರ್ಷ ಪೂರೈಸುತ್ತಿದ್ದಳು. ಇನ್ನೊಬ್ಬಳು ಕಮಲೇಶ್, ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪದವಿ ಎಂಟ್ರಿ ಪಡೆದಿದ್ದಳು. ಶನಿವಾರ ಮಧ್ಯಾಹ್ನ ಮೂವರು ಸೋದರಿಯರ ಶವಗಳನ್ನು ಮನೆ ಬಳಿಯ ಬಾವಿಯಿಂದ ಮೇಲೆತ್ತಲಾಗಿದೆ. ಘಟನೆ ಸಂಬಂಧಿಸಿ ಮೂವರು ಸೋದರರಾದ ನಾರ್ಸಿ, ಗೋರ್ಯೋ, ಮುಕೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋದರಿಯರು ತಾವಾಗೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ, ಆರೋಪಿಗಳು ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ಸಾಯಿಸಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಮೂವರು ಕೂಡ ಪ್ರಾಥಮಿಕ ಶಾಲೆಯಷ್ಟೇ ಓದಿದ್ದರು. ಹುಡುಗಿಯರು ತಮ್ಮ ಬಾಲ್ಯ ವಿವಾಹದ ಬಗ್ಗೆ ತಿಳಿದರೂ ಕಷ್ಟಪಟ್ಟು ಓದುತ್ತಿದ್ದರು. ಆದರೆ ಬಾಲ್ಯವಿವಾಹ ಪದ್ಧತಿಯ ಭೀಕರ ಪರಿಣಾಮ ಅವರ ಮೇಲಾಗಿದ್ದು ಮೂವರು ಸೋದರರು ಹುಡುಗಿಯರ ಮನೆಗೇ ಬಂದು ಉದ್ಧಟತನ ಮೆರೆಯುತ್ತಿದ್ದರು. ಈಗ ಮೂವರು ಸೋದರಿಯರು ಕೂಡ ತಮ್ಮ ತುಂಬು ಗರ್ಭದಲ್ಲೇ ದುರಂತ ಸಾವು ಕಂಡಿದ್ದಾರೆ.
The bodies of three women and two children were found in a well in Jaipur district’s Dudu town on Saturday. The murdered women, who were siblings, were identified as Kalu Devi, Mamta, and Kamlesh. The two kids one aged four and the other just 27 days were Kalu Devi’s children.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm