ಬ್ರೇಕಿಂಗ್ ನ್ಯೂಸ್
20-06-22 08:33 pm HK News Desk ದೇಶ - ವಿದೇಶ
ಕಾಬೂಲ್, ಜೂನ್ 20: ಅಫ್ಘಾನಿಸ್ತಾನದ ಕಾಬೂಲಿನಲ್ಲಿ ಸಿಕ್ಖರ ಗುರುದ್ವಾರದ ಮೇಲಿನ ದಾಳಿಯನ್ನು ಭಾರತದಲ್ಲಿ ಪ್ರವಾದಿ ಪೈಗಂಬರ್ ಮೇಲಿನ ಅವಹೇಳನಕ್ಕೆ ಪ್ರತಿಯಾಗಿ ನಡೆಸಿದ ಪ್ರತೀಕಾರದ ಕೃತ್ಯ ಎಂದು ಐಸಿಸ್ ಉಗ್ರರು ಹೇಳಿಕೊಂಡಿದ್ದಾರೆ.
ಕಳೆದ ಶನಿವಾರ ಕಾಬೂಲಿನ ಸಿಖ್ ಗುರುದ್ವಾರದ ಮೇಲೆ ಉಗ್ರನೊಬ್ಬ ದಾಳಿ ನಡೆಸಿದ್ದು ಇಬ್ಬರು ಸಿಕ್ಖರು ಸಾವನ್ನಪ್ಪಿದ್ದರು. ಏಳು ಮಂದಿ ಮೃತಪಟ್ಟಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸ್ ಉಗ್ರರು, ಹಿಂದು, ಸಿಖ್ ಮತ್ತು ಅಲ್ಲಾನನ್ನು ಬೆಂಬಲಿಸುವ ನೆಪದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ತಿರುವ ಧರ್ಮ ಭ್ರಷ್ಟರ ಮೇಲಿನ ದಾಳಿ ಎಂದು ಹೇಳಿದ್ದಾರೆ. ಐಸಿಸ್ ವಿಚಾರಗಳನ್ನು ಬಿತ್ತರಿಸುವ ಆನ್ಲೈನ್ ಮ್ಯಾಗಜಿನ್ನಲ್ಲಿ ಈ ಬಗ್ಗೆ ಉಗ್ರರು ಹೇಳಿಕೊಂಡಿದ್ದಾರೆ.

ನಮ್ಮ ಒಬ್ಬ ಹೋರಾಟಗಾರ ಕಾಬೂಲಿನ ಹಿಂದು ದೇವಸ್ಥಾನ ಮತ್ತು ಸಿಕ್ಖರ ಗುರುದ್ವಾರಕ್ಕೆ ದಾಳಿ ನಡೆಸಿದ್ದಾನೆ. ಎದುರಿಗೆ ಸಿಕ್ಕ ಕಾವಲುಗಾರನನ್ನು ಕೊಂದು ಹಾಕಿ, ಆನಂತರ ಅಲ್ಲಿರುವ ಮಂದಿಯ ಮೇಲೆ ತನ್ನ ಕೈಲಿದ್ದ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡಲ್ಲಿ ದಾಳಿ ನಡೆಸಿದ್ದಾನೆ ಎಂದು ಮ್ಯಾಗಜಿನ್ನಲ್ಲಿ ಬರೆಯಲಾಗಿದೆ.

ಭಾರತದಿಂದ ಕಾಬೂಲಿಗೆ ಕಳಿಸಿಕೊಡಲಾಗಿದ್ದ ಮಾನವೀಯ ನೆಲೆಯ ಪರಿಹಾರ ಸಾಮಗ್ರಿಗಳ ವಿತರಣೆ ಮತ್ತು ಅದರ ಬಗ್ಗೆ ಚರ್ಚಿಸಲು ಭಾರತೀಯ ನಿಯೋಗ ಕಾಬೂಲಿಗೆ ಭೇಟಿ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿತ್ತು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ತಾಲಿಬಾನಿಗಳು ಮರಳಿ ಅಧಿಕಾರಕ್ಕೆ ಬಂದ ಬಳಿಕ ಬಂದ್ ಆಗಿದ್ದ ಭಾರತದ ರಾಯಭಾರ ಕಚೇರಿಯನ್ನು ಮತ್ತೆ ಆರಂಭಿಸುವ ವಿಚಾರದಲ್ಲಿಯೂ ಭಾರತೀಯ ನಿಯೋಗ ಮಾತುಕತೆ ನಡೆಸಿತ್ತು.

ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ಸತತವಾಗಿ ನಡೆಯುತ್ತಿದ್ದು, ಹೆಚ್ಚಿನ ದಾಳಿಗಳು ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲಿರುತ್ತವೆ. ಐಸಿಸ್ ಬಂಡುಕೋರರು ದಾಳಿಯಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಇದ್ದ ಸಿಕ್ಖರ ಸಂಖ್ಯೆ ಇದೀಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 1970ರ ಕಾಲದಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿದ್ದ ಸಿಖ್ ಜನಸಂಖ್ಯೆ ಈಗ ಕೇವಲ 200 ಆಸುಪಾಸು ಇದ್ದಾರೆ ಎನ್ನುವ ಅಂಕಿ ಅಂಶಗಳಿವೆ. ಸಿಖ್ ಮಹಿಳೆಯರು, ಮಕ್ಕಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಶನಿವಾರದ ದಾಳಿ ಘಟನೆ ಬೆನ್ನಲ್ಲೇ ಭಾರತ ಸರಕಾರ ತುರ್ತು ವೀಸಾ ಕೊಡಲು ಮುಂದೆ ಬಂದಿದೆ. ಹಲವರು ಸಾವಿನ ಭಯದಿಂದ ಅಫ್ಘಾನಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದಾರೆ.
The ISIS claimed responsibility for an attack on a Gurdwara in Afghanistan, saying it was retaliation for 'insults' to Prophet Muhammed.Protests in several countries were sparked by suspended BJP leader Nupur Sharma's remarks earlier this month about the Prophet.In a message posted on its Amaq propaganda site, ISIS said Saturday's attack targeted Hindus and Sikhs and the "apostates" who protected them in "an act of support for the Messenger of Allah".
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm