ಆಮ್‌ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ ; 1.8 ಕೆಜಿ ಚಿನ್ನ, 2.85 ಕೋಟಿ ರೂ. ನಗದು ಜಪ್ತಿ! 

07-06-22 09:04 pm       HK News Desk   ದೇಶ - ವಿದೇಶ

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಹಾಗೂ ಸಹಚರರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶೋಧ ಕಾರ್ಯ ನಡೆಸಿ, 2.85 ಕೋಟಿ ರೂ. ನಗದು ಹಾಗೂ 1.8 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.

ನವದೆಹಲಿ, ಜೂ 07: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಹಾಗೂ ಸಹಚರರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶೋಧ ಕಾರ್ಯ ನಡೆಸಿ, 2.85 ಕೋಟಿ ರೂ. ನಗದು ಹಾಗೂ 1.8 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.

ಸತ್ಯೇಂದ್ರ ಜೈನ್ ತಮ್ಮ ಪತ್ನಿ, ಪುತ್ರಿಯರು, ಸ್ನೇಹಿತರು ಹಾಗೂ ಸಹಚರರ ಸಹಾಯದಿಂದ 16 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತಿದ್ದಾರೆ. ಮೇ 20 ರಂದು ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು. ಪ್ರಸ್ತುತ ಸತ್ಯೇಂದ್ರ ಜೈನ್ ಇಡಿ ವಶದಲ್ಲಿದ್ದಾರೆ. 

ED director's term set to end, govt looks at legal hurdles to reappointment  | India News,The Indian Express

ED raids premises of Delhi Minister Satyendra Jain, recovers over 2.8 crore  cash, 133 gold coins

ಶೋಧ ಕಾರ್ಯದ ವೇಳೆ ಸಿಕ್ಕಿರುವ 500 ಹಾಗೂ 2,000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಜೋಡಿಸಿ `ಇಡಿ’ ಎಂದು ವಿನ್ಯಾಸಗೊಳಿಸಲಾಗಿದೆ. ನೋಟಿನ ಕಂತೆಗಳಿಂದಲೇ ಇಡಿ ಎಂದು ವಿನ್ಯಾಸಗೊಳಿಸಿ ತೆಗೆದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Why a Revamping of the CBI Is Necessary

2015 ಫೆಬ್ರವರಿಯಿಂದ 2017ರ ಮೇ ತಿಂಗಳಿನ ವರೆಗೆ ದೆಹಲಿ ಸರ್ಕಾರದ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿ, 2018ರಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಇಡಿ, ಸಿಬಿಐ ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಐಪಿಸಿ ಸೆಕ್ಷನ್ 109 ಹಾಗೂ ಸೆಕ್ಷನ್ 13(2)ರ ಅಡಿ ತನಿಖೆ ನಡೆಸುತ್ತಿದೆ. 

ಪ್ರಧಾನಿ ಮೋದಿ ಆಪ್ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ:

PM Narendra Modi to inaugurate 'Iconic Week Celebrations' of Finance,  Corporate Affairs ministries today | India News | Zee News

ಪ್ರಧಾನಿ ನರೇಂದ್ರ ಮೋದಿ ಆಮ್ ಆದ್ಮಿ ಪಕ್ಷ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ, ಪಂಜಾಬಿನಲ್ಲಿನ ಆಪ್ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಆರೋಪಿಸಿದ್ದಾರೆ.

Arvind Kejriwal News: Delhi CM Arvind Kejriwal tests positive for Covid-19  - The Economic Times

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಸತ್ಯೇಂದ್ರ ಜೈನ್ ವಿರುದ್ಧ ಆರೋಪ ಸುಳ್ಳು ಎಂದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಬಲದೊಂದಿಗೆ ಪ್ರಧಾನಿ ಮೋದಿ ಆಪ್ ಪಕ್ಷ ಮತ್ತು ದೆಹಲಿ ಮತ್ತು ಪಂಜಾಬಿನ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ. ಸುಳ್ಳಿನ ನಂತರ ಸುಳ್ಳು, ಸುಳ್ಳಿನ ನಂತರ ಸುಳ್ಳು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ನೀವು( ಪ್ರಧಾನಿ) ಎಲ್ಲಾ ತನಿಖಾ ತಂಡಗಳ ಬಲವನ್ನು ಹೊಂದಿದ್ದೀರಿ ಆದರೆ, ದೇವರು ನಮ್ಮೊಂದಿಗೆ ಇದ್ದಾನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

The Enforcement Directorate (ED) on Monday conducted searches at Delhi Health Minister Satyendar Jain's residence and other locations in the national capital in connection with a money laundering case filed against the minister.