ಬ್ರೇಕಿಂಗ್ ನ್ಯೂಸ್
12-06-22 09:16 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ಪೈಗಂಬರ್ ಹೆಸರಲ್ಲಿ ಜಗತ್ತಿನ ಹಲವೆಡೆ ಪ್ರತಿಭಟನೆ, ಭಾರತದಲ್ಲಿ ಮುಸ್ಲಿಂ ಸಂಘಟನೆಗಳು ಹಿಂಸಾಚಾರದಲ್ಲಿ ತೊಡಗಿದ್ದರೆ, ಮುಸ್ಲಿಂ ರಾಷ್ಟ್ರ ಕುವೈಟಿನಲ್ಲಿ ಮಾತ್ರ ಪ್ರತಿಭಟನೆ ನಡೆಸಿದ ಮುಸ್ಲಿಮರಿಗೇ ಸಂಚಕಾರ ಬಂದಿದೆ. ಕುವೈಟಿನಲ್ಲಿ ಪೈಗಂಬರ್ ಪರವಾಗಿ ಪ್ರತಿಭಟನೆ ನಡೆಸಿವರನ್ನು ಬಂಧಿಸಲಾಗಿದ್ದು, ಆಯಾ ದೇಶಗಳಿಗೆ ಗಡೀಪಾರು ಮಾಡಲು ಮುಂದಾಗಿದೆ.
ಜೂನ್ 10ರಂದು ಶುಕ್ರವಾರ ಮಧ್ಯಾಹ್ನ ಕುವೈಟಿನ ಫಹಹೀಲ್ ಏರಿಯಾದಲ್ಲಿ ಭಾರತೀಯರು ಸೇರಿದಂತೆ ಏಶ್ಯಾದ ಹಲವು ರಾಷ್ಟ್ರಗಳ ಮುಸ್ಲಿಮರು ಭಾರತದಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿರುವ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪೈಗಂಬರ್ ಹೆಸರಲ್ಲಿ ನೂಪುರ್ ಶರ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಆದರೆ ಕುವೈಟ್ ಸರಕಾರ ಪ್ರತಿಭಟನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಕುವೈಟ್ ಕಾನೂನು ಪ್ರಕಾರ ಯಾವುದೇ ಹೊರಗಿನ ವ್ಯಕ್ತಿಗಳು ಪ್ರತಿಭಟನೆ, ಧರಣಿ ನಡೆಸುವುದಕ್ಕಾಗಲೀ, ಘೋಷಣೆ ಕೂಗುವುದಕ್ಕಾಗಲೀ ಅವಕಾಶ ಇಲ್ಲ. ವಿದೇಶಿ ಪ್ರಜೆಗಳು ಪ್ರತಿಭಟನೆ ನಡೆಸುವುದು ಅಂದರೆ, ಅಲ್ಲಿನ ಕಾನೂನು ಪ್ರಕಾರ ಗಂಭೀರ ಅಪರಾಧವಾಗುತ್ತದೆ. ಹಾಗಾಗಿ, ಯಾವುದೇ ರೀತಿಯ ಪ್ರತಿಭಟನೆ, ಧರಣಿ ನಡೆಸಿದರೂ ಆಯಾ ದೇಶಕ್ಕೆ ಗಡೀಪಾರು ಮಾಡುವುದಾಗಿ ಸರಕಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಫಹಹೀಲ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಯ ಬಳಿಕ 50ರಷ್ಟು ಮಂದಿ ಒಂದೆಡೆ ಸೇರಿ ಘೋಷಣೆ ಕೂಗಿದ್ದರು. ಆದರೆ, ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಅಲ್ಲಿನ ಕಾನೂನಿನ ಅರಿವು ಇರಲಿಲ್ಲ ಎನ್ನಲಾಗುತ್ತಿದೆ. ಭಾರತದ ವಿರುದ್ಧ ಧರಣಿ ನಡೆಸಿ, ಅಲ್ಲಾಹು ಅಕ್ಬರ್, ಇನ್ಶಾ ಅಲ್ಲಾ ಘೋಷಣೆಗಳನ್ನು ಕೂಗಿದ್ದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಲ್ಲಿನ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಲಾರಿಯಲ್ಲಿ ತುಂಬಿಸಿ ಒಯ್ದಿದ್ದರು. ಇದೀಗ ಬಂಧಿಸಿರುವ ವ್ಯಕ್ತಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲ ವಿದೇಶಿ ಪ್ರಜೆಗಳ ವೀಸಾ ರದ್ದು ಪಡಿಸಲಿದ್ದಾರೆ ಎನ್ನಲಾಗುತ್ತಿದ್ದು ಯಾವ ದೇಶದಿಂದ ಉದ್ಯೋಗಕ್ಕಾಗಿ ಬಂದಿದ್ದಾರೋ ಅದೇ ದೇಶಕ್ಕೆ ಹಿಂದಕ್ಕೆ ಕಳುಹಿಸಲಿದ್ದಾರೆ.
ಕೇವಲ ಗಡೀಪಾರು ಮಾತ್ರವಲ್ಲ ಭವಿಷ್ಯದಲ್ಲಿ ಅವರು ಕುವೈಟಿಗೆ ಬರುವುದಕ್ಕೂ ಅವಕಾಶ ಇರುವುದಿಲ್ಲ. ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ, ಭವಿಷ್ಯದಲ್ಲಿ ಅವರಿಗೆ ವೀಸಾ ನೀಡುವುದಕ್ಕೆ ಕುವೈಟ್ ನಿಯಮದ ಪ್ರಕಾರ ಅವಕಾಶ ಇರುವುದಿಲ್ಲವಂತೆ. ಇದಲ್ಲದೆ, ಯಾರೆಲ್ಲ ಅಲ್ಲಿನ ಸ್ಥಳೀಯ ಪ್ರಜೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೋ ಅವರ ವಿರುದ್ಧವೂ ಕ್ರಮ ಜರುಗಿಸಲಿದ್ದಾರೆ. ಕುವೈತ್ ಸರಕಾರ ಭಾರತದ ರಾಜಕೀಯ ನಾಯಕರ ಹೇಳಿಕೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಮಾತ್ರಕ್ಕೆ ಅಲ್ಲಿನ ಜನರು ಪ್ರತಿಭಟನೆ ನಡೆಸಬಹುದು ಎಂದರ್ಥವಲ್ಲ ಎಂಬುದಾಗಿ ಅಲ್ಲಿನ ಸರಕಾರಿ ಅಧಿಕಾರಿಗಳು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
Asian Muslim expats including Indians who staged an agitation against Nupur Sharma in Kuwait City will be arrested and deported to their home countries, Kuwaiti media has reported . The expat Muslims had gathered at the Fahaheel area in Kuwait City in Kuwait on June 10, Friday and held a demonstration against former BJP spokesperson Nupur Sharma for her comments on Prophet Mohammed. The protestors had chanted slogans against Sharma and in support of Prophet Muhammad during the demonstration.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 03:24 pm
Mangalore Correspondent
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm