ಬ್ರೇಕಿಂಗ್ ನ್ಯೂಸ್
10-06-22 07:29 pm HK News Desk ದೇಶ - ವಿದೇಶ
ಇಸ್ಲಾಮಾಬಾದ್, ಜೂ 10: ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ (78) ಶುಕ್ರವಾರ ದುಬೈನಲ್ಲಿ ನಿಧನರಾದರು.
ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ಪಾಕಿಸ್ತಾನದ ಅಧಿಕಾರ ಕೈವಶ ಮಾಡಿಕೊಂಡಿದ್ದ ಪರ್ವೇಜ್ ಮುಷರಫ್ ನಂತರದ ದಿನಗಳಲ್ಲಿ ನಡೆದ ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ದೇಶದಿಂದ ದೂರವೇ ಉಳಿಯಬೇಕಾಯಿತು. ಭಾರತದ ಜೊತೆಗೆ ಪಾಕಿಸ್ತಾನವು ಶಾಂತಿ ಸ್ಥಾಪನೆಗೆ ಯತ್ನಿಸುತ್ತಿದ್ದಾಗ ಲೇಹ್-ಕಾರ್ಗಿಲ್ ಹೆದ್ದಾರಿ ಸಮೀಪ ಪಾಕಿಸ್ತಾನದ ಸೇನೆಯನ್ನು ಗಡಿ ನಿಯಂತ್ರಣ ರೇಖೆ ದಾಟಿಸಿ, ಯುದ್ಧಕ್ಕೂ ಕಾರಣರಾಗಿದ್ದರು.

ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಮುಷರಫ್ ಅವರನ್ನು ದುಬೈನಲ್ಲಿರುವ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಷರಫ್ ಅವರನ್ನು ನೋಡಲು ಅವರ ಕುಟುಂಬದ ಸದಸ್ಯರು ತರಾತುರಿಯಲ್ಲಿ ವಿಮಾನದಲ್ಲಿ ದುಬೈಗೆ ಬಂದಿದ್ದರು. ಪರ್ವೇಜ್ ಮುಷರಫ್ ಅವರು 1999ರಿಂದ 2008ರವರೆಗೆ ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದರು. ನವಾಜ್ ಷರೀಫ್ ಸರ್ಕಾರವನ್ನು ಸೇನಾ ಕ್ರಾಂತಿಯ ಮೂಲಕ ಪದಚ್ಯುತಿಗೊಳಿಸಿದ್ದರು.

ದೇಶ ವಿಭಜನೆ ವೇಳೆ ಕರಾಚಿಗೆ ಹೋದ ಕುಟುಂಬ;
ಪರ್ವೇಜ್ ಮುಷರಫ್ ಅವರು ಆಗಸ್ಟ್ 11, 1943ರಂದು ದೆಹಲಿಯಲ್ಲಿ ಸೈಯದ್ ಮುಷಾರಫುದ್ದೀನ್ ಮತ್ತು ಬೇಗಂ ಜರೀನ್ ಮುಷರಫ್ ಅವರ ಪುತ್ರನಾಗಿ ಜನಿಸಿದರು. ಮುಷರಫ್ ಅವರ ತಾಯಿ ಬೇಗಂ ಜರೀನ್ ಲಖನೌ ಮೂಲದವರು. ಅವರು ಅಲ್ಲಿಯೇ ತಮ್ಮ ಶಾಲಾ ಶಿಕ್ಷಣ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪದವಿ ಪಡೆದ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಷರಫ್ ಅವರ ಅಪ್ಪ ಸೈಯದ್ ಮುಷಾರಫುದ್ದೀನ್ ಬ್ರಿಟಿಷರ ಆಡಳಿತದ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಕಚೇರಿಯಲ್ಲಿ ಅಕೌಂಟೆಂಟ್ ಆಗಿದ್ದರು. ನಂತರ ಅಕೌಂಟಿಂಗ್ ಡೈರೆಕ್ಟರ್ ಆದರು.

1947ರಲ್ಲಿ ದೇಶ ವಿಭಜನೆ ವೇಳೆ ಮುಷರಫ್ ಕುಟುಂಬ ದೆಹಲಿಯಿಂದ ಕರಾಚಿಗೆ ಹೋಯಿತು. 1949-56ರ ಅವಧಿಯಲ್ಲಿ ಮುಷರಫ್ ಕುಟುಂಬ ಟರ್ಕಿಯಲ್ಲಿ ವಾಸವಾಗಿತ್ತು. 1964ರಲ್ಲಿ ಸೇನೆ ಸೇರಿದ ಮುಷರಫ್, ಕ್ವೆಟ್ಟಾದಲ್ಲಿನ ಆರ್ಮಿ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಿಂದ ಪದವಿ ಪಡೆದರು.ನಂತರ ಲಂಡನ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ಗೆ ಸೇರಿದರು. ಫಿರಂಗಿ, ಶಸ್ತ್ರಾಸ್ತ್ರ ಕಮಾಂಡೋ ಘಟಕಗಳಲ್ಲಿ ಕಾರ್ಯನಿರ್ವಹಿಸಿದ್ದು ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜಿನಲ್ಲಿ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಯುದ್ಧ ವಿಭಾಗದಲ್ಲಿ ಬೋಧಕರಾಗಿದ್ದರು.

1965 ಮತ್ತು 197ರ ಯುದ್ಧದಲ್ಲಿ ಭಾರತ ವಿರುದ್ಧ ಹೋರಾಡಿದ್ದ ಮುಷರಫ್ ಅವರನ್ನು 1998ರಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ಸೇನಾಪಡೆಯ ಮುಖ್ಯಸ್ಥರನ್ನಾಗಿ ಮಾಡಿದರು. 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಪಾಕ್ ಸೇನೆ ನಡೆಸಿದ ಆಕ್ರಮಣದಲ್ಲಿ ಮುಷರಫ್ ಪ್ರಮುಖ ಪಾತ್ರ ವಹಿಸಿದ್ದರು. ಅಕ್ಟೋಬರ್ 12, 1999ರಂದು, ಮುಷರಫ್ ವಿದೇಶದಲ್ಲಿದ್ದಾಗ ಅವರನ್ನು ಸೇನಾ ಮುಖ್ಯಸ್ಥರ ಹುದ್ದೆಯಿಂದ ಅಂದಿನ ಪ್ರಧಾನಿ ನವಾಜ್ ಷರೀಫ್ ವಜಾ ಮಾಡಿದ್ದರು. ಮುಷರಫ್ ಅವರನ್ನು ತವರಿಗೆ ಕರೆತರುತ್ತಿದ್ದ ವಿಮಾನವನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ತಡೆಯಲು ಷರೀಫ್ ಪ್ರಯತ್ನಿಸಿದರು.
ಆದರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಶಸ್ತ್ರ ಪಡೆಗಳು ವಿಮಾನ ನಿಲ್ದಾಣ ಮತ್ತು ಇತರ ಸರ್ಕಾರಿ ಸಂಸ್ಥೆಗಳ ನಿಯಂತ್ರಣವನ್ನು ಸುಪರ್ದಿಗೆ ತೆಗೆದುಕೊಂಡಿತು. ರಾತ್ರೋರಾತ್ರಿ ಷರೀಫ್ ಅವರನ್ನು ಪದಚ್ಯುತಗೊಳಿಸಿದ ಮುಷರಫ್, ಮಿಲಿಟರಿ ಸರ್ಕಾರ ಸ್ಥಾಪಿಸಿದರು.
Former Pakistan President Pervez Musharraf today passed away at the age of 78, various Pakistani media channels reported. The former president was on a ventilator in an American hospital in Dubai. His family members have reportedly flown to Dubai to see him. The 78-year-old self-exiled Pervez Musharraf ruled Pakiatan from 1999 to 2008. He had come into power by removing the then prime minister Nawaz Sharif in a bloodless coup.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm