ಕೇವಲ 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ  ನಿರ್ಮಾಣ ; 720 ಕಾರ್ಮಿಕರ ಶ್ರಮ, ಗಿನ್ನಿಸ್ ದಾಖಲೆ ಬರೆದ NHAI 

09-06-22 10:15 am       HK News Desk   ದೇಶ - ವಿದೇಶ

ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಸ್ವಾಮ್ಯದ NHAI ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿ.ಮೀ ಉದ್ದ ಬಿಟುಮಿನಸ್ ಕಾಂಕ್ರೀಟ್ ಅನ್ನು ಹಾಕುವ ಮೂಲಕ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದೆ.

ಮುಂಬೈ, ಜೂ 09: ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಸ್ವಾಮ್ಯದ NHAI ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿ.ಮೀ ಉದ್ದ ಬಿಟುಮಿನಸ್ ಕಾಂಕ್ರೀಟ್ ಅನ್ನು ಹಾಕುವ ಮೂಲಕ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದೆ.

ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, ಹಗಲು- ರಾತ್ರಿ ಎನ್ನದೇ 720 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಜೂನ್ 3ರಂದು ಬೆಳಿಗ್ಗೆ 7:27ಕ್ಕೆ ಪ್ರಾರಂಭವಾದ ಈ ಕಾಮಗಾರಿ, ಜೂನ್ 7ರಂದು ಸಂಜೆ 5 ಗಂಟೆಗೆ ಪೂರ್ಣಗೊಂಡಿತು. ಈ 75 ಕಿ.ಮೀ ಏಕಪಥದ ಕಾಂಕ್ರೀಟ್ ರಸ್ತೆಯ ಒಟ್ಟು ಉದ್ದವು 37.5 ಕಿ.ಮೀ ದ್ವಿಪಥದ ಸುಸಜ್ಜಿತ ರಸ್ತೆಗೆ ಸಮನಾಗಿದೆ ಎಂದರು.

iRASTE: Nitin Gadkari launches AI-powered road safety project that aims to  reduce accidents by 50% - Cities News

2019ರ ಫೆಬ್ರವರಿಯಲ್ಲಿ ಕತಾರ್‌ನ ದೋಹಾದಲ್ಲಿ ನಿರ್ಮಿಸಿದ್ದ 25.275 ಕಿ.ಮೀ ರಸ್ತೆಯು ಈ ಹಿಂದೆ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿತ್ತು. ಆಗ ಆ ರಸ್ತೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಇದೀಗ ಈ ದಾಖಲೆಯನ್ನು ಅಮರಾವತಿ ಮತ್ತು ಅಂಕೋಲಾ ರಾಷ್ಟ್ರೀಯ ಹೆದ್ದಾರಿಯೂ ಮುರಿದಿದೆ ಎಂದು ಹೇಳಿದರು. 

India creates Guinness World Record for constructing longest continuously  laid bituminous lane of 75 kms on NH-53

NH 53 ಅಮರಾವತಿಯಿಂದ ಅಂಕೋಲಾ ವಿಭಾಗವು NH 53ರ ಭಾಗವಾಗಿದ್ದು, ಇದು ಕೋಲ್ಕತ್ತಾ, ರಾಯ್‍ಪುರ, ನಾಗ್‍ಪುರ ಮತ್ತು ಸೂರತ್‍ನಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಟ್ರಾಫಿಕ್ ಮತ್ತು ಸರಕು ಸಾಗಣೆಯನ್ನು ಸರಾಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

State-owned NHAI has created a Guinness World Record for the longest continuously laid bituminous lane of 75 kilometres in 105 hours and 33 minutes on the national highway between Amravati and Akola districts in Maharashtra. Mentioning about the record, Road Transport and Highways Minister Nitin Gadkari on Wednesday said the project was implemented by 720 workers including a team of independent consultants who worked day and night.