ಬ್ರೇಕಿಂಗ್ ನ್ಯೂಸ್
01-07-22 08:50 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 1: ದೇಶದಲ್ಲಿ ಆಗಿರುವ ಇಷ್ಟೆಲ್ಲಾ ಅನಾಹುತಗಳಿಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಕಾರಣ. ಎಲ್ಲದಕ್ಕೂ ಆಕೆಯ ಹೊಣೆಗಾರರಾಗುತ್ತಾರೆ. ದೇಶದ ಜನರ ಭಾವನೆಗಳನ್ನು ಕೆದಕುವ ಹೇಳಿಕೆ ನೀಡಿದ್ದು ಅಕ್ಷಮ್ಯ. ಇದಕ್ಕಾಗಿ ಆಕೆ ಬಹಿರಂಗವಾಗಿ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ದೇಶದ ವಿವಿಧೆಡೆ ಆಕೆಯ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳನ್ನು ಜೊತೆಯಾಗಿಸಿ, ದೆಹಲಿ ಪೊಲೀಸರು ತನಿಖೆ ನಡೆಸುವಂತೆ ಆದೇಶ ನೀಡಬೇಕು ಎಂದು ಕೋರಿ ನೂಪುರ್ ಶರ್ಮಾ ಪರ ವಕೀಲ ಮನೀಂದರ್ ಸಿಂಗ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸೂರ್ಯಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು, ದೇಶದಲ್ಲಿ ಈಗ ಏನಾಗುತ್ತಿದೆ ಅದಕ್ಕೆಲ್ಲ ಆ ಲೇಡಿಯೇ ಕಾರಣ ಎಂದು ಅಭಿಪ್ರಾಯ ಪಟ್ಟಿತು. ಅಲ್ಲದೆ, ವಕೀಲರ ವಾದ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಾಧೀಶ ಸೂರ್ಯಕಾಂತ್, ಇಷ್ಟೆಲ್ಲ ಅನಾಹುತಗಳಿಗೆ ಆಕೆಯ ಲೂಸ್ ಟಾಕ್ ಕಾರಣ. ಭಾವನೆಗಳನ್ನು ಕೆದಕುವುದು ಆಕೆಯ ಕೆಲಸವೇ ಎಂದು ಪ್ರಶ್ನಿಸಿ ಗರಂ ಆದರು.
ಆಕೆ ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದು ವಕೀಲರು ಹೇಳಿದ್ದಕ್ಕೆ, ಅದು ಕ್ಷಮೆಯಲ್ಲ. ಆಕೆ ಬಹಿರಂಗವಾಗಿ ಟಿವಿ ಮುಂದೆ ಬಂದು ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಕೇಳಬೇಕು. ದೇಶದ ಜನರ ಮುಂದೆ ಕ್ಷಮೆ ಕೇಳಬೇಕು. ಅದು ದೇಶಾದ್ಯಂತ ಪ್ರಸಾರ ಆಗಬೇಕು ಎಂದು ಹೇಳಿದರು. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳೋದು ಕ್ಷಮೆ ಕೇಳಿದಂತಾಗುವುದಿಲ್ಲ. ಬೇಷರತ್ ಕ್ಷಮೆ ಯಾಚನೆ ಮಾಡಬೇಕು ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಬೇರೆ ಪ್ರಕರಣಗಳಲ್ಲಿ ವಿವಿಧೆಡೆ ಕೇಸು ದಾಖಲಾಗಿದ್ದರೆ, ಅವನ್ನು ಒಂದೇ ಕಡೆ ಕ್ಲಬ್ ಮಾಡಿ ತನಿಖೆಗೆ ಅವಕಾಶ ಕೊಟ್ಟ ಉದಾಹರಣೆ ಇದೆ ಎಂದು ವಕೀಲರು ಕೇಳಿದ್ದಕ್ಕೆ, ಅದು ಬೇರೆ ಬೇರೆ ರೀತಿಯ ಪ್ರಕರಣ ಇರಬಹುದು. ಇದು ಆ ರೀತಿಯ ಕೇಸ್ ಅಲ್ಲ. ಇಲ್ಲಿ ದಾಖಲಾಗಿರುವ ಪ್ರಕರಣಗಳು ಬೇರೆ ಬೇರೆ ಇವೆ. ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಟಿವಿ ಡಿಬೇಟ್ ನಲ್ಲಿ ಚರ್ಚೆಯಾಗಿದ್ದ ವಿಚಾರಕ್ಕೆ ಕೇಸ್ ಆಗಿದ್ದನ್ನು ಒಂದೇ ಕಡೆ ಕ್ಲಬ್ ಮಾಡಲು ಅವಕಾಶ ನೀಡಲಾಗಿತ್ತು. ನಾವು ಕಾನೂನು ಏನಿದೆಯೋ ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಈ ಪ್ರಕರಣದಲ್ಲಿ ನಮಗೆ ಆ ರೀತಿಯ ಏಕಪ್ರಕಾರದ ಅಂಶಗಳು ಕಂಡುಬರುತ್ತಿಲ್ಲ ಎಂದು ಅರ್ಜಿಯನ್ನು ನಿರಾಕರಿಸಿದ್ದಾರೆ.
The Supreme Court today blamed former BJP spokesperson Nupur Sharma for igniting tension with her comments on Prophet Muhammad and said "she and her loose tongue have set the country on fire". In unusually strong comments, the court said she must apologise to the country. "The way she has ignited emotions across the country. This lady is single-handedly responsible for what is happening in the country," said the judges.
28-11-24 05:04 pm
Bangalore Correspondent
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 06:05 pm
Mangalore Correspondent
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm