ಬ್ರೇಕಿಂಗ್ ನ್ಯೂಸ್
12-06-22 04:45 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ಉತ್ತರ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರ ಎದ್ದಿರುವ ಹಿನ್ನೆಲೆಯಲ್ಲಿ ಹಿಂಸೆಗೆ ಕಾರಣವಾದ ಆರೋಪಿಗಳನ್ನು ಹಿಡಿದು ಅವರ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಕ್ರಮಕ್ಕೆ ಯೋಗಿ ಆದಿತ್ಯನಾಥ್ ಸರಕಾರ ಮುಂದಾಗಿದೆ. ಪ್ರಯಾಗರಾಜ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಮುಖ್ಯ ಕಾರಣ ಎನ್ನಲಾಗಿರುವ ಆರೋಪಿಯ ಮನೆ, ಕಟ್ಟಡವನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಬುಲ್ಡೋಜರ್ ನಿಂದ ಅರ್ಧಕ್ಕೆ ಕೆಡವಲಾಗಿದೆ.
ಪ್ರಯಾಗರಾಜ್ ಹಿಂಸಾಚಾರಕ್ಕೆ ಕಾರಣ ಎಂದು ಗುರುತಿಸಲ್ಪಟ್ಟಿರುವ ಜಾವೇದ್ ಅಹ್ಮದ್ ಎಂಬಾತ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ಕೆಡವಲು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಈ ಮೊದಲೇ ನೋಟೀಸ್ ನೀಡಿತ್ತು. ಇದೀಗ ಆರೋಪಿಯೆಂದು ಗುರುತಿಸಲ್ಪಟ್ಟ ಕಾರಣ ಯೋಗಿ ಸರಕಾರ ಆತನ ಕಟ್ಟಡವನ್ನು ಕೆಡವಲು ಮುಂದಾಗಿದೆ.
ಇದೇ ವೇಳೆ, ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ಹಿಂಸಾಚಾರ ಸಂಬಂಧಿಸಿ ಪೊಲೀಸರು 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಪ್ರಯಾಗರಾಜ್ ನಲ್ಲಿ 91, ಸಹರನ್ ಪುರ್ 71, ಹತ್ರಾಸ್ 51, ಮೊರಾದಬಾದ್, ಫಿರೋಜಬಾದ್ 15, ಅಂಬೇಡ್ಕರ್ ನಗರದಲ್ಲಿ 34 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 13 ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶುಕ್ರವಾರ ಬಳಿಕ ಶನಿವಾರ ಬಂದೇ ಬರ್ತದೆ
ಇದಕ್ಕೂ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಟ್ವೀಟ್ ಮಾಡಿದ್ದು ಪ್ರತೀ ಶುಕ್ರವಾರದ ಬಳಿಕ ಶನಿವಾರ ಬಂದೇ ಬರುತ್ತದೆ ಎಂದು ಹೇಳಿದ್ದಲ್ಲದೆ ಬುಲ್ಡೋಜರ್ ಒಂದರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆಮೂಲಕ ರಾಜ್ಯದಲ್ಲಿ ಆಕ್ರಮಣಕೋರರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಸರಕಾರ ಈ ಹಿಂದೆಯೂ ಗಲಭೆಕೋರರು, ಕ್ರಿಮಿನಲ್ ಹಿನ್ನೆಲೆಯವರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಬೆದರಿಸಿತ್ತು. ಇದೇ ವೇಳೆ, ಸಹರಣ್ ಪುರದಲ್ಲಿ ಪೊಲೀಸರು ಇಬ್ಬರು ಆರೋಪಿಗಳ ಮನೆಯನ್ನು ಭಾಗಶಃ ಕೆಡವಿದ್ದು, ಅದರ ವಿಡಿಯೋವನ್ನು ಷೇರ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 50ಕ್ಕೂ ಹೆಚ್ಚು ಬಂಧನ
ಪಶ್ಚಿಮ ಬಂಗಾಳದ ಹೌರಾ, 24 ಪರಗಣ್, ಮುರ್ಶಿದಾಬಾದ್ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸರು ಬಂಧನ ಕ್ರಮ ಆರಂಭಿಸಿದ್ದಾರೆ. ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 54 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಭೆಗೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೌರಾ ಮತ್ತು ಮುರ್ಶಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರದ ಹಿಂಸಾಚಾರದ ಬಳಿಕ ಇಂಟರ್ನೆಟ್ ಸಂಪರ್ಕವನ್ನು ಕಡಿತ ಮಾಡಲಾಗಿದೆ.
ನೂಪುರ್ ಶರ್ಮಾ, ನವೀನ್ ಜಿಂದಾಲ್ ಗೆ ನೋಟೀಸ್
ಇದೇ ವೇಳೆ, ಪಶ್ಚಿಮ ಬಂಗಾಳದ ಭಿವಂಡಿ ಠಾಣೆಯಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ನೂಪುರ್ ಶರ್ಮಾ ಜೂನ್ 13ರಂದು ಠಾಣೆಗೆ ಬಂದು ಹೇಳಿಕೆ ದಾಖಲು ಮಾಡುವಂತೆ ಸಮನ್ಸ್ ನೀಡಿದ್ದರೆ, ನವೀನ್ ಜಿಂದಾಲ್ ಜೂನ್ 15ರಂದು ಠಾಣೆಗೆ ಬರುವಂತೆ ತಿಳಿಸಿದ್ದಾರೆ. ನವೀನ್ ಕುಮಾರ್ ಜಿಂದಾಲ್ ತನಗೆ ಇಸ್ಲಾಮ್ ಮೂಲಭೂತವಾದಿಗಳಿಂದ ಬೆದರಿಕೆ ಇದ್ದು, ದಯವಿಟ್ಟು ನನ್ನ ಮನೆ, ಬಂಧುಗಳ ವಿಳಾಸ ನೀಡದಂತೆ ಮನವಿ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಸರಕಾರದ ಬಳಿ ಗೋಗರೆದಿದ್ದಾರೆ.
The Prayagraj Development Authority (PDA) on Sunday demolished the house of Javed Ahmad, alias Pump, the alleged mastermind of Friday’s violence, amid heavy police deployment. A day earlier, the properties of two people accused of rioting were demolished in Saharanpur where stone-pelting had taken place as well.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 03:24 pm
Mangalore Correspondent
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm