ಪ್ರವಾದಿ ಅವಹೇಳನ ; ದೇಶಾದ್ಯಂತ ಹೊತ್ತಿಕೊಂಡ ಬೆಂಕಿ, ಕಾಶ್ಮೀರ, ದೆಹಲಿ, ಉತ್ತರ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ, ಕಲ್ಲು ತೂರಾಟ, ಪ್ರತಿಭಟನೆ, ಘೋಷಣೆ !

10-06-22 07:40 pm       HK News Desk   ದೇಶ - ವಿದೇಶ

ಪ್ರವಾದಿ ಪೈಗಂಬರ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಇಂದು ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ.

ನವದೆಹಲಿ, ಜೂನ್ 10: ಪ್ರವಾದಿ ಪೈಗಂಬರ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಇಂದು ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ದೆಹಲಿ, ಉತ್ತರ ಪ್ರದೇಶದ ಖಾನ್ಪುರ, ಲಕ್ನೋ, ಪ್ರಯಾಗರಾಜ್, ಕೊಲ್ಕತ್ತಾ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪ್ರತಿಭಟನೆ ನಡೆಸಿದ್ದು ಹಲವು ಕಡೆಗಳಲ್ಲಿ ಹಿಂಸೆಗೆ ತಿರುಗಿದೆ.

ದೆಹಲಿಯ ಜಾಮಿಯಾ ಮಸೀದಿ ಮುಂದೆ ಭಾರೀ ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ನೂಪುರ್ ಶರ್ಮಾ ಅವರನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಹಲವಾರು ಕಡೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಜನರು ಸರಕಾರಿ ಬಸ್, ಕಟ್ಟಡಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆ ಹಿಂಸೆಗೂ ತಿರುಗಿದ್ದು, ಕಲ್ಲು ತೂರಾಟದಿಂದ ಹಲವರು ಗಾಯಗೊಂಡಿದ್ದಾರೆ. ಸಹರನ್ ಪುರ್, ಪ್ರಯಾಗರಾಜ್, ಫಿರೋಜಬಾದ್, ಮೊರಾದಬಾದ್ ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮ್ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Uttar Pradesh CM Yogi Adityanath bans liquor and meat trade in Mathura

Islamists call for the murder of BJP's Nupur Sharma on Twitter spaces

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪ್ರಯಾಗರಾಜ್ ನಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಉದ್ರಿಕ್ತರನ್ನು ಚದುರಿಸಿದ್ದು, ಹಲವರಿಗೆ ಗಾಯಗಳಾಗಿರುವ ವರದಿಗಳಿವೆ.

Prophet Remark Row: Pan-India Protests After Friday Prayers; Stone-Pelting  Reported In Multiple Cities - Indiaahead News

ಮಹಾರಾಷ್ಟ್ರದ ಸೋಲಾಪುರದಲ್ಲಿ ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಮುಸ್ಲಿಂ ಮತೀಯರು ಬೀದಿಗಿಳಿದಿದ್ದು ಸರಕಾರ, ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದಾರೆ. ಜಮ್ಮು ಕಾಶ್ಮೀರದ ಶ್ರೀನಗರ, ಶೋಪಿಯಾನ್ ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ನಂತರ ಪೂರ್ತಿಯಾಗಿ ಬಂದ್ ಆಗಿತ್ತು. ಜನರು ಭೀತಿಯಿಂದ ಹೊರ ಬರುವುದನ್ನೇ ನಿಲ್ಲಿಸಿದ್ದರು. ಮುಸ್ಲಿಮರು ಬೀದಿಯಲ್ಲಿ ಮೆರವಣಿಗೆ ನಡೆಸಿದ್ದಾರೆ.

News: Latest & Breaking News, Latest News Headlines | Deccan Herald

ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ಮೆಕ್ಕಾ ಮಸೀದಿ ಮುಂಭಾಗದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಕೆಲಕಾಲ ರಸ್ತೆ ಪೂರ್ತಿ ಬ್ಲಾಕ್ ಆದ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಮನವೊಲಿಸಿ ಸ್ಥಳದಿಂದ ತೆರವು ಮಾಡಿದ್ದಾರೆ. 

The members of the Muslim community staged protests on Friday across the country over inflammatory remarks by suspended BJP leader Nupur Sharma and expelled leader Naveen Jindal against Prophet Muhammad. The protests broke out after Friday prayers in several cities including Delhi, Lucknow, Prayagraj, Shopian, Srinagar, Kolkata, etc. In Delhi, people gathered in large numbers outside Jama Masjid and demanded the arrest of Nupur Sharma.