ಎಲೆಕ್ಟ್ರಿಕ್ ವಾಹನಗಳ ಪಾರ್ಕಿಂಗ್ ನಲ್ಲಿ‌ ಬೆಂಕಿ ಅವಘಡ ; 90ಕ್ಕೂ ಹೆಚ್ಚು ವಾಹಗಳು ಸುಟ್ಟು ಭಸ್ಮ

08-06-22 03:03 pm       HK News Desk   ದೇಶ - ವಿದೇಶ

ಬುಧವಾರ ದೆಹಲಿಯ ಜಾಮಿಯಾ ನಗರದ ಎಲೆಕ್ಟ್ರಿಕ್ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 10 ಕಾರುಗಳು ಸೇರಿ 90ಕ್ಕೂ ಹೆಚ್ಚು ವಾಹಗಳು ಸುಟ್ಟು ಭಸ್ಮವಾಗಿವೆ.

ನವದೆಹಲಿ, ಜೂ 8: ಬುಧವಾರ ದೆಹಲಿಯ ಜಾಮಿಯಾ ನಗರದ ಎಲೆಕ್ಟ್ರಿಕ್ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 10 ಕಾರುಗಳು ಸೇರಿ 90ಕ್ಕೂ ಹೆಚ್ಚು ವಾಹಗಳು ಸುಟ್ಟು ಭಸ್ಮವಾಗಿವೆ.

11 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಕಾರು, ಇ-ರಿಕ್ಷಾಗಳು ಸುಟ್ಟು ಭಸ್ಮವಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಜಾಮಿಯಾ ನಗರದದಲ್ಲಿರುವ ಪಾರ್ಕಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಮುಂಜಾನೆ ದೂರವಾಣಿ ಕರೆ ಬಂದಿತ್ತು ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ.

Watch: Over 90 vehicles gutted in Delhi parking fire

ಘಟನೆಯಲ್ಲಿ ಒಟ್ಟು 10 ಕಾರುಗಳು, ಒಂದು ಮೋಟಾರ್ ಸೈಕಲ್, ಎರಡು ಸ್ಕೂಟಿ, 30 ಹೊಸ ಇ-ರಿಕ್ಷಾಗಳು ಮತ್ತು 50 ಹಳೆಯ ಇ-ರಿಕ್ಷಾಗಳು ಬೆಂಕಿಗೆ ಆಹುತಿಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಇ-ರಿಕ್ಷಾದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಈ ಘಟನೆ ನಡೆಯುವ ಕೆಲವು ಗಂಟೆಗಳ ಹಿಂದೆ ಮತ್ತೊಂದು ಬೆಂಕಿ ಅವಘಡ ನಡೆದಿದೆ. ದೆಹಲಿಯ ಉತ್ತರ ಬ್ಲಾಕ್‌ನಲ್ಲಿರುವ ಗೃಹ ವ್ಯವಹಾರಗಳ ಸಚಿವಾಲಯದ ದೂರವಾಣಿ ವಿನಿಮಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

Delhi parking fire over 90 vehicles gutted

ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಪ್ರಕಾರ, ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಕರೆ ಬಂದಿತ್ತು, ಉತ್ತರ ಬ್ಲಾಕ್‌ನಲ್ಲಿರುವ ದೂರವಾಣಿ ವಿನಿಮಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದರು. 

ತಕ್ಷಣ ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿವೆ. ಇದುವರೆಗೂ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.

Delhi Jamia nagar fire today Massive Fire at Electric Motor Parking in  Delhis Jamia Nagar Over 90 Vehicles Gutted

ಶಾಖದ ಅಲೆಗಳ ಹೊಡೆತಕ್ಕೆ ಸಿಲುಕಿರುವ ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಅವಘಡಗಳು ನಡೆಯುತ್ತಲೇ ಇದೆ. ಇತ್ತೀಚೆಗಷ್ಟೆ ದೆಹಲಿಯ ಮುಂಡ್ಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಜನ ಸಾವನ್ನಪ್ಪಿದ್ದರು.

ದುರಂತದಲ್ಲಿ ಕೆಲವರ ದೇಹಗಳು ಸುಟ್ಟು ಕರಕಲಾಗಿದ್ದವು, ಡಿಎನ್‌ಎ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹಗಳನ್ನು ಪತ್ತೆಹಚ್ಚಿ, ಕುಟುಂಬಸ್ಥರಿಗೆ ನೀಡಲಾಗಿತ್ತು.

Over 90 vehicles, including 10 cars, were gutted in a massive fire that broke out in a metro parking lot in the national capital on Wednesday morning, an official said. No casualties or injuries were reported in the incident. The official informed that they received a call about the fire incident around 5.00 a.m. at the Main Tikona Park, Jamia Nagar in South-East Delhi after which as many as 11 fire tenders were immediately pressed into service. The cause of the fire is yet to be ascertained.