ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ಮಾಡಿದ್ದ ನ್ಯಾಯಾಧೀಶರಿಗೆ ಬೆದರಿಕೆ, ಪೊಲೀಸ್ ಭದ್ರತೆ

08-06-22 11:35 am       HK News Desk   ದೇಶ - ವಿದೇಶ

ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದೊಳಗೆ ವಿಡಿಯೋ ಚಿತ್ರೀಕರಣ ಸಹಿತ ಸಮೀಕ್ಷೆ ನಡೆಸಲು ಆದೇಶ ಮಾಡಿದ್ದ ವಾರಣಾಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಒಡ್ಡಲಾಗಿದೆ.

ಲಕ್ನೋ, ಜೂನ್ 8: ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದೊಳಗೆ ವಿಡಿಯೋ ಚಿತ್ರೀಕರಣ ಸಹಿತ ಸಮೀಕ್ಷೆ ನಡೆಸಲು ಆದೇಶ ಮಾಡಿದ್ದ ವಾರಣಾಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಒಡ್ಡಲಾಗಿದೆ.

ಜಡ್ಜ್ ತನಗೆ ಬೆದರಿಕೆ ಪತ್ರ ಬಂದಿರುವುದನ್ನು ಉತ್ತರ ಪ್ರದೇಶದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ವಾರಣಾಸಿ ಪೊಲೀಸ್ ಆಯುಕ್ತರಿಗೆ ಜಡ್ಜ್ ಮಾಹಿತಿ ನೀಡಿದ್ದಾರೆ.

ಖಾಸಿಫ್ ಅಹ್ಮದ್ ಸಿದ್ದಿಕಿ ಎಂಬ ವ್ಯಕ್ತಿಯು ಆಗಜ್ ಮೂವ್ಮೆಂಟ್ ಸಂಘಟನೆಯ ಪರವಾಗಿ ಕೈಬರಹದಲ್ಲಿ ಪತ್ರ ಬರೆದಿದ್ದು, ಮಸೀದಿ ಸಮೀಕ್ಷೆಗೆ ಆದೇಶ ಮಾಡಿರುವುದನ್ನು ಪ್ರಶ್ನೆ ಮಾಡಿದ್ದಾನೆ. ಪತ್ರವನ್ನು ರಿಜಿಸ್ಟರ್ ಪೋಸ್ಟ್ ಮೂಲಕ ನ್ಯಾಯಾಧೀಶರಿಗೆ ಅಂಚೆಯ ಮೂಲಕ ಕಳುಹಿಸಲಾಗಿತ್ತು.  

ಜಡ್ಜ್ ಗೆ ಬೆದರಿಕೆ ಬಂದಿರುವುದನ್ನು ವಾರಣಾಸಿ ಪೊಲೀಸ್ ಆಯುಕ್ತ ಗಣೇಶ್ ದೃಢಪಡಿಸಿದ್ದು, ಉಪಾಯುಕ್ತರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ನ್ಯಾಯಾಧೀಶರಿಗೆ 9 ಮಂದಿ ಪೊಲೀಸರ ಭದ್ರತೆ ನೀಡಲಾಗಿದೆ. 

Varanasi Civil Judge Ravi Kumar Diwakar said on Tuesday that he received a threat letter from a man named Kashif Ahmed Siddiqui of Islamic Aghaz Movement. Ravi Diwakar is the judge who had ordered a survey at the disputed Gyanvapi- Kashi Vishwanath complex.