ಬ್ರೇಕಿಂಗ್ ನ್ಯೂಸ್
29-06-22 01:24 pm HK News Desk ದೇಶ - ವಿದೇಶ
ಮುಂಬೈ, ಜೂನ್ 29 : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇನ್ನೊಂದು ಮಜಲಿನತ್ತ ಹೊರಳಲು ಸಜ್ಜಾಗಿದೆ. ಉದ್ಧವ್ ಠಾಕ್ರೆ ಸರಕಾರಕ್ಕೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಜೂನ್ 30 ರ ಗಡುವು ನೀಡಿದ್ದಾರೆ. ಶಿವಸೇನೆಯ ಬಹುತೇಕ ಶಾಸಕರು ಬಂಡೆದ್ದು ಗುವಾಹಟಿ ಹೋಗಿರುವುದರಿಂದ ಠಾಕ್ರೆ ಸರಕಾರ ಪತನಗೊಳ್ಳುವುದು ಖಾತ್ರಿಯಾಗಿದೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ, ಠಾಕ್ರೆ ಸರಕಾರ ಬಹುಮತ ಕಳಕೊಂಡಿದೆ. ಶಿವಸೇನೆಯ ಶಾಸಕರು ಮಹಾ ವಿಘಾಡಿ ಸರಕಾರದ ಬಗ್ಗೆ ಅಸಮ್ಮತಿ ತೋರಿದ್ದಾರೆ. ಹೀಗಾಗಿ ಬಹುಮತ ಇಲ್ಲದೇ ಇರುವ ಮುಖ್ಯಮಂತ್ರಿಗೆ ಬಹುಮತ ಸಾಬೀತು ಪಡಿಸಲು ಸೂಚನೆ ಕೊಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಜೂನ್ 30 ರಂದು ಒಂದು ದಿನದ ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಪಡಿಸಲು ಸೂಚಿಸಿದ್ದಾರೆ. ಸಂಜೆ 5 ಗಂಟೆ ಒಳಗೆ ವಿಶ್ವಾಸ ಮತ ಪ್ರಕ್ರಿಯೆ ಮುಗಿಸುವಂತೆ ಸೂಚನೆಯನ್ನೂ ನೀಡಿದ್ದಾರೆ.

ಈ ನಡುವೆ, ಗುವಾಹಟಿಯಿಂದ ಶಿವಸೇನೆಯ ರೆಬೆಲ್ ಶಾಸಕರು ಗೋವಾ ಕಡೆಗೆ ಪ್ರಯಾಣ ಬೆಳಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಗೋವಾದ ತಾಜ್ ಹೊಟೇಲ್ ನಲ್ಲಿ ರೂಮ್ ಗಳು ಬುಕ್ ಆಗಿರುವ ಮಾಹಿತಿಯಿದ್ದು ಇನ್ನೊಂದಷ್ಟು ದಿನ ಗೋವಾದಲ್ಲಿದ್ದು ಅಲ್ಲಿಂದ ಮುಂಬೈ ಬರಲಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ, ರಾಜ್ಯಪಾಲರ ನಡೆಯನ್ನು ಶಿವಸೇನೆ ನಾಯಕ ಸಂಜಯ ರಾವುತ್ ಖಂಡಿಸಿದ್ದಾರೆ. ನಾವು ರಾಜ್ಯಪಾಲರ ನಡೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ 15 ಶಾಸಕರ ಅನರ್ಹತೆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆ ಕಾನೂನು ಬಾಹಿರವಾಗಿ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಹೇಳಿದ್ದಾರೆ. ರಾಜ್ಯಪಾಲರ ನಡೆ ಏಕಪಕ್ಷೀಯವಾಗಿದೆ. ಬಹುಶಃ ಅವರು ಈ ಸಮಯಕ್ಕಾಗಿ ಕಾದು ಕುಳಿತ್ತದ್ದರನ್ನಿಸುತ್ತೆ ಎಂದು ಸಂಜಯ ರಾವುತ್ ಕಿಡಿಕಾರಿದ್ದಾರೆ.
The Shiv Sena has moved Supreme Court after Maharashtra Governor Bhagat Singh Koshyari sent a letter to the Secretary of the Maharashtra legislative assembly, convening a special session tomorrow, June 30, during which a floor test against the Uddhav Thackeray-led Sena-NCP-Congress government will take place.Bharatiya Janata Party leader Devendra Fadnavis, tipped to make a comeback as the chief minister if the Thackeray government falls, met Governor Bhagat Singh Koshyari at Raj Bhavan late on Tuesday, June 28, and asked him to call for a floor test in the assembly.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 08:58 pm
HK News Staffer
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm