ನ್ಯಾಶನಲ್ ಹೆರಾಲ್ಡ್ ಕೇಸ್ ; ದಿನವಿಡೀ ರಾಹುಲ್ ಗಾಂಧಿಗೆ ಇಡಿ ಡ್ರಿಲ್ ! ದೇಶದ ವಿವಿಧೆಡೆ ಕಾಂಗ್ರೆಸ್ ನಾಯಕರ ಪ್ರತಿಭಟನೆ, ಪೊಲೀಸ್ ವಶಕ್ಕೆ

13-06-22 10:20 pm       HK News Desk   ದೇಶ - ವಿದೇಶ

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ಇವತ್ತು ಇಡೀ ದಿನ ಡ್ರಿಲ್ ಮಾಡಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ದೆಹಲಿಯ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿಯನ್ನು ಸತತ ಎರಡೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

ನವದೆಹಲಿ, ಜೂನ್ 13: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ಇವತ್ತು ಇಡೀ ದಿನ ಡ್ರಿಲ್ ಮಾಡಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ದೆಹಲಿಯ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿಯನ್ನು ಸತತ ಎರಡೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಆನಂತರ, ಮಧ್ಯಾಹ್ನ ಲಂಚ್ ಬ್ರೇಕ್ ಬಳಿಕ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ವರೆಗೂ ವಿಚಾರಣೆ ನಡೆಸಿದ್ದಾರೆ.

ನ್ಯಾಶನಲ್ ಹೆರಾಲ್ಡ್ ಆಸ್ತಿ ಗೋಲ್ಮಾಲ್ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ವಿಚಾರಣೆಗೆ ಹಾಜಾರಾಗಲು ನೋಟೀಸ್ ನೀಡಿದ್ದರು. ಸೋನಿಯಾ ಗಾಂಧಿ ಕೊರೊನಾ ಸೋಂಕಿಗೆ ಒಳಗಾಗಿರುವುದರಿಂದ ವಿಚಾರಣೆಗೆ ಹಾಜರಾಗುವುದರಿಂದ ಸದ್ಯಕ್ಕೆ ವಿನಾಯ್ತಿ ಪಡೆದಿದ್ದಾರೆ. ರಾಹುಲ್ ಗಾಂಧಿ ಜೂನ್ 13ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಂತೆ, ಇಂದು ಬೆಳಗ್ಗೆಯೇ ಇಡಿ ಕಚೇರಿಗೆ ಆಗಮಿಸಿದ್ದರು.

Rahul Gandhi questioned in National Herald money laundering case amid  Congress protests

ಆದರೆ, ರಾಹುಲ್ ಗಾಂಧಿ ಇಡಿ ವಿಚಾರಣೆಗೆ ತೆರಳಿದ ಬಳಿಕ ಕಾಂಗ್ರೆಸ್ ನಾಯಕರು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಕಚೇರಿ ಒಳನುಗ್ಗಲು ಯತ್ನಿಸಿದ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ ಗಢ ಸಿಎಂ ಭೂಪೇಶ್ ಬಾಘೇಲ್, ಕೇಂದ್ರ ಮಟ್ಟದ ನಾಯಕರಾದ ಅಜಯ್ ಮಾಕೆನ್, ರಾಜೀವ್ ಶುಕ್ಲಾ ದೆಹಲಿ ಎಐಸಿಸಿ ಕಚೇರಿಗೆ ತೆರಳಿ ತುರ್ತು ಸಭೆ ನಡೆಸಿದ್ದಾರೆ. ಅಶೋಕ್ ಗೆಹ್ಲೋಟ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅಧಿಕಾರಕ್ಕೆ ಬಂದ ಎಂಟು ವರ್ಷಗಳಲ್ಲಿ ಇಡಿಯನ್ನು ಬಳಸಿ ಪ್ರತಿಪಕ್ಷದ ನಾಯಕರನ್ನು ಹಣಿಯಲು ನೋಡುತ್ತಿದೆ. ಕೇಂದ್ರೀಯ ತನಿಖಾ ಏಜನ್ಸಿಗಳನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Rahul Gandhi ED Appearance LIVE: Questioning Over for Today, Rahul to be Present  Before ED Again on Tuesday

Rahul Gandhi ED Appearance LIVE: Questioning Over for Today, Rahul to be Present  Before ED Again on Tuesday

ರಾಹುಲ್ ಗಾಂಧಿಯನ್ನು ವಿಚಾರಣೆಗೊಳಪಡಿಸಿದ್ದನ್ನು ಖಂಡಿಸಿ ದೆಹಲಿಯ ಹಲವೆಡೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ದೇಶದ ಪ್ರಮುಖ ನಗರಗಳಲ್ಲೂ ಭಾರೀ ಪ್ರತಿಭಟನೆ ನಡೆದಿದ್ದು, ಪೊಲೀಸರು ನಾಯಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ಇದ ವೇಳೆ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ವಿಚಾರಣೆಗೆ ಕರೆದು ಇಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತಿದ್ದು, ದೇಶಾದ್ಯಂತ ಸತ್ಯಾಗ್ರಹ ನಡೆಸುತ್ತೇವೆ. ಹಾಗೇನಾದರೂ ವಿಚಾರಣೆ ನಡೆಸುವುದಿದ್ದರೆ, ನಾಲ್ಕಾರು ಗಂಟೆಗಳ ಕಾಲ ಕುಳ್ಳಿರಿಸಿ ಡ್ರಿಲ್ ಮಾಡುವ ಅಗತ್ಯವಿಲ್ಲ. ವಕೀಲರ ಮೂಲಕ ಕೋರ್ಟಿನಲ್ಲಿ ವಿಚಾರಣೆ ನಡೆಸಲಿ ಎಂದು ಹೇಳಿದ್ದಾರೆ. 

Congress leader Rahul Gandhi was questioned by the Enforcement Directorate (ED) on Monday in a money laundering probe linked to the National Herald newspaper after the MP reached the agency’s headquarters in Delhi accompanied by a battery of party leaders and supporters. Gandhi, who entered the headquarters of the federal agency in central Delhi around 11.10 am, was put to questioning about 20 minutes later after he finished some brief legal proceedings and marked his attendance.