ಬ್ರೇಕಿಂಗ್ ನ್ಯೂಸ್
04-07-22 01:30 pm HK News Desk ದೇಶ - ವಿದೇಶ
ಮುಂಬೈ, ಜುಲೈ 4: ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಏಕನಾಥ ಶಿಂಧೆ ಸರಕಾರ ವಿಶ್ವಾಸ ಮತ ಗೆದ್ದುಕೊಂಡಿದೆ. ಬಿಜೆಪಿ ಮತ್ತು ಶಿವಸೇನೆಯ 164 ಸದಸ್ಯರು ಏಕನಾಥ್ ಶಿಂಧೆ ಪರವಾಗಿ ಮತ ಚಲಾಯಿಸಿದ್ದಾರೆ.
ಜುಲೈ ಒಂದರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ ಶಿಂಧೆಗೆ ಇನ್ನೆರಡು ದಿನದಲ್ಲಿ ಸದನದಲ್ಲಿ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದರು. ಅದರಂತೆ, ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿತ್ತು. ಇಂದು ಪರ- ವಿರೋಧ ಮತ ಚಲಾವಣೆ ಆಗಿದ್ದು, ಏಕನಾಥ್ ಶಿಂಧೆ ಪರವಾಗಿ 164 ಮತ್ತು ವಿರೋಧವಾಗಿ 99 ಮಂದಿ ಮತ ಚಲಾಯಿಸಿದ್ದಾರೆ. ಮೂವರು ಮತ ಚಲಾಯಿಸದೆ ತಟಸ್ಥರಾಗಿ ಉಳಿದಿದ್ದಾರೆ.



ಇದರೊಂದಿಗೆ ಮಹಾರಾಷ್ಟ್ರದಲ್ಲಿ ಎದುರಾಗಿದ್ದ ಎರಡು ವಾರಗಳ ರಾಜಕೀಯ ಬಿಕ್ಕಟ್ಟು ಅಂತ್ಯಗೊಂಡಿದೆ. ಬಹುಮತ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿದ ಡಿಸಿಎಂ ಮತ್ತು ಬಿಜೆಪಿ ಶಾಸಕಾಂಗ ನಾಯಕ ದೇವೇಂದ್ರ ಫಡ್ನವಿಸ್, ಇದು ಬಾಳಾ ಸಾಹೇಬರ ಸಿದ್ಧಾಂತಕ್ಕೆ ಜಯ ಎಂದು ಹೇಳಿದ್ದಾರೆ. ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದಿದ್ದೆ. ನನ್ನ ಮಾತು ಕೇಳಿ ಕೆಲವರು ವ್ಯಂಗ್ಯವಾಡಿದ್ದರು. ಆದರೆ ನನ್ನ ಮಾತು ನಿಜವಾಗಿದ್ದು, ನನ್ನ ಜೊತೆಗೆ ಏಕನಾಥ ಶಿಂಧೆ ಅವರನ್ನು ಕರೆತಂದಿದ್ದೇನೆ. ರಾಜಕೀಯದಲ್ಲಿ ಹಳೆಯದನ್ನು ಇಟ್ಟುಕೊಳ್ಳುವುದಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.
![]()
ಇದಕ್ಕೂ ಮುನ್ನ ಏಕನಾಥ್ ಶಿಂಧೆ ಸರಕಾರ ಹೊಸದಾಗಿ ಸ್ಪೀಕರ್ ಹುದ್ದೆಗೆ ರಾಹುಲ್ ನರ್ವೇಕರ್ ಅವರನ್ನು ನೇಮಕ ಮಾಡಿತ್ತು. ಇದರ ಬೆನ್ನಲ್ಲೇ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿದ್ದ ಠಾಕ್ರೆ ಗುಂಪಿನ ಅಜಯ್ ಚೌಧರಿ ಅವರನ್ನು ತೆಗೆದು ಹಾಕಿದ್ದಲ್ಲದೆ, ಆ ಸ್ಥಾನಕ್ಕೆ ಏಕನಾಥ ಶಿಂಧೆ ಅವರನ್ನು ನೂತನ ಸ್ಪೀಕರ್ ನೇಮಿಸಿದ್ದರು.
A day after electing Rahul Narvekar as Maharashtra Assembly’s speaker, the Eknath Shinde government on Monday comfortably passed the majority-mark with 164 votes, winning the trust vote after two weeks of political turmoil in Maharashtra. Meanwhile, the Uddhav Thackeray-faction of Shiv Sena on Monday moved a fresh plea in the Supreme against the decision of assembly’s speaker to recognise a new whip for the party.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm