ಬ್ರೇಕಿಂಗ್ ನ್ಯೂಸ್
19-06-22 05:24 pm HK News Desk ದೇಶ - ವಿದೇಶ
ಪಾಟ್ನಾ, ಜೂನ್ 19: 185 ಜನರನ್ನು ಹೊತ್ತಿದ್ದ ವಿಮಾನ ಗಗನದಲ್ಲಿ ಹಾರುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಸ್ವಲ್ಪದರಲ್ಲಿ ಅಪಾಯದಿಂದ ಪಾರಾದ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ಬೋಯಿಂಗ್ 727 ಮಾದರಿಯ ವಿಮಾನ ಟೇಕಾಫ್ ಆದ ಕೆಲಹೊತ್ತಿನಲ್ಲೇ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ಗಮನಿಸಿದ ಸ್ಥಳೀಯರು ಏರ್ಪೋರ್ಟ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಧ್ಯಾಹ್ನ 12.10ಕ್ಕೆ ಟೇಕಾಫ್ ಆದಬಳಿಕ ಸುಮಾರು 20 ನಿಮಿಷಗಳ ಕಾಲ ವಿಮಾನ ಗಗನದಲ್ಲಿ ಹಾರಾಡಿದ್ದು, ಆನಂತರ ಅದೇ ಏರ್ಪೋರ್ಟಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ.

ಸ್ಪೈಸ್ ಜೆಟ್ ಕಂಪನಿ ಪ್ರಕಾರ, ಘಟನೆಗೆ ಹಕ್ಕಿ ಬಡಿದಿರುವುದು ಕಾರಣ ಎನ್ನಲಾಗುತ್ತಿದೆ. ವಿಮಾನ ಟೇಕಾಫ್ ಆಗುತ್ತಿದ್ದ ವೇಳೆ ಹಕ್ಕಿಯೊಂದು ಬಡಿದಿರುವುದನ್ನು ಅದರಲ್ಲಿದ್ದ ಸಿಬಂದಿ ಗಮನಿಸಿದ್ದರು. ಆನಂತರ, ಏನೂ ಆಗಿರಲಿಕ್ಕಿಲ್ಲ ಎಂದುಕೊಂಡಿದ್ದರು. ಕೆಲಹೊತ್ತಿನಲ್ಲಿ ವಿಮಾನದ ಇಂಜಿನ್ ಭಾಗದಲ್ಲಿ ಬೆಂಕಿಯ ಕಿಡಿ ಎದ್ದಿರುವುದನ್ನು ಗಮನಿಸಿ, ತುರ್ತಾಗಿ ವಿಮಾನ ಲ್ಯಾಂಡ್ ಮಾಡಲು ಸಿಬಂದಿ ನಿರ್ಧರಿಸಿದ್ದು, ಪಾಟ್ನಾ ಏರ್ಪೋರ್ಟಿಗೆ ಹಿಂತಿರುಗಿ ಚಲಾಯಿಸಿದ್ದಾರೆ ಎಂದು ಕಂಪನಿ ವಕ್ತಾರರು ಮಾಹಿತಿ ನೀಡಿದ್ದಾರೆ.
![]()
ಅಲ್ಲದೆ, ವಿಮಾನದ ಕ್ಯಾಪ್ಟನ್ ಕೂಡಲೇ ಬೆಂಕಿ ಹತ್ತಿಕೊಂಡಿದ್ದ ಇಂಜಿನ್ ಒಂದನ್ನು ಆಫ್ ಮಾಡಿದ್ದಾರೆ. ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹಕ್ಕಿ ಬಡಿದಿದ್ದರಿಂದ ವಿಮಾನದ ಫ್ಯಾನ್ ಬ್ಲೇಡ್ ಬೆಂಡ್ ಆಗಿರುವುದು ಕಂಡುಬಂದಿದೆ. ವಿಮಾನ ಲ್ಯಾಂಡ್ ಆಗುತ್ತಲೇ ಜನರು ಯಾವುದೇ ಅಪಾಯ ಇಲ್ಲದೆ ಇಳಿದಿದ್ದಾರೆ. ವಿಮಾನದಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಏರ್ಪೋರ್ಟ್ ಸಿಬಂದಿಯೂ ಆತಂಕಕ್ಕೆ ಒಳಗಾಗಿದ್ದರು. ಅಗ್ನಿಶಾಮಕ ವಾಹನ, ಇನ್ನಿತರ ಬೆಂಕಿ ನಂದಿಸುವ ವಾಹನಗಳನ್ನು ರೆಡಿ ಮಾಡಲಾಗಿತ್ತು. ಆದರೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಉರಿಯುವುದು ನಿಂತಿದ್ದು ಅಪಾಯ ತಪ್ಪಿದೆ.
#WATCH Patna-Delhi SpiceJet flight safely lands at Patna airport after catching fire mid-air, all 185 passengers safe#Bihar pic.twitter.com/vpnoXXxv3m
— ANI (@ANI) June 19, 2022
A Delhi-bound SpiceJet plane, carrying 185 passengers and six crew members, made an emergency landing in Patna on Sunday afternoon, minutes after its take-off, as its cabin crew witnessed sparks coming from an engine, a senior government official said. All the passengers of the Boeing 737-800 aircraft were safely deboarded, according to a SpiceJet statement.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm