ಬ್ರೇಕಿಂಗ್ ನ್ಯೂಸ್
17-06-22 05:12 pm HK News Desk ದೇಶ - ವಿದೇಶ
ಹೈದಾರಾಬಾದ್, ಜೂ. 17: ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೆಲಂಗಾಣಕ್ಕೂ ಹಬ್ಬಿದ್ದು, ಈ ಪ್ರತಿಭಟನಾ ಕಿಚ್ಚಿಗೆ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಹೈದರಾಬಾದ್ ನಗರ ಈಗ ಹೊತ್ತಿ ಉರಿಯುತ್ತಿದ್ದು, ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನಾಕಾರರು ಉಗ್ರ ಸ್ವರೂಪ ತಾಳಿದ್ದಾರೆ. ಪ್ರತಿಭಟನಕಾರರನ್ನು ನಿಗ್ರಹಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪ್ರತಿಭಟನಾನಿರತ ವ್ಯಕ್ತಿ ಮೃತನಾಗಿದ್ದು, ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಸಿಕಂದರಾಬಾದ್‌ನಲ್ಲಿ ಯುವಕರ ಪ್ರತಿಭಟನೆ ಹೆಚ್ಚಾಗಿದ್ದು, ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒರ್ವ ವ್ಯಕ್ತಿ ಮೃತನಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಮೃತನಾದ ವ್ಯಕ್ತಿಯನ್ನು ದಾಮೋದರ್ ಕುರಶಿಯಾ ಎನ್ನಲಾಗಿದೆ. ಇವರು ಸೇನಾ ನೇಮಕಾತಿ ಮಂಡಳಿಗೆ ತೆರಳಿ ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಪ್ರತಿಭಟನೆಯ ಭಾಗವಾಗಿ ಬಂದಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಿಕಂದರಬಾದ್ ರೈಲು ನಿಲ್ದಾಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಕಾರರ ನಿಗ್ರಹಕ್ಕಾಗಿ ಪೊಲೀಸರು ಲಾಠಿ ಚಾರ್ಚ್ ನಡೆಸಿದರು. ಆದರೆ ಅವರು ಕದಲಲಿಲ್ಲ ಹಾಗಾಗಿ ಗುಂಡು ಹಾರಿಸಲಾಯಿತು. ಈ ವೇಳೆ ಹಲವಾರು ಯುವಕರು ಗಾಯಗೊಂಡರು. ಪ್ರತಿಭಟನಾಕಾರರು ಅಗ್ನಿಪಥ್ ಯೋಜನೆ ರದ್ದುಗೊಳಿಸಿ ಹಳೆಯ ಪದ್ಧತಿಯಂತೆ ಸೇನಾ ನೇಮಕಾತಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸಿಕಂದರಾಬಾದ್‌ನಲ್ಲಿ ಉಂಟಾದ ಗಲಭೆ ಹಾಗೂ ಸಾವಿನಿಂದಾಗಿ ತೆಲಂಗಾಣ ರಾಜ್ಯದ ಇತರ ವಿಭಾಗೀಯ ರೈಲು ನಿಲ್ದಾಣಗಳಲ್ಲೂ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. ನಾಂಪಲ್ಲಿ ವಾರಂಗಲ್, ಮಹಬೂಬಾಬಾದ್, ಕಾಜಿಪೇಟ್, ಜನಗಾಮಾ, ಡೋರ್ನಾಕಲ್, ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
A youth seriously injured as police open fire on protesters at #Secunderabad railway station. The unidentified youth has been rushed to the Railway Hospital. #Agnipath pic.twitter.com/oKkAtUzxxT
— TOI Hyderabad (@TOIHyderabad) June 17, 2022
Protests against the Centre's 'Agnipath' scheme spread to Telangana as hundreds of youths stormed Secunderabad railway station on Friday morning and damaged trains and shops there.A total of 13 people sustained injuries in the protests. A youth, who was seriously injured as police opened fire on protesters, succumbed to his injuries.One dead among 13 people who were brought to the Hyderabad hospital. Among the injured, one person is in a critical state; he received a chest injury. We are examining the remaining," said Raja Rao, superintendent, Gandhi Hospital.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm