ಬ್ರೇಕಿಂಗ್ ನ್ಯೂಸ್
07-06-22 04:54 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 7: ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆಯಿಂದಾಗಿ ಮುಸ್ಲಿಂ ರಾಷ್ಟ್ರಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಇಸ್ಲಾಂ ಉಗ್ರವಾದಿ ಸಂಘಟನೆಯೊಂದು ಜೀವ ಬೆದರಿಕೆ ಹಾಕಿದ್ದು, ದೆಹಲಿ ಪೊಲೀಸರು ಆಕೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.
ನೂಪುರ್ ಶರ್ಮಾ ತನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳುವುದರ ಜೊತೆಗೆ ಜಗತ್ತಿನ ಮುಸ್ಲಿಮರಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಪ್ರವಾದಿಯನ್ನು ನಿಂದಿಸಿದವರಿಗೆ ಏನು ಶಿಕ್ಷೆ ಕೊಡುತ್ತೇವೋ ಅದನ್ನು ಮಾಡುತ್ತೇವೆ ಎಂದು ಮುಜಾಹಿದೀನ್ ಗಜ್ವಾತುಲ್ ಹಿಂದ್ ಎನ್ನುವ ಉಗ್ರವಾದಿ ಸಂಘಟನೆ ಹೇಳಿಕೆಯಲ್ಲಿ ಬೆದರಿಕೆ ಹಾಕಿದೆ.

ಈ ಉಗ್ರವಾದಿ ಸಂಘಟನೆಯ ಸದಸ್ಯರು ಜಮ್ಮು ಕಾಶ್ಮೀರದಲ್ಲಿ ಸಕ್ರಿಯ ಆಗಿದ್ದಾರೆ ಎನ್ನಲಾಗುತ್ತಿದ್ದು ಕಳೆದ ಜನವರಿಯಲ್ಲಿ ದೆಹಲಿಯ ಗಾಜಿಪುರ್ ಹೂವಿನ ಮಾರ್ಕೆಟ್ ನಲ್ಲಿ ಐಇಡಿ ಸ್ಫೋಟ ಪ್ರಕರಣದಲ್ಲಿ ಈ ಸಂಘಟನೆಯ ಕೈವಾಡ ಕಂಡುಬಂದಿತ್ತು. ಇದೀಗ ನೂಪುರ್ ಶರ್ಮಾ ತನ್ನ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದರೂ, ಆಕೆಯ ವಿರುದ್ಧ ಬೆದರಿಕೆ ಹಾಕಿದೆ. ನೂಪುರ್ ಶರ್ಮಾ ಈ ಮೊದಲು ಇನ್ಸಲ್ಟ್ ಮಾಡಿದ್ರು, ಈಗ ಕ್ಷಮೆ ಕೋರಿದ್ರು. ಆದರೆ ಇದು ಬಿಜೆಪಿಯ ಚಾಣಕ್ಯ ನೀತಿಯಾಗಿದ್ದು, ದ್ವಂದ್ವ ನಡೆಯಾಗಿರುತ್ತದೆ. ಬಿಜೆಪಿ ನಾಯಕರು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆರೆಸ್ಸೆಸ್, ಬಜರಂಗದಳ, ಶ್ರೀರಾಮ ಸೇನೆ, ಶಿವಸೇನೆ ನಾಯಕರು ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ದ್ವೇಷದ ಭಾಷಣ ಮುಂದುವರಿಸಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತನಗೆ ಬರುತ್ತಿರುವ ಕರೆಗಳು, ಜಾಲತಾಣದಲ್ಲಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ದೆಹಲಿ ಪೊಲೀಸರಿಗೆ ಪ್ರಾಭ ಭಯ ಇದೆಯೆಂದು ದೂರು ನೀಡಿದ್ದು, ಪೊಲೀಸರು ಕುಟುಂಬಕ್ಕೆ ರಕ್ಷಣೆ ನೀಡಿದ್ದಾರೆ. ಇತ್ತೀಚೆಗೆ ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಟಿವಿ ವಾಹಿನಿಯ ಚರ್ಚೆ ಒಂದರಲ್ಲಿ ಶಿವಲಿಂಗವನ್ನು ನೀವು ಅವಹೇಳನ ಮಾಡುವುದಾದರೆ, ಪೈಗಂಬರ್ ಹಿನ್ನೆಲೆಯ ಬಗ್ಗೆ ಪ್ರಶ್ನೆ ಎತ್ತಬೇಕಾಗುತ್ತದೆ ಎಂದು ಹೇಳಿ ಪುಸ್ತಕದಲ್ಲಿದ್ದ ಕೆಲವು ವಿಚಾರಗಳನ್ನು ಓದಿ ಹೇಳಿದ್ದರು. ಈ ವಿಚಾರ ಮುಸ್ಲಿಮ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅದೇ ವಿಚಾರ ಮುಂದಿಟ್ಟು ಜಗತ್ತಿನ 14 ಮುಸ್ಲಿಂ ರಾಷ್ಟ್ರಗಳು ಭಾರತದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಬಗ್ಗೆ ಕಿಡಿಕಾರಿದ್ದವು. ಇದರ ಬೆನ್ನಲ್ಲೇ ಬಿಜೆಪಿ ನೂಪುರ್ ಶರ್ಮಾರನ್ನು ಪಕ್ಷದಿಂದ ಅಮಾನತು ಮಾಡಿತ್ತು.
Terror outfit Mujahideen Ghazwatul Hind has threatened BJP leader Nupur Sharma with dire consequences unless she tenders an unconditional apology for her controversial remarks on Prophet Muhammad.“We instruct Nupur Sharma to take back her statement and apologise to the whole world, otherwise we will do what is done to those who dare to insult the Prophet,” Mujahideen Ghazwatul Hind said in a statement posted on Telegram.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm