ಹೊಟ್ಟೆ ನೋವೆಂದು ಬಂದವನ ಜಠರದಲ್ಲಿತ್ತು ನೂರು ಗ್ರಾಂ ಪ್ಲಾಸ್ಟಿಕ್, ಮೂರಡಿ ಉದ್ದದ ಪೈಪ್ ! ವೈದ್ಯರಿಗೇ ಅಚ್ಚರಿ 

07-06-22 10:13 pm       HK News Desk   ದೇಶ - ವಿದೇಶ

ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ 100 ಗ್ರಾಂ ಪ್ಲಾಸ್ಟಿಕ್​, 3 ಅಡಿ ಉದ್ದದ ಕಲ್ಮಶಗಳಿಂದ ಕೂಡಿದ ಪೈಪ್​ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. 

ನವದೆಹಲಿ, ಜೂನ್ 7 : ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ 100 ಗ್ರಾಂ ಪ್ಲಾಸ್ಟಿಕ್​, 3 ಅಡಿ ಉದ್ದದ ಕಲ್ಮಶಗಳಿಂದ ಕೂಡಿದ ಪೈಪ್​ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. 

ಬೋಲ್​ಪುರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಏನೋ ತುಂಬಿಕೊಂಡಿದ್ದು ಕಂಡುಬಂದಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೇ ಅಚ್ಚರಿಯಾಗಿದೆ. 100 ಗ್ರಾಂ ಪ್ಲಾಸ್ಟಿಕ್​ ಆತನ ಹೊಟ್ಟೆಯಲ್ಲಿ ಕಂಡುಬಂದಿದೆ. ಇದಲ್ಲದೇ, ಕಲ್ಮಶಗಳಿಂದ ಕೂಡಿದ 3 ಅಡಿ ಉದ್ದ , 3 ಇಂಚು ದಪ್ಪ ಇರುವ ಪೈಪ್​ನಂತಿದ್ದ ವಸ್ತುವನ್ನೂ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ.

ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು 'ನೆಕ್ರೋಟಿಕ್ ಸಿಗ್ಮೋಯ್ಡ್ ವೋಲ್ವೋಲಾಸ್' ಎಂದು ಕರೆಯುತ್ತಾರೆ. ಹೊಟ್ಟೆಯೊಳಗೆ ಗ್ಯಾಸ್ ಫ್ಲೂಯಿಡ್​ನಿಂದ ತುಂಬಿದ 3 ಅಡಿ ಉದ್ದ ಮತ್ತು 6 ಇಂಚು ಅಗಲದ ಪೈಪ್ ಮಾದರಿಯಲ್ಲಿದ್ದ ಕಲ್ಮಶವನ್ನು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೊಟ್ಟೆಗೆ ಇಷ್ಟೊಂದು ಪ್ಲಾಸ್ಟಿಕ್ ಹೋಗಿ ಅದು ಪೈಪ್ ರೀತಿ ಕಟ್ಟಿಕೊಂಡಿದ್ದು ಹೇಗೆ ಎಂಬುದು ತಿಳಿಯುತ್ತಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Bolpur Super Specialty Hospital witnessed rare surgeries. Hira Sheikh, a resident of Ramghanti village in Kurunnahar panchayat of Lavpur. This woman in her fifties had an abnormally swollen abdomen. The woman’s stomach was swollen and there was severe gas in her stomach. Doctors said he was suffering from ‘Gangrenous sigmoid volvulus’. According to the doctors of Bolpur Hospital, one in two lakh people became infected with this rare disease. The woman from Lavpur came to Bolpur Super Specialty Hospital with that rare disease.