ಬ್ರೇಕಿಂಗ್ ನ್ಯೂಸ್
14-06-22 02:38 pm HK News Desk ದೇಶ - ವಿದೇಶ
ನವದೆಹಲಿ,ಜೂನ್ 14: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೊದಲ ದಿನದ ವಿಚಾರಣೆಯಲ್ಲಿ ನೀಡಿರುವ ಉತ್ತರಗಳು ಅಧಿಕಾರಿಗಳಿಗೆ ತೃಪ್ತಿಯಾಗಿಲ್ಲ. ಹಾಗಾಗಿ ಎರಡನೇ ದಿನವೂ ಇಡಿ ಅಧಿಕಾರಿಗಳು ರಾಹುಲ್ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ತಮ್ಮ ವಕೀಲರು ಹೇಳಿಕೊಟ್ಟ ರೀತಿಯಲ್ಲೇ ಸೂಚ್ಯವಾಗಿ ಉತ್ತರ ನೀಡುತ್ತಿದ್ದರಂತೆ.
ಪ್ರತಿ ಪ್ರಶ್ನೆಗೂ ಉತ್ತರಿಸುತ್ತಿದ್ದ ವೇಳೆ ತುಂಬ ಜಾಗ್ರತೆ ವಹಿಸುತ್ತಿದ್ದರು. ಉತ್ತರ ಕೊಟ್ಟು ಸಿಕ್ಕಿಬೀಳದಂತೆ ನೋಡಿಕೊಳ್ಳುತ್ತಿದ್ದರು. ತಮ್ಮ ವಕೀಲರು ಹೇಳಿಕೊಟ್ಟ ರೀತಿಯಲ್ಲೇ ಉತ್ತರಗಳನ್ನು ಹೇಳುತ್ತಿದ್ದರು ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ. ಇದಲ್ಲದೆ, ರಾಹುಲ್ ಗಾಂಧಿ ನೀಡಿದ್ದ ಹೆಚ್ಚಿನ ಉತ್ತರಗಳಿಂದ ಇಡಿ ತನಿಖೆಯಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.
ಸೋಮವಾರ ಮಧ್ಯಾಹ್ನ ವರೆಗಿನ ವಿಚಾರಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ತಾವು ಯಂಗ್ ಇಂಡಿಯಾ ಮತ್ತು ಅಸೋಸಿಯೇಟೆಡ್ ಜರ್ನಲ್ ಸಂಸ್ಥೆಯಲ್ಲಿ ಷೇರ್ ಹೋಲ್ಡರ್ ಆಗಿರುವುದನ್ನು ಮತ್ತು ಅದರ ಹಣಕಾಸು ವರ್ಗಾವಣೆ ಕುರಿತ ಸಾಕ್ಷ್ಯಗಳನ್ನು ಮುಂದಿಟ್ಟಿದ್ದಾರೆ. ಆ ಕಂಪನಿಗಳ ಜೊತೆಗಿನ ಸಂಬಂಧವನ್ನೂ ರಾಹುಲ್ ವಿಚಾರಣೆಯಲ್ಲಿ ಹೇಳಿದ್ದಾರೆ. ಸೋಮವಾರ ರಾತ್ರಿ 9.30ರ ವರೆಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆದಿದ್ದು, ರಾಹುಲ್ ಗಾಂಧಿ ವಿಚಾರಣೆ ಮುಗಿಸಿದ ಹಿನ್ನೆಲೆಯಲ್ಲಿ ತನ್ನಿಂದಲೇ ವಿಳಂಬ ಆಯ್ತು. ಕ್ಷಮಿಸಿ ಎಂದು ಹೇಳಿದ್ದಾಗಿ ಇಡಿ ಅಧಿಕಾರಿಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಆದರೆ ಪ್ರಕರಣದ ಕುರಿತು ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಾಕಿಯಿದೆ ಎನ್ನಲಾಗುತ್ತಿದ್ದು, ಅದಕ್ಕಾಗಿ ಮಂಗಳವಾರವೂ ರಾಹುಲ್ ಅವರನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ.
As the high-voltage drama continues over Rahul Gandhi's questioning by the Enforcement Directorate in the National Herald money laundering case, sources said investigators at the federal probe agency were not satisfied with most of Rahul Gandhi's answers. They said he appeared to be tutored.According to sources, ED investigators said, "Rahul Gandhi was very cautious while answering each question. It appeared that Rahul was tutored by his lawyers on how to answer and avoid certain aspects."
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm