ಪಾಕಿಸ್ತಾನದಲ್ಲಿ ಗಗನಕ್ಕೆ ಮುಟ್ಟಿದ್ದ ಪೆಟ್ರೋಲ್ - ಡೀಸೆಲ್ ಬೆಲೆ ; 1 ಲೀಟರ್ ಡೀಸೆಲ್ 263.31 ರೂ., ಪೆಟ್ರೋಲ್ 233.89, 20 ದಿನದಲ್ಲಿ ಮೂರು ಬಾರಿ ಏರಿಕೆ !

16-06-22 06:34 pm       HK News Desk   ದೇಶ - ವಿದೇಶ

ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಏರಿಕೆ ಕಂಡಿದೆ. ಕಳೆದ 20 ದಿನದಲ್ಲಿ ಇಂಧನದ ಬೆಲೆಯು ಮೂರು ಬಾರಿ ಹೆಚ್ಚಳವಾಗಿದೆ.

ಇಸ್ಲಾಮಾಬಾದ್, ಜೂ 16: ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಏರಿಕೆ ಕಂಡಿದೆ. ಕಳೆದ 20 ದಿನದಲ್ಲಿ ಇಂಧನದ ಬೆಲೆಯು ಮೂರು ಬಾರಿ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರದಲ್ಲಿ 24 ರೂಪಾಯಿ ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಡೀಸೆಲ್ ದರದಲ್ಲಿ 16.31 ರೂಪಾಯಿ ಏರಿಕೆಯಾಗಿದೆ.

ಈ ಬೆಲೆ ಪರಿಷ್ಕರಣೆಯ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು ರೂಪಾಯಿ 233.89ಕ್ಕೆ ಹೆಚ್ಚಳ ಕಂಡಿದೆ. ಈ ನಡುವೆ ಒಂದು ಲೀಟರ್ ಡೀಸೆಲ್ ದರವು ರೂಪಾಯಿ 263.31ಕ್ಕೆ ಹೆಚ್ಚಳವಾಗಿದೆ. ಇನ್ನು ಪಾಕಿಸ್ತಾನದಲ್ಲಿ ಧಾನ್ಯ, ಸಕ್ಕರೆ, ತರಕಾರಿ, ಹಣ್ಣುಗಳ ಬೆಲೆಯು ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Miftah Ismail rules out imposition of financial emergency in Pakistan

ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, "ಜೂನ್ 15ರ ಮಧ್ಯರಾತ್ರಿಯಿಂದ ಹೊಸ ದರವು ಜಾರಿಗೆ ಬಂದಿದೆ. ಇನ್ನೊಂದೆಡೆ ಸೀಮೆಎಣ್ಣೆ ಬೆಲೆಯು 29.49 ರೂಪಾಯಿ ಏರಿಕೆಯಾಗಿ ರೂಪಾಯಿ 211.43ಕ್ಕೆ ತಲುಪಿದೆ. ಕೈಗಾರಿಕೆಗಳಿಗೆ ಬಳಕೆ ಮಾಡಲಾಗುವ ಡೀಸೆಲ್ ಬೆಲೆಯು 29.16 ರೂಪಾಯಿ ಹೆಚ್ಚಳವಾಗಿದ್ದು, 207.47 ರೂಪಾಯಿಗೆ ತಲುಪಿದೆ," ಎಂದು ಮಾಹಿತಿ ನೀಡಿದ್ದಾರೆ.

ಕಳೆದ 20 ದಿನದಲ್ಲಿ ಮೂರು ಬಾರಿ ಏರಿಕೆ;

Global factors! Why Petrol and diesel prices continue to soar, when and how  common man can expect relief—EXPLAINED | Zee Business

ಕಳೆದ 20 ದಿನಗಳಲ್ಲಿ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ಸುಮಾರು 84 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾತೈಲ ದರವು ಹೆಚ್ಚಳವಾದ ಕಾರಣ ಹಾಗೂ ಇತರೆ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಪೆಟ್ರೋಲ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಸರ್ಕಾರವು ಸಮರ್ಥನೆ ಮಾಡಿಕೊಂಡಿದೆ. ಇನ್ನು ಸರ್ಕಾರವು ಇಷ್ಟು ಬೆಲೆ ಏರಿಕೆ ಮಾಡಿದರೂ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24.03 ರೂಪಾಯಿ, ಡೀಸೆಲ್ ಮೇಲೆ 59.16 ರೂಪಾಯಿ, ಸೀಮೆಎಣ್ಣೆ 29.49 ರೂಪಾಯಿ ನಷ್ಟ ಅನುಭವಿಸುತ್ತಿದೆ.

ಚಹಾ ಕಡಿಮೆ ಕುಡಿಯುವಂತೆ ಮನವಿ!

Pakistan's Interior Minister Ahsan Iqbal shot at by armed men during rally  in Narowal, rushed to hospital | World News – India TV

ಪಾಕಿಸ್ತಾನದಲ್ಲಿ ಆಹಾರ ಸಾಮಾಗ್ರಿ ಬೆಲೆಯು ಕೂಡಾ ಹೆಚ್ಚಳವಾಗಿದೆ. ಈ ನಡುವೆ ಜನರು ಚಹಾ ಕುಡಿಯುವುದನ್ನು ಕೊಂಚ ಕಡಿಮೆ ಮಾಡುವಂತೆ ನಾಗರಿಕರಿಗೆ ಸರ್ಕಾರವು ಮನವಿ ಮಾಡಿದೆ. "ಜನರು ಕಡಿಮೆ ಚಹಾ ಕುಡಿಯಿರಿ," ಎಂದು ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ. ಪಾಕಿಸ್ತಾನ ಸದ್ಯ ಹೊರ ದೇಶದಿಂದ ಚಹಾವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಜನರು ಚಹಾ ಸೇವನೆ ಕಡಿಮೆ ಮಾಡಿದರೆ ಆಮದು ವೆಚ್ಚ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ.

Pakistan on Thursday has hiked the petrol price by Rs 24 per litre in a single day. Now, one litre of petrol in Pakistan costs Rs 233.89 from Rs 209.86.Addressing a press conference in Islamabad, the Finance Minister of Pakistan Miftah Ismail said that the new prices have come into effect from midnight on June 15."The government is not in a position to bear subsidies on petroleum products anymore," said Miftah Ismail and announced an increase in the prices of petrol by Rs 24.03, taking it to the record high of Rs 233.89 per litre.