ಬ್ರೇಕಿಂಗ್ ನ್ಯೂಸ್
06-07-22 06:52 pm HK News Desk ದೇಶ - ವಿದೇಶ
ಚಂಡೀಗಢ, ಜುಲೈ 6: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೇ ಮದುವೆಯಾಗಲಿದ್ದಾರೆ. ಡಾ.ಗುರುಪ್ರೀತ್ ಕೌರ್ ಎಂಬ ಮಹಿಳೆಯನ್ನು ಚಂಡೀಗಢದಲ್ಲಿ ಗುರುವಾರ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಹಿಂದೆ ಭಗವಂತ್ ಮಾನ್ ಇಂದ್ರಜಿತ್ ಕೌರ್ ಅವರನ್ನು ಮದುವೆಯಾಗಿದ್ದು, ಆರು ವರ್ಷಗಳ ಹಿಂದೆ ಅವರು ಬೇರೆಯಾಗಿದ್ದರು. ಇತ್ತೀಚೆಗೆ ಚುನಾವಣೆಯಲ್ಲಿ ಭಗವಂತ್ ಮಾನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾದ ಸಂದರ್ಭದಲ್ಲಿಯೂ ಮಾನ್ ಅವರ ತಾಯಿ ಮತ್ತು ತಂಗಿ ಮಾತ್ರ ಕುಟುಂಬ ಸದಸ್ಯರಾಗಿ ಕಾಣಿಸಿಕೊಂಡಿದ್ದರು. ಈಗ ತಾಯಿ ಹರ್ಪಾಲ್ ಕೌರ್ ಮತ್ತು ತಂಗಿ ಮನ್ ಪ್ರೀತ್ ಕೌರ್ ಅವರೇ ಭಗವಂತ್ ಮಾನ್ ಅವರಿಗೆ ಹೊಸ ಬಾಳ ಸಂಗಾತಿಯನ್ನು ಹುಡುಕಿದ್ದಾರಂತೆ.
ಮಾನ್ ಅವರ ಹಳೆ ಪತ್ನಿ ಇಂದ್ರಜಿತ್ ಮತ್ತು ಅವರ ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಕಳೆದ ಬಾರಿ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಮಕ್ಕಳು ಸಮಾರಂಭದಲ್ಲಿ ಹಾಜರಾಗಿದ್ದರು. ಮಗಳು ಸೀರತ್ ಕೌರ್(21) ಮತ್ತು ದಿಲ್ಶನ್ ಮಾನ್ (17) ಅಮೆರಿಕದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಭಗವಂತ್ ಮಾನ್ ಕುಟುಂಬಕ್ಕೆ ವೈದ್ಯೆಯ ಪ್ರವೇಶ ಆಗುತ್ತಿದ್ದು, ಹೊಸ ಜೀವನಕ್ಕೆ ಅಡಿ ಇಡುತ್ತಿದ್ದಾರೆ. ಮದುವೆ ಸಮಾರಂಭದಲ್ಲಿ ಮಾನ್ ಅವರ ಆಪ್ತ ಸಂಬಂಧಿಕರು ಮತ್ತು ಪ್ರಮುಖರು ಮಾತ್ರ ಭಾಗಿಯಾಗಲಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮದುವೆ ಸಮಾರಂಭಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಇದೆ.
Punjab Chief Minister Bhagwant Mann is all set to get married to Dr Gurpreet Kaur in a private ceremony tomorrow, six years after divorce from his first wife.The wedding ceremony will be held on Thursday and the function will be attended by close family members and relatives. CM Bhagwant Mann will get married at his official residence.Delhi Chief Minister and AAP national convenor Arvind Kejriwal will also be in attendance during the wedding ceremonies.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm