ಬ್ರೇಕಿಂಗ್ ನ್ಯೂಸ್
12-07-22 10:02 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 12 : ದುಬೈನಿಂದ ಮಧುರೈಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನದ ಮುಂದಿನ ಚಕ್ರ ಅಸಮರ್ಪಕ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ವಿಮಾನ ವಿಳಂಬವಾಗಿ ತಲುಪಿದೆ. ಕಳೆದ 24 ದಿನಗಳಲ್ಲಿ ಸ್ಪೈಸ್ ಜೆಟ್ ಕಂಪನಿಯ ವಿಮಾನಗಳು ತಾಂತ್ರಿಕ ದೋಷವನ್ನು ಎದುರಿಸುತ್ತಿರುವ 9ನೇ ಘಟನೆ ಇದಾಗಿದೆ.
ವಿಟಿ-ಎಸ್‌ಝಡ್‌ಕೆ ನೋಂದಣಿ ಸಂಖ್ಯೆಯ ಬೋಯಿಂಗ್ ಬಿ 737 ಮ್ಯಾಕ್ಸ್ ವಿಮಾನ ಸೋಮವಾರ ಮಂಗಳೂರಿನಿಂದ ದುಬೈಗೆ ತೆರಳಿತ್ತು. ವಿಮಾನ ಲ್ಯಾಂಡ್ ಆದ ತಕ್ಷಣ ತಂತ್ರಜ್ಞರು ಪರಿಶೀಲನೆ ನಡೆಸಿದಾಗ ಅದರ ಮುಂದಿನ ಚಕ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ದೋಷ ಪತ್ತೆಯಾದ ಬಳಿಕ ಸ್ಪೈಸ್‌ಜೆಟ್ ಕಂಪನಿ ಪ್ರತಿನಿಧಿಗಳು, ಆ ವಿಮಾನವನ್ನು ಅಲ್ಲಿಯೇ ಬಿಟ್ಟು ಮಧುರೈಗೆ ಬರಲು ಮುಂಬೈನಿಂದ ದುಬೈಗೆ ಇನ್ನೊಂದು ವಿಮಾನವನ್ನು ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ವಿಮಾನಯಾನ ಸಂಸ್ಥೆ ಕೊನೇ ಕ್ಷಣದ ತಾಂತ್ರಿಕ ಸಮಸ್ಯೆಯಿಂದ ವಿಮಾನ ವಿಳಂಬವಾಗಿದೆ ಎಂದು ಪ್ರಯಾಣಿಕರಿಗೆ ಸ್ಪಷ್ಟೀಕರಣ ನೀಡಿತ್ತು.

ಜುಲೈ 2 ರಂದು ಜಬ್ಬಲ್‌ಪುರಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ 5,000 ಅಡಿ ಎತ್ತರದಲ್ಲಿರುವಾಗ ಹೊಗೆ ಕಂಡುಬಂದಿತ್ತು. ಬಳಿಕ ಅದನ್ನು ದೆಹಲಿಯಲ್ಲಿ ಇಳಿಸಲಾಗಿತ್ತು.
ಸ್ಪೈಸ್‌ಜೆಟ್ ವಿಮಾನಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿರುವುದರಿಂದ ಭಾರತೀಯ ವಿಮಾನ ಪ್ರಾಧಿಕಾರದಿಂದ ಕಂಪನಿಗೆ ಶೋಕಾಸ್ ನೀಡಲಾಗಿತ್ತು. ಇದು 24 ದಿನಗಳಲ್ಲಿ ವರದಿಯಾಗಿರುವ ಸ್ಪೈಸ್‌ಜೆಟ್‌ನ ತಾಂತ್ರಿಕ ದೋಷದ 9ನೇ ಘಟನೆಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
SpiceJet’s Dubai-Madurai flight was delayed on Monday after the nose wheel of the Boeing B737 Max aircraft malfunctioned, marking the ninth such incident in 24 days.On July 6, the Directorate General of Civil Aviation (DGCA) had issued a show-cause notice to the airlines after it repeated eight incidents since June 19 where flights were affected due to malfunctioning of aircraft.The aviation regulator said that the budget carrier had “failed” to establish safe, efficient and reliable air services.
23-02-26 05:15 pm
HK News Staffer
ಮಕ್ಕಳು ತಮ್ಮನ್ನು ನೋಡಿಕೊಳ್ತಿಲ್ಲ ಎಂಬ ನೋವು ; ಕೊಡಗ...
23-02-26 12:35 pm
ಜೂನ್ ಒಳಗಡೆ ಸ್ಥಳೀಯ ಸಂಸ್ಥೆ ಚುನಾವಣೆ ; ಸಿಎಂ ಸಿದ್ದ...
23-02-26 11:14 am
ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್...
21-02-26 11:27 am
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
23-02-26 06:57 pm
HK News Desk
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ತಮಿಳುನಾಡು,...
22-02-26 06:19 pm
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
23-02-26 08:20 pm
Mangaluru Correspondent
Mangalore, Belthangady: ಆಂಬುಲೆನ್ಸ್ ನಲ್ಲೇ ಮಗುವ...
23-02-26 12:19 pm
Mangalore, Thokottu: ವಿದ್ಯುತ್ ಆಘಾತಕ್ಕೊಳಗಾಗಿ ಯ...
23-02-26 12:00 pm
ನನ್ನ ಅಕ್ಕಿ, ತರಕಾರಿ ನಾನೇ ಬೆಳೆಯುತ್ತೇನೆ, ನೀವೂ ಬೆ...
22-02-26 06:55 pm
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
23-02-26 10:44 pm
HK News Desk
ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ...
23-02-26 09:15 pm
Tumkur Robbery: ತುಮಕೂರಿನಲ್ಲಿ ಖಾರದ ಪುಡಿ ಎರಚಿ ಜ...
23-02-26 07:35 pm
Udupi: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್...
23-02-26 04:30 pm
ನೆರೆಮನೆಯಿಂದ ಚಿನ್ನ ಕದ್ದ ಆರೋಪ ; ಅಡೂರು ಠಾಣೆಗೆ ಕರ...
23-02-26 11:36 am