ಬ್ರೇಕಿಂಗ್ ನ್ಯೂಸ್
29-05-22 06:18 pm HK News Desk ದೇಶ - ವಿದೇಶ
ಹರ್ಯಾಣ, ಮೇ 29 : ತಮ್ಮ ಮಕ್ಕಳು ಗೂಂಡಾಗಳು, ಗಲಭೆಕೋರರು ಮತ್ತು ಅತ್ಯಾಚಾರಿಗಳಾಗಲಿ ಎಂದು ಬಯಸುವವರು ಅವರನ್ನು ಬಿಜೆಪಿಗೆ ಕಳುಹಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
2024ರ ಹರ್ಯಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದ ಎಎಪಿ ಮುಖ್ಯಸ್ಥ ಕೇಜ್ರಿವಾಲ್, ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕುರುಕ್ಷೇತ್ರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್, ದಿಲ್ಲಿಯಲ್ಲಿರುವ ಎಎಪಿ ಸರ್ಕಾರವು ಸರ್ಕಾರಿ ಶಾಲೆಗಳನ್ನು ಪರಿವರ್ತನೆ ಮಾಡಿದೆ. ಸರ್ಕಾರಿ ಶಾಲೆಗಳ ಮಕ್ಕಳು ಈಗ ತಮ್ಮ ಎದುರಾಳಿ ಖಾಸಗಿ ಶಾಲೆಗಳಿಗೆ ಸಮನಾಗಿ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
"ದಿಲ್ಲಿ ಸರ್ಕಾರದ ಶಾಲೆಗಳಿಗೆ ಸೇರುವುದಕ್ಕಾಗಿ ಈ ವರ್ಷ ಸುಮಾರು 4 ಲಕ್ಷ ಮಕ್ಕಳು ಖಾಸಗಿ ಶಾಲೆಗಳನ್ನು ತೊರೆದಿದ್ದಾರೆ. ದಿಲ್ಲಿ ಸರ್ಕಾರದ 400 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ" ಎಂದು ತಿಳಿಸಿದರು.
"ನಾನು ಬಹಳ ಸರಳ ವ್ಯಕ್ತಿ. ನನಗೆ ರಾಜಕೀಯ ಗೊತ್ತಿಲ್ಲ. ನಾನು ದಿಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ತಂದೆ. ಶಾಳೆಗಳು ಈ ಬಾರಿ ಶೇ 99.7ರಷ್ಟು ಫಲಿತಾಂಶಕ್ಕೆ ತಲುಪಿದೆ. ದಿಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ಮೆಲಾನಿಯಾ ಟ್ರಂಪ್ (ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ) ಭೇಟಿ ನೀಡಲು ಬಂದಿದ್ದರು. ಮನೋಹರ್ ಲಾಲ್ ಖಟ್ಟರ್ (ಹರ್ಯಾಣ ಸಿಎಂ) ಸರ್ಕಾರದ ಶಾಲೆ ನೋಡಲು ಯಾರು ಬಂದಿದ್ದಾರೆ?" ಎಂದು ಟೀಕಿಸಿದರು.
"ಅವರು ನಿಮ್ಮ ಮಕ್ಕಳಿಗೆ ಯಾವುದೇ ಕೆಲಸ ನೀಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಪಕ್ಷಕ್ಕೆ ನಿರುದ್ಯೋಗಿ ಗೂಂಡಾಗಳು ಬೇಕಿದ್ದಾರೆ. ಅವರು ನಿಮ್ಮ ಮಕ್ಕಳಿಗೆ ಗಲಭೆ ಮಾಡುವುದನ್ನು ಕಲಿಸುತ್ತಾರೆ ಮತ್ತು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ" ಎಂದು ಆರೋಪಿಸಿದರು.
ಹರ್ಯಾಣದಲ್ಲಿ ಎಎಪಿಗೆ ಅಧಿಕಾರ ನೀಡಿದರೆ ಉಚಿತ ಆರೋಗ್ಯ ಸೌಲಭ್ಯ ಮತ್ತು ವಿದ್ಯುತ್ ಒದಗಿಸಲಾಗುವುದು. ಜತೆಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದ ಅವರು, ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಬದಲಿಸಲಾಗುತ್ತದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿದರು. "ಏಕೆ? ಖಟ್ಟರ್ ಸಾಹೇಬರು ಭ್ರಷ್ಟರೇ? ಅವರು ಕೆಲಸ ಮಾಡುತ್ತಿಲ್ಲವೇ? 2024ರ ಚುನಾವಣೆಗೆ ಖಟ್ಟರ್ ಅವರ ಹೆಸರಿನಲ್ಲಿ ಹೋಗಲು ಬಿಜೆಪಿಗೆ ಧೈರ್ಯವಿಲ್ಲವೇ?" ಎಂದು ಲೇವಡಿ ಮಾಡಿದರು.
"If you want to make your children goons, rioters, and rapists, send them to Bharatiya Janata Party (BJP)," Delhi Chief Minister and Aam Aadmi Party (AAP) national convenor Arvind Kejriwal said on Sunday, 29 May, at a rally in Haryana's Kurukshetra.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 07:15 pm
Mangalore Correspondent
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
Paakashala Resturant, Mangalore: ಮಂಗಳೂರಿನಲ್ಲು...
05-05-25 11:22 am
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm