ಬ್ರೇಕಿಂಗ್ ನ್ಯೂಸ್
29-05-22 05:36 pm HK News Desk ದೇಶ - ವಿದೇಶ
ಕಠ್ಮಂಡು, ಮೇ 29 : ಭಾರತದ ನಾಲ್ವರು ಸೇರಿದಂತೆ 22 ಮಂದಿಯನ್ನು ಕರೆದೊಯ್ಯುತ್ತಿದ್ದಾಗ ನಾಪತ್ತೆಯಾಗಿದ್ದ ಖಾಸಗಿ ವಿಮಾನಯಾನ ಸಂಸ್ಥೆಯ ಪುಟ್ಟ ವಿಮಾನ, ಭಾನುವಾರ ಐದು ಗಂಟೆಗಳ ಬಳಿಕ ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಲ್ಲ ಪ್ರಯಾಣಿಕರೂ ಬದುಕುಳಿದಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ದಿ ತಾರಾ ಏರ್ ಸಂಸ್ಥೆಯ ವಿಮಾನವು ಪ್ರವಾಸಿ ತಾಣ ಪೊಖಾರಾದಿಂದ ಬೆಳಿಗ್ಗೆ 9.55ರ ಸುಮಾರಿಗೆ ಹೊರಟಿತ್ತು. ಹಾರಾಟ ಆರಂಭಿಸಿದ 15 ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿತ್ತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ನೇಪಾಳದ ಕುವಾಂಗ್ ಗ್ರಾಮದ ಲೆಟೆ ಪರ್ವತ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ.
"ನೇಪಾಳ ಸೇನೆಗೆ ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಟಾರಾ ಏರ್ ವಿಮಾನವು ಮನಪತಿ ಹಿಮಾಲ್ ಪರ್ವತದ ಕೆಳಭಾಗದಲ್ಲಿನ ಲಮ್ಚೆ ನದಿಯ ಬದಿಯಲ್ಲಿ ಅಪಘಾತಕ್ಕೀಡಾಗಿದೆ. ನೇಪಾಳ ಸೇನೆಯು ಘಟನೆ ನಡೆದ ಸ್ಥಳಕ್ಕೆ ವಾಯು ಮಾರ್ಗದಲ್ಲಿ ತೆರಳುತ್ತಿದೆ" ಎಂದು ನೇಪಾಳ ಸೇನೆ ವಕ್ತಾರ ನಾರಾಯಣ್ ಸಿಲ್ವಾಲ್ ತಿಳಿಸಿದ್ದಾರೆ.
ಭಾರತದ ನಾಲ್ವರಲ್ಲದೆ, 9N-AET ಟ್ವಿನ್ ಒಟ್ಟೆರ್ ವಿಮಾನವು ಇಬ್ಬರು ಜರ್ಮನ್ನರು, 13 ನೇಪಾಳಿಗಳು ಮತ್ತು ಮೂವರು ಸಿಬ್ಬಂದಿಯನ್ನು ಕರೆದೊಯ್ಯುತ್ತಿತ್ತು.
ವಿಮಾನವು ಪಶ್ಚಿಮದ ಪರ್ವತ ಪ್ರದೇಶದಲ್ಲಿನ ಜಾಮ್ಸೊಮ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 10.15ಕ್ಕೆ ತಲುಪಬೇಕಿತ್ತು. ಆದರೆ, ಹಾರಾಟ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ಅದು ಪೊಖಾರಾ- ಜಾಮ್ಸೊಮ್ ವಾಯು ಮಾರ್ಗದ ಘೋರೆಪಾನಿ ಎಂಬಲ್ಲಿನ ಪ್ರದೇಶದ ಟವರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು. ಜಾಮ್ಸೊಮ್‌ನ ಘಾಸಾ ಬಳಿ ಭಾರಿ ಸದ್ದು ಕೇಳಿಸಿದ್ದಾಗಿ ಅನೇಕರು ಹೇಳಿದ್ದಾರೆ. ಆದರೆ ಜಾಮ್ಸೊಮ್ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರು ಅದನ್ನು ಖಚಿತಪಡಿಸಿಲ್ಲ.
ಕಾಣೆಯಾದ ವಿಮಾನವನ್ನು ಹುಡುಕಲು ಮುಸ್ತಾಂಗ್ ಮತ್ತು ಪೊಖಾರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನೇಪಾಳ ಸರ್ಕಾರ ನಿಯೋಜಿಸಿತ್ತು. ಭೂ ಮಾರ್ಗದ ಮೂಲಕ ಹುಡುಕಾಟ ನಡೆಸಲು ನೇಪಾಳ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ತೆರಳಿದ್ದರು.
ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನದಲ್ಲಿದ್ದ ಭಾರತೀಯ ಪ್ರಯಾಣಿಕರ ಕುಟುಂಬದವರ ಜತೆ ಸಂಪರ್ಕದಲ್ಲಿರುವುದಾಗಿ ಕಠ್ಮಂಡುವಿನಲ್ಲಿನ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು +977-9851107021 ತುರ್ತು ಹಾಟ್‌ಲೈನ್ ಸಂಖ್ಯೆಯನ್ನು ನೀಡಿದೆ.
Ashok Kumar Tripathi, Dhanush Tripathi, Ritika Tripathi and Vaibhawi Tripathi - four members of a family from Mumbai - are among 22 people onboard a small plane the Twin Otter 9N-AET belonging to Nepal's Tara Air that went missing on Sunday in the mountainous region of the Himalayan nation minutes after taking off from the tourist city of Pokhara and later was found at Kowang in Mustang, reports suggest.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm