ಬ್ರೇಕಿಂಗ್ ನ್ಯೂಸ್
14-06-22 08:19 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 14: ದೇಶದಲ್ಲಿ ಪ್ರವಾದಿ ಅವಹೇಳನದ ವಿಚಾರದಲ್ಲಿ ಹಲವು ಕಡೆಗಳಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿ ವಿವಾದ ಎದ್ದಿರುವ ಬೆನ್ನಲ್ಲೇ ಈ ರೀತಿಯ ಘಟನೆಗಳನ್ನು ಖಂಡಿಸಿ ಆರೆಸ್ಸೆಸ್ ಅಂಗಸಂಸ್ಥೆ ವಿಶ್ವ ಹಿಂದು ಪರಿಷತ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಗುರುವಾರ(ಜೂನ್ 16) ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿಕೆ ನೀಡಿದೆ.
ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿಗಳಿಂದ ಹೆಚ್ಚುತ್ತಿರುವ ತೀವ್ರವಾದಿ ಕೃತ್ಯಗಳ ವಿರುದ್ಧ ನಮ್ಮ ಯುವ ಘಟಕದ ಕಾರ್ಯಕರ್ತರು ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ದೇಶದ ವಿರುದ್ಧ ಜಾಗತಿಕ ನೆಲೆಯಲ್ಲಿ ಮಾಡಿರುವ ಪಿತೂರಿಗೆ ಉತ್ತರ ನೀಡಲಿದ್ದೇವೆ ಎಂದು ವಿಎಚ್ ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪಾಂಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ಬಗ್ಗೆ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೂನ್ 10ರಂದು ಏಕಕಾಲದಲ್ಲಿ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದೆಹಲಿಯ ಜಾಮಿಯಾ ಮಸೀದಿ ಹೊರಗೆ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಕಲ್ಲು ತೂರಾಟದಿಂದ ಸಾವು ನೋವು ಸಂಭವಿಸಿತ್ತು.
ಹಿಂಸಾಚಾರ ಜಾಗತಿಕ ಪಿತೂರಿಯ ಭಾಗ
ಇದೇ ವಿಚಾರದಲ್ಲಿ ಹೇಳಿಕೆ ನೀಡಿರುವ ಜೂನ್ 10ರಂದು ಏಕಕಾಲದಲ್ಲಿ ಮಸೀದಿ ಪ್ರಾರ್ಥನೆಗೆ ಬಂದಿದ್ದವರು ಉದ್ರೇಕಗೊಂಡು ಪ್ರತಿಭಟನೆಗೆ ಇಳಿದಿದ್ದರು. ಜಾಗತಿಕ ನೆಲೆಯಲ್ಲಿ ಒಂದೇ ದಿನ ಪ್ರತಿಭಟನೆ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಕುಗ್ಗಿಸುವ, ಒತ್ತಡದ ತಂತ್ರಗಾರಿಕೆ. ಮೊದಲೇ ನಿರ್ಧರಿತವಾಗಿ ಈ ಪ್ರತಿಭಟನೆಯನ್ನು ಮಾಡಲಾಗಿದೆ. ಹಿಂಸಾಚಾರಕ್ಕೆ ಪ್ಲಾನ್ ಮಾಡಲಾಗಿತ್ತು ಅನ್ನೋದು ತಿಳಿಯುತ್ತದೆ. ಭಾರೀ ಪ್ರಮಾಣದಲ್ಲಿ ಜನಸಮೂಹಕ್ಕೆ ಪ್ರಚೋದನೆ ನೀಡಿದವರನ್ನು ಬಂಧಿಸಬೇಕು, ಬೆದರಿಕೆ ಒಡ್ಡಿದವರನ್ನು, ಬೆದರಿಕೆ ಹಾಕುವವರನ್ನು ಹಿಡಿದು ಬಂಧಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜಮೀಯತ್ ಉಲೇಮಾ ಹಿಂದ್, ಮಸೀದಿಗಳು, ಜಿಹಾದಿ ಮನಸ್ಥಿತಿಯ ವ್ಯಕ್ತಿಗಳು ಗಲಭೆಕೋರರಿಗೆ ಸಂಪನ್ಮೂಲ ಒದಗಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಿಲಿಂದ್ ಪಾಂಡೆ ಒತ್ತಾಯಿಸಿದ್ದಾರೆ.
ಜಾಗತಿಕವಾಗಿ ಭಾರತವನ್ನು ದೂಷಿಸುವ ಯೋಜಿತ ಪಿತೂರಿಯಂತೆ ಜೂನ್ 10ರಂದು ಏಕಕಾಲದಲ್ಲಿ ಮಸೀದಿಯ ಪ್ರಾರ್ಥನೆಯ ಬಳಿಕ ಪ್ರತಿಭಟನೆ ಹೆಸರಲ್ಲಿ ಹಿಂಸೆ ನಡೆಸಲಾಗಿದೆ. ಹಿಂಸಾತ್ಮಕ ಪ್ರದರ್ಶನಗಳನ್ನು ಮಾಡಲಾಗಿತ್ತು. ದೇಗುಲ, ಹಿಂದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ನೂಪುರ್ ಶರ್ಮಾ ಹತ್ಯೆಗೆ ಕಾನೂನು ಬಾಹಿರ ಫತ್ವಾ ಹೊರಡಿಸಲಾಗಿದೆ. ಈ ಮೂಲಕ ಹಿಂದು ಸಮಾಜದ ಮೇಲೆ ಹಾಕಿರುವ ಒತ್ತಡವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹಿಂದು ಸಮಾಜದ ಮೇಲೆ ಹೇರಲಾಗುತ್ತಿರುವ ಒತ್ತಡಕ್ಕೆ ಸಾಂವಿಧಾನಿಕವಾಗಿ ಸ್ಪಂದಿಸುವುದು, ನಮ್ಮ ಶಕ್ತಿ ಪ್ರದರ್ಶಿಸುವುದು ಅಗತ್ಯವಾಗಿದೆ ಎಂದು ದೆಹಲಿ ವಿಎಚ್ ಪಿ ಮುಖ್ಯಸ್ಥ ಕಪಿಲ್ ಖನ್ನಾ ಹೇಳಿದ್ದಾರೆ.
Bajrang Dal activists will hold a nationwide protest this week against the recent incidents of violence in parts of the country over remarks against Prophet Mohammad, the Vishva Hindu Parishad (VHP) announced on Tuesday. The RSS affiliate said its youth wing activists will hold a sit-in in district administration headquarters across the country on Thursday against the "growing extremist incidents by Islamic Jihadi fundamentalists", and also submit a memorandum to President Ram Nath Kovind.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm