ಹಣ ವರ್ಗಾವಣೆ ಪ್ರಕರಣ ;  ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿಯ ನ್ಯಾಯಾಲಯ ಡಿಕೆಶಿಗೆ ಸಮನ್ಸ್

31-05-22 07:21 pm       HK News Desk   ದೇಶ - ವಿದೇಶ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ನವದೆಹಲಿ, ಮೆ 31: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಡಿಯಿಂದ ಆರೋಪ ಪಟ್ಟಿ ದಾಖಲಾದ ಬೆನ್ನಲ್ಲೇ, 2018 ರಲ್ಲಿ ಡಿಕೆಶಿ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ಡಿಕೆ ಶಿವಕುಮಾರ್ ಮತ್ತಿತರರಿಗೆ ಸಮನ್ಸ್ ನೀಡಿದೆ.

ಜುಲೈ 1 ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ವಿಕಾಸ್ ಧುಲೆ ಡಿಕೆ ಶಿವಕುಮಾರ್ ಅವರಿಗೆ ನಿರ್ದೇಶಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತಿತರರ ವಿರುದ್ಧ ವಿಶೇಷ ಪ್ರಾಸಿಕ್ಯೂಟರ್ ನಿತೇಶ್ ರಾಣಾ ಅವರ ಮೂಲಕ ಇಡಿ ಸಲ್ಲಿಸಿದ ಜಾರ್ಜ್ ಶೀಟ್ ನ್ನು ಪರಿಗಣಿಸಿದ ನಂತರ ಕೋರ್ಟ್ ಈ ಆದೇಶ ನೀಡಿದೆ.

File:High Court of Karnataka, Bangalore MMK.jpg - Wikipedia

ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಈ ಹಿಂದೆ 2019, ಸೆಪ್ಟೆಂಬರ್ ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿತ್ತು. ನಂತರ 2019, ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 

Income Tax Department - Wikipedia

ಸಾವಿರಾರು ಕೋಟಿ ರೂಪಾಯಿ ಮೊತ್ತದ ಹವಾಲಾ ವ್ಯವಹಾರ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವೊಂದರಲ್ಲಿ ಕಳೆದ ವರ್ಷ ತೆರಿಗೆ ಇಲಾಖೆ ಡಿಕೆ ಶಿವಕುಮಾರ್ ವಿರುದ್ಧ ದಾಖಲಿಸಿದ್ದ ಜಾರ್ಜ್ ಶೀಟ್ ನ್ನು ಈ ಕೇಸ್ ಆಧರಿಸಿದೆ ಎಂದು ಮೂಲಗಳು ಹೇಳಿವೆ.

A Delhi court has summoned Karnataka Congress chief DK Shivakumar in a money laundering case on July 1. Earlier, the Enforcement Directorate had filed a chargesheet against DK Shivakumar and others under various sections of the Prevention of Money Laundering Act (PMLA) before a Delhi court on May 26 Taking to Twitter, Shivakumar had said, "Government agencies are filing cases against me just because I’m not joining BJP."