ದೇಶದ ಗಡಿಮೀರಿದ ಫೇಸ್ಬುಕ್ ಪ್ರೀತಿ, ನದಿಯನ್ನು ಈಜಿಕೊಂಡೇ ಭಾರತಕ್ಕೆ ಬಂದ ಬಾಂಗ್ಲಾ ಯುವತಿ, ಪ್ರಿಯಕರನ ವರಿಸುತ್ತಲೇ ಪೊಲೀಸ್ ಬಲೆಗೆ

01-06-22 02:23 pm       HK News Desk   ದೇಶ - ವಿದೇಶ

ಫೇಸ್ಬುಕ್ ಪ್ರೀತಿಗೆ ಬಲಿಬಿದ್ದ ಬಾಂಗ್ಲಾದ ಯುವತಿಯೊಬ್ಬಳು ಭಾರತ ಗಡಿಯಲ್ಲಿದ್ದ ಪ್ರಿಯಕರನನ್ನು ವರಿಸಲು ನಡುವೆ ಅಡ್ಡಲಾಗಿದ್ದ ನದಿಯನ್ನೇ ಈಜಿಕೊಂಡು ಬಂದಿದ್ದಾಳೆ.

ಕೊಲ್ಕತ್ತಾ, ಜೂನ್ 1: ಫೇಸ್ಬುಕ್ ಪ್ರೀತಿಗೆ ಬಲಿಬಿದ್ದ ಬಾಂಗ್ಲಾದ ಯುವತಿಯೊಬ್ಬಳು ಭಾರತ ಗಡಿಯಲ್ಲಿದ್ದ ಪ್ರಿಯಕರನನ್ನು ವರಿಸಲು ನಡುವೆ ಅಡ್ಡಲಾಗಿದ್ದ ನದಿಯನ್ನೇ ಈಜಿಕೊಂಡು ಬಂದಿದ್ದಾಳೆ. ಆನಂತರ, ಗಡಿ ದಾಟಿ ಬರುತ್ತಲೇ ಕಾಳಿ ಮಂದಿರದಲ್ಲಿ ಯುವಕನ ವರಿಸಿದ್ದಾಳೆ.

ಬಾಂಗ್ಲಾ ದೇಶದ ನಿವಾಸಿ ಕೃಷ್ಣಾ ಮೊಂಡಲ್ ಮತ್ತು ಪಶ್ಚಿಮ ಬಂಗಾಳದ ಅಭಿಕ್ ಮೊಂಡಲ್ ಫೇಸ್ಬುಕ್ ನಲ್ಲಿ ಸ್ನೇಹಿತರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಆಕೆ ಅಲ್ಲಿನ ದೇಶ ಬಿಟ್ಟು ಬರುವಂತಿಲ್ಲ. ಒಮ್ಮೆಗೆ ಬಂದು ಹೋಗಬೇಕಿದ್ದರೆ ಪಾಸ್ಪೋರ್ಟ್ ಬೇಕಿತ್ತು. ಇತ್ತ ಯುವಕನಲ್ಲಿಯೂ ಪಾಸ್ಪೋರ್ಟ್ ಇರಲಿಲ್ಲ. ಮದುವೆಗೆ ತರಾತುರಿಯಲ್ಲಿದ್ದ ಹುಡುಗನನ್ನು ವರಿಸಲು ಹುಡುಗಿ ಒಬ್ಬಂಟಿಯಾಗಿಯೇ ನಡೆದುಕೊಂಡು ಬಂದಿದ್ದಳು. ಅಂತಾರಾಷ್ಟ್ರೀಯ ಗಡಿ ರೇಖೆಯ ಬದಲು ಒಳದಾರಿಯಿಂದ ಬಂದು ಸುಂದರ್ ಬನ್ ಕಾಡನ್ನು ಪ್ರವೇಶ ಮಾಡಿದ್ದಾಳೆ.

ಸುಂದರ್ ಬನ್ ಅನ್ನುವುದು ಭಾರತದಲ್ಲಿಯೇ ಬೆಂಗಾಲಿ ಹುಲಿಗಳಿಗೆ ಅತ್ಯಂತ ಫೇಮಸ್ ಆಗಿರುವ ಪ್ರದೇಶ. ಗೊಂಡಾರಣ್ಯದ ನಡುವೆ ಬೃಹತ್ತಾಗಿ ಬ್ರಹ್ಮಪುತ್ರಾದ ಉಪನದಿ ಪಾಲ್ತಾ ಹರಿಯುತ್ತದೆ. ಮೊದಲಿಗೆ ಅರಣ್ಯವನ್ನು ದಾಟಿಕೊಂಡು ಬಂದ 22 ವರ್ಷದ ಹುಡುಗಿ ಆಬಳಿಕ ನಡುವೆ ಇದ್ದ ನದಿಯನ್ನೂ ಒಂದು ಗಂಟೆ ಕಾಲ ಈಜಿಕೊಂಡೇ ಬಂದು ಭಾರತದ ಗಡಿ ಸೇರಿದ್ದಾಳೆ. ಆನಂತರ ಒಬ್ಬಂಟಿಯಾಗಿಯೇ ಬಾಂಗ್ಲಾ ಗಡಿಭಾಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಕೈಕಾಲಿ ಎನ್ನುವ ಗ್ರಾಮ ಸೇರಿದ್ದಾಳೆ. ನರೇಂದ್ರಪುರ್ ಜಿಲ್ಲೆಯ ರಾಣಿಯಾ ಗ್ರಾಮದ ನಿವಾಸಿ ಅಭಿಕ್ ಅಲ್ಲಿ ಎದುರಾಗಿದ್ದು, ಕೂಡಲೇ ಕಾರಿನಲ್ಲಿ ಕೊಲ್ಕತ್ತಾಕ್ಕೆ ಬಂದಿದ್ದಾರೆ. ಅಲ್ಲಿನ ಕಾಳಿ ಮಂದಿರದಲ್ಲಿ ತರಾತುರಿಯಲ್ಲಿ ಮದುವೆಯನ್ನೂ ಆಗಿದ್ದಾರೆ. ಅದಾಗಿ ಮೂರು ದಿನಗಳಲ್ಲಿ ಯುವತಿಯ ಧೈರ್ಯ, ದಿಟ್ಟತನ ಇಡೀ ಗ್ರಾಮದಲ್ಲಿ ಸುದ್ದಿಯಾಗಿದೆ. ಜನರು ಕೂಡ ಯುವತಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಾಗುತ್ತಲೇ ವಿಷಯ ಪೊಲೀಸರಿಗೂ ತಲುಪಿದ್ದು ರಾಣಿಯಾ ಗ್ರಾಮಕ್ಕೆ ದಾಳಿ ಮಾಡಿ ಬಾಂಗ್ಲಾ ಯುವತಿ ಕೃಷ್ಣಾ ಮೊಂಡಲ್ ನನ್ನು ವಶಕ್ಕೆ ಪಡೆದಿದ್ದಾರೆ.

ಫೇಸ್ಬುಕ್ ಪ್ರೀತಿಗೆ ಬಿದ್ದ ಯುವತಿ ಕೃಷ್ಣಾ, ತನ್ನ ಪ್ರಿಯಕರನೇ ಬೇಕೆಂದು ಸಾವಿಗೂ ಅಂಜದೆ ಅರಣ್ಯ, ನದಿಯನ್ನು ದಾಟಿಕೊಂಡು ಭಾರತಕ್ಕೆ ಬಂದಿದ್ದಳು. ಆದರೆ ಅಕ್ರಮವಾಗಿ ನುಸುಳಿ ಬಂದ ಕಾರಣ ಪೊಲೀಸರ ಅತಿಥಿಯಾಗಿದ್ದಾಳೆ. ಪೊಲೀಸರು ಯುವತಿಯನ್ನು ಬಾಂಗ್ಲಾ ಹೈಕಮಿಶನ್ ವಶಕ್ಕೆ ಒಪ್ಪಿಸಲಿದ್ದಾರೆ. 

A 22-year-old Bangladeshi woman swam across the border across the Sunderbans to marry her boyfriend from West Bengal, India. Krishna Mandal, 22, crossed the Indo-Bangladeshi border to meet her Facebook boyfriend Abhik Mandal out of the love that bloomed online. The two decided to marry each other. However, as Abhik Mandal did not have a passport or any means to reach Bangladesh, it was Krishna Mandal who chose to cross the border illegally. Krishna started off by walking alone through the Sundarbans.