ಕ್ಯಾನ್ಸರ್ ಕಾಯಿಲೆ ; ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಇಲ್ಲದೆ ಗುಣಪಡಿಸಿದ ಅಮೆರಿಕದ ವೈದ್ಯರು, ಹೊಸ ಔಷಧಿ ಬಗ್ಗೆ ವೈದ್ಯಲೋಕದಲ್ಲಿ ಅಚ್ಚರಿ ! 

08-06-22 10:58 pm       HK News Desk   ದೇಶ - ವಿದೇಶ

ಮಾರಣಾಂತಿಕ ಎಂದೇ ಪರಿಗಣಿಸಲ್ಪಟ್ಟ ಕ್ಯಾನ್ಸರ್ ಕಾಯಿಲೆಗೆ ಅಮೆರಿಕದಲ್ಲಿ ಹೊಸ ಔಷಧಿ ಕಂಡುಹಿಡಿಯಲಾಗಿದೆ. ಹೊಸ ಔಷಧಿಯನ್ನು ನೀಡುವ ಮೂಲಕ ಕ್ಯಾನ್ಸರ್ ಪೀಡಿತರನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಲಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ನವದೆಹಲಿ, ಜೂನ್ 8 : ಮಾರಣಾಂತಿಕ ಎಂದೇ ಪರಿಗಣಿಸಲ್ಪಟ್ಟ ಕ್ಯಾನ್ಸರ್ ಕಾಯಿಲೆಗೆ ಅಮೆರಿಕದಲ್ಲಿ ಹೊಸ ಔಷಧಿ ಕಂಡುಹಿಡಿಯಲಾಗಿದೆ. ಹೊಸ ಔಷಧಿಯನ್ನು ನೀಡುವ ಮೂಲಕ ಕ್ಯಾನ್ಸರ್ ಪೀಡಿತರನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಲಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ಅಮೆರಿಕದ ವಿಜ್ಞಾನಿಗಳು ಡೋಸ್ಟಾರ್ಲಿಮಾಬ್ ಎನ್ನುವ ಏಂಟಿ ಬಯಾಟಿಕ್ ಔಷಧಿಯನ್ನು ನೀಡುವ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ನಿವಾರಣೆ ಮಾಡಿದ್ದಾರೆ.  ಈ ಹೊಸ ಔಷಧಿಯನ್ನು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕ್ಯಾಟರಿಂಗ್ ಸೆಂಟರ್ ನಲ್ಲಿ 12 ರೋಗಿಗಳಿಗೆ ಪ್ರಯೋಗ ಮಾಡಲಾಗಿದ್ದು ಯಶಸ್ಸು ಪಡೆದಿದ್ದಾರೆ. 

Why new cancer drugs take so long to reach the market

ಒಬ್ಬ ಭಾರತ ಮೂಲದ ವ್ಯಕ್ತಿ ಸೇರಿ 12 ಮಂದಿ ಗುದನಾಳದ ಕ್ಯಾನ್ಸರ್ ಇದ್ದ ರೋಗಿಗಳಿಗೆ ಈ ಹೊಸ ಔಷಧಿಯನ್ನು ನೀಡಲಾಗಿದೆ. ಎರಡು ಮತ್ತು ಮೂರನೇ ಹಂತದಲ್ಲಿದ್ದ ಇವರಿಗೆ ಈ ಔಷಧಿಯನ್ನು ಮೂರು ವಾರಗಳಿಗೊಮ್ಮೆ ಆರು ತಿಂಗಳ ವರೆಗೆ ನೀಡಲಾಗಿತ್ತು. ಆನಂತರ ಗುದನಾಳದಲ್ಲಿದ್ದ ಗಡ್ಡೆ ಪೂರ್ತಿಯಾಗಿ ನಿವಾರಣೆ ಆಗಿದೆ ಎನ್ನುವ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ. 

ಚಿಕಿತ್ಸೆ ನಂತರ ಈ ರೋಗಿಗಳನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ ಗಡ್ಡೆಯ ಲಕ್ಷಣಗಳು ಕಾಣಿಸಿಲ್ಲ. ಕ್ಯಾನ್ಸರ್ ಗಡ್ಡೆಗಳಿಗೆ ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಇತ್ಯಾದಿ ಬದಲು ಡೋಸ್ಟಾರ್ಲಿಮಾಬ್ ಔಷಧಿಯನ್ನು ನೀಡಲು ಸಾಧ್ಯವೇ ಅನ್ನುವ ಬಗ್ಗೆ ಹೆಚ್ಚಿನ ಅಧ್ಯಯನವನ್ನು ವೈದ್ಯರು ಕೈಗೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಇಲ್ಲದೆ, ಗಡ್ಡೆಯನ್ನು ನಿವಾರಣೆ ಮಾಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ.

In a medical trial that has shown unprecedented results, twelve rectal cancer patients were completely cured of the disease without any surgery or chemotherapy, according to a study published in the New England Journal of Medicine.The study, done by doctors from the Memorial Sloan Kettering Cancer Centre in New York, used a monoclonal antibody called dostarlimab every three weeks for a period of six months for the treatment of a particular kind of stage two or three rectal cancer.