ಬ್ರೇಕಿಂಗ್ ನ್ಯೂಸ್
08-06-22 11:29 am HK News Desk ದೇಶ - ವಿದೇಶ
ನವದೆಹಲಿ, ಜೂನ್ 8: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಾಜಧಾನಿ ದೆಹಲಿ, ಮುಂಬೈ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಉಗ್ರರು ಬೆದರಿಕೆ ಹಾಕಿದ್ದಾರೆ. ಜೂನ್ 6ರಂದು ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ಲಾಂ ಸ್ಥಾಪಕರ ಗೌರವ, ಪ್ರತಿಷ್ಠೆ ಉಳಿಸುವುದಕ್ಕಾಗಿ ಜೀವ ತೆತ್ತು ಹೋರಾಡುತ್ತೇವೆ, ಕೇಸರಿ ಭಯೋತ್ಪಾದಕರು ಕೊನೆಯ ದಿನಗಳನ್ನು ಎಣಿಸಿಕೊಳ್ಳಿ ಎಂದು ಬೆದರಿಕೆ ಒಡ್ಡಿದ್ದಾರೆ.
ಕೇಸರಿ ಭಯೋತ್ಪಾದಕರು ತಮ್ಮ ಜೀವ ಉಳಿಸಲು ಒಂದೋ ಮನೆಯಲ್ಲಿ ಅಡಗಿಕೊಳ್ಳಲಿ. ಇಲ್ಲವೇ ಮಿಲಿಟರಿ ಬೇಸ್ ಗಳಲ್ಲಿ ಅಡಗಿಕೊಳ್ಳಲಿ. ನಾವು ಅವರನ್ನು ಬಿಡುವುದಿಲ್ಲ. ನಮ್ಮ ತಾಯಿ ನಮ್ಮನ್ನು ಕಳೆದುಕೊಂಡಿದ್ದಾರೆಂದು ಭಾವಿಸುತ್ತೇವೆ. ಪ್ರವಾದಿಯವರ ಪ್ರತಿಷ್ಠೆ, ಗೌರವಕ್ಕಾಗಿ ಪ್ರಾಣ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರವಾದಿ ಮತ್ತು ಅವರ ಪತ್ನಿಯ ಬಗ್ಗೆ ಭಾರತದ ಟಿವಿ ಚಾನೆಲ್ ಗಳಲ್ಲಿ ಅಪಹಾಸ್ಯ ಮಾಡಲಾಗಿದೆ. ಇದನ್ನು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮುಸ್ಲಿಮರು ಸಹಿಸಿಕೊಳ್ಳುವುದಿಲ್ಲ. ಜಗತ್ತಿನ ಮುಸ್ಲಿಮರ ಹೃದಯ ರಕ್ತಸಿಕ್ತವಾಗಿದ್ದು, ಪ್ರತೀಕಾರಕ್ಕಾಗಿ ತಹತಹಿಸುತ್ತಿದ್ದಾರೆ. ಪ್ರವಾದಿಯನ್ನು ನಿಂದಿಸಿದವರನ್ನು ಕೊಲ್ಲುತ್ತೇವೆ. ಅವರನ್ನು ಕೊಲ್ಲುವುದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೇವೆ. ನಾವು ನಮ್ಮ ದೇಹದಲ್ಲಿಯೇ ಸ್ಫೋಟಕಗಳನ್ನು ಕಟ್ಟಿಕೊಂಡು ಬ್ಲಾಸ್ಟ್ ಮಾಡುತ್ತೇವೆ. ಯಾವುದೇ ಶಾಂತಿಯ ಮಾತುಕತೆಗಳು, ಯಾವುದೇ ಶಕ್ತಿಗಳಿಂದ ನೀವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಕೇವಲ ಖಂಡನೆ, ಬೇಸರ ವ್ಯಕ್ತಪಡಿಸಿದ ಮಾತ್ರಕ್ಕೆ ಈ ವಿಚಾರವನ್ನು ಮುಗಿಸಿ ಬಿಡುವುದಕ್ಕೆ ಸಾಧ್ಯವಿಲ್ಲ. ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಹಿಂದುತ್ವ ಭಯೋತ್ಪಾದಕರು ಭಾರತವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಹೇಳಿರುವ ಅಲ್ ಖೈದಾ ಸಂಘಟನೆ, ನಾವು ಪ್ರವಾದಿಯವರ ಪ್ರತಿಷ್ಠೆ, ಗೌರವಕ್ಕಾಗಿ ಹೋರಾಟ ನಡೆಸುತ್ತೇವೆ. ಎಲ್ಲ ಮುಸ್ಲಿಮರಿಗೂ ಈ ಹೋರಾಟದಲ್ಲಿ ಪಾಲ್ಗೊಳ್ಳಲು, ಪ್ರಾಣ ತ್ಯಾಗಕ್ಕೆ ಸಿದ್ಧರಾಗುವಂತೆ ಕರೆ ನೀಡುತ್ತೇವೆ ಎಂದಿದ್ದಾರೆ.
ಬಿಜೆಪಿ ವಕ್ತಾರ ಹುದ್ದೆಯಲ್ಲಿದ್ದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್, ಪ್ರವಾದಿ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರೀ ಖಂಡನೆ, ಆಕ್ರೋಶ ವ್ಯಕ್ತವಾಗಿದ್ದು, ಭಾರತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಪಶ್ಚಿಮ ಏಶ್ಯಾದ ಮುಸ್ಲಿಮ್ ರಾಷ್ಟ್ರಗಳು ಭಾರತದ ರಾಯಭಾರ ಕಚೇರಿಗೆ ನೋಟೀಸ್ ಕಳುಹಿಸಿ ಸ್ಪಷ್ಟನೆ ಕೇಳಿದೆ. ಭಾರತದ ವಿದೇಶಾಂಗ ಸಚಿವ ಜೈರಾಮ್ ಶಂಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅವರ ಹೇಳಿಕೆಗಳು ಭಾರತ ಸರಕಾರದ್ದಲ್ಲ. ಭಾರತ ಸರಕಾರ ಎಲ್ಲ ಮತ, ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ ಎಂದು ಹೇಳಿದ್ದರು. ಅಲ್ಲದೆ, ಬಿಜೆಪಿಯು ಅವರಿಬ್ಬರನ್ನು ಪಕ್ಷದಿಂದ ಅಮಾನತು ಮಾಡಿದೆ.
Terror outfit Al-Qaeda in the Subcontinent (AQIS) threatened suicide attacks in Gujarat, Uttar Pradesh, Mumbai and Delhi to "fight for the dignity of our Prophet" amid brewing controversy over the remarks by BJP leaders on the founder of Islam, news agency ANI reported. In a threat letter dated June 6, AQIS warned that "saffron terrorists should now await their end in Delhi and Bombay and in UP and Gujarat", according to the report.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm