ವೈರಸ್‌ ಎಫೆಕ್ಟ್ ; ಅಮೆರಿಕದ ಖ್ಯಾತ ಪಾಪ್ ಗಾಯಕ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು 

11-06-22 10:13 pm       HK News Desk   ದೇಶ - ವಿದೇಶ

ಅಮೆರಿಕದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಖದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್, ಜೂ 11: ಅಮೆರಿಕದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮುಖದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಮೆರಿಕ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ 28 ವರ್ಷದ ಪಾಪ್ ತಾರೆ ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ.

ನಾನು ನಗಲು ಆಗುತ್ತಿಲ್ಲ, ನನ್ನ ಮುಖದ ಒಂದು ಕಡೆಗೆ ಸಂಪೂರ್ಣ ಪಾರ್ಶ್ವವಾಯು ಹೊಡೆದಿದೆ. ನಾನು ಈ ಸಮಯದಲ್ಲಿ ವಿಶ್ರಾಂತಿ ಪಡೆಯುವೆ. ಸಂಪೂರ್ಣ ಗುಣಮುಖನಾಗಿ ಮತ್ತೆ ನಿಮ್ಮ ಮುಂದೆ ಬರುವೆ. ನಾನು ಏನು ಮಾಡಲಿಕ್ಕಾಗಿ ಹುಟ್ಟಿದ್ದೆನೋ ಅದನ್ನು ಮಾಡುತ್ತೇನೆ" ಎಂದು ಜಸ್ಟಿನ್ ಹೇಳಿದ್ದಾರೆ.

Justin Bieber Reveals Suffering From Partial 'Face Paralysis' Due to Ramsay  Hunt Syndrome; Celebs & Fans React - Entertainment

ಜಸ್ಟಿನ್ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆ ಕಂಡಿದೆ. ನೆಚ್ಚಿನ ಗಾಯಕನ ಆರೋಗ್ಯ ಸ್ಥಿತಿ ಕಂಡು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್ ಕಾರಣದಿಂದ ಜಸ್ಟಿನ್ ಬೀಬರ್ ಮೊದಲ ಎರಡು ಕಾರ್ಯಕ್ರಮ ರದ್ದಾಗಿದ್ದವು. ಆರೋಗ್ಯ ಸಮಸ್ಯಯಿಂದ ಮೂರನೇ ಬಾರಿಗೆ ಜಸ್ಟಿನ್ ಕಾರ್ಯಕ್ರಮ ರದ್ದು ಮಾಡಿದ್ದರು. ಮತ್ತೆ ಸಂಗೀತ ನೆಚ್ಚಿನ ಗಾಯಕನ ಹಾಡುಕೇಳಲು ಜಸ್ಟಿನ್ ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಅವರ ಅಭಿಮಾನಿಗಳು ಕಾಯಬೇಕಿದೆ.

The 28-year-old singer announced his diagnosis of Ramsay Hunt syndrome, a rare neurological disorder that can cause facial paralysis, on Instagram on Friday. Bieber announced the news just days after he had to cancel a number of tour dates due to health issues. He said, "I am doing these facial exercises to get my face back to normal. It will go back to normal. I don't know how much time it's gonna be. It's gonna be okay I hope. I trust God, it's all for a reason, and not sure what that is right now, but in the meantime, I am resting. I love you guys. Peace.”