ಕೆಕೆ ಸಾವಿಗೆ ಹೃದಯಸ್ತಂಭನವೇ ಕಾರಣ ; ಪ್ರಾಥಮಿಕ ವರದಿ 

02-06-22 11:09 am       HK News Desk   ದೇಶ - ವಿದೇಶ

ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಮೇ.31 ರಂದು ನಿಧನರಾಗಿದ್ದು ಅವರ ಮರಣೋತ್ತರ ವರದಿ ಈಗ ಬಹಿರಂಗವಾಗಿದೆ.

ಕೋಲ್ಕತ್ತ, ಜೂ 02: ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಮೇ.31 ರಂದು ನಿಧನರಾಗಿದ್ದು ಅವರ ಮರಣೋತ್ತರ ವರದಿ ಈಗ ಬಹಿರಂಗವಾಗಿದೆ.
 
ಪ್ರಾಥಮಿಕ ವರದಿಯ ಪ್ರಕಾರ ಕೆಕೆ ತೀವ್ರವಾದ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೋಲ್ಕತ್ತಾದ ಎಸ್ಎಸ್ ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವರೆಗೂ ಲಭ್ಯವಾಗಿರುವ ಮಾಹಿತಿಯ ಪ್ರಕಾರ,  ಕೆಕೆಗೆ ತೀವ್ರವಾದ ಲಿವರ್ ಹಾಗೂ ಶ್ವಾಸಕೋಶದ ಸಮಸ್ಯೆ ಇತ್ತು. 

ರವೀಂದ್ರ ಸದನದಲ್ಲಿ ಕೆಕೆ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಿಎಂ ಮಮತಾ ಬ್ಯಾನರ್ಜಿ ಅಂತಿಮ ದರ್ಶನ ಪಡೆದರು. ಜೂ.02 ರಂದು ಮುಂಬೈ ನಲ್ಲಿ ಕೆಕೆ ಅಂತ್ಯಕ್ರಿಯೆ ನಡೆಯಲಿದೆ.

ಕೋಲ್ಕತ್ತದ ಎರಡು ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಕೃಷ್ಣಕುಮಾರ್‌ ಕುನ್ನತ್‌ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಕೆಕೆ ಅವರದ್ದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

Singer Krishnakumar Kunnath, known by his stage name KK, passed away on May 31 at the age of 53. The singer fell ill while performing at an event in Kolkata and was brought to the CMRI hospital, where he was declared dead.