ಬ್ರೇಕಿಂಗ್ ನ್ಯೂಸ್
12-07-22 10:16 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜುಲೈ 12 : ಕೆಲವರಿಗೆ ಇನ್ನೊಬ್ಬರನ್ನು ನೋಡಿ ಅವರನ್ನು ಅನುಸರಿಸುವ ಖಯಾಲಿ. ಅದಕ್ಕಾಗಿ ಏನೆಲ್ಲ ಕಸರತ್ತು ಮಾಡುತ್ತಾರೆ. ಅಮೆರಿಕದಲ್ಲಿ ಮಾಡೆಲ್ ಕಂ ಉದ್ಯಮಿಯೂ ಆಗಿರುವ ಯುವತಿಯೊಬ್ಬಳು ಹಾಲಿವುಡ್ಡಿನ ಫೇಮಸ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಹೋಲುವಂತೆ ಸರ್ಜರಿ ಮಾಡಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ.
ರಿಯಾಲಿಟಿ ಸೂಪರ್ ಸ್ಟಾರ್ ಆಗಿರುವ ಮಾಡೆಲ್ ಜೆನ್ನಿಫರ್ ಪ್ಯಾಂಪ್ಲೋನಾ(29) ಈ ರೀತಿ ಎಡವಟ್ಟು ಮಾಡಿಕೊಂಡಿರುವಾಕೆ. ಕಿಮ್ ಕಾರ್ಡಶಿಯನ್ ಆಗುವುದಕ್ಕಾಗಿ ಈಕೆ 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಅಂದರೆ ನೀವು ನಂಬಲೇಬೇಕು. ಕೊನೆಗೆ ಎಲ್ಲವೂ ಆದಬಳಿಕ ಅದರಿಂದ ತೃಪ್ತಿಯಾಗದ ಮಾಡೆಲ್, ಮತ್ತೆ ಮೊದಲಿನಂತೆ ಕಾಣಬೇಕೆಂದು ಬಯಸಿ ಸರ್ಜರಿ ಮಾಡಿಕೊಂಡಿದ್ದಾಳೆ.
ಕಿಮ್ ರೂಪದಲ್ಲಿ ಕಾಣಲು ಈಕೆ 12 ವರ್ಷದಲ್ಲಿ ಬರೋಬ್ಬರಿ 4.7 ಕೋಟಿ ರೂ. ಖರ್ಚು ಮಾಡಿದ್ದಾಳಂತೆ. ಇದೀಗ ಮತ್ತೆ ನಿಜ ರೂಪ ಪಡೆಯಲು ಮತ್ತೆ 95,49,660 ರೂ. ಖರ್ಚು ಮಾಡಿದ್ದಾಳೆ. ಇಂಥ ವಿಚಿತ್ರ ಖಯಾಲಿಯಿಂದಾಗಿ ಜೆನ್ನಿಫರ್ ಅಮೆರಿಕದಲ್ಲಿ ಭಾರೀ ಸುದ್ದಿಗೂ ಗ್ರಾಸವಾಗಿದ್ದಾಳೆ.
ಆರಂಭದಲ್ಲಿ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದೆ. ಹೀಗಾಗಿ ಜನ ನನ್ನನ್ನು ಕಾರ್ಡಶಿಯನ್ ಎಂದೇ ಕರೆಯುತ್ತಿದ್ದರು. ಮೊದ ಮೊದಲು ಇದನ್ನು ಕೇಳಿ ನನಗೆ ಖುಷಿ ಆಗುತ್ತಿತ್ತು. ಆದರೆ ಕ್ರಮೇಣ ನನಗೆ ಇದೇ ವಿಚಾರ ಕಿರಿಕಿರಿಯಾಗಲು ಪ್ರಾರಂಭಿಸಿತ್ತು. ಹೀಗಾಗಿ ನನ್ನ ಮೊದಲಿನ ರೂಪವೇ ಬರುವಂತಾಗಲು ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದೇನೆ ಎಂದು ಜೆನ್ನಿಫರ್ ತಿಳಿಸಿದ್ದಾಳೆ.
ಜೆನ್ನಿಫರ್ ತಾನು 17ನೇ ವಯಸ್ಸಿನಲ್ಲಿದ್ದಾಗಲೇ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಳು. 12 ವರ್ಷಗಳಲ್ಲಿ 40 ಬಾರಿ ಸರ್ಜರಿ ಮಾಡಿಕೊಂಡ ಬಗ್ಗೆ ತಾನೇ ಬೇಸರ ಪಟ್ಟಿದ್ದು ಈ ರೀತಿ ಯಾರೂ ಮಾಡ್ಕೋಬೇಡಿ ಎಂದು ಹೇಳಿದ್ದಾಳೆ. ಈಕೆಯ ಪ್ಲಾಸ್ಟಿಕ್ ಸರ್ಜರಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Versace model Jennifer Pamplona, after spending nearly $600K on procedures to transform herself into a Kim Kardashian lookalike, has now paid $120K to "detransition" back to her former appearance.According to New York Post, the 29-year-old model had about 40 cosmetic operations over a 12-year period in an effort to imitate the celebrity, but she eventually realized that her pleasure was only at the surface level.
06-05-25 09:38 pm
HK News Desk
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm