ಬ್ರೇಕಿಂಗ್ ನ್ಯೂಸ್
15-07-22 02:52 pm HK News Desk ದೇಶ - ವಿದೇಶ
ಪಾಟ್ನಾ, ಜುಲೈ 15: ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ತರಬೇತಿ ಶಿಬಿರಗಳು ಆರೆಸ್ಸೆಸ್ ನಡೆಸುವ ಶಾಖೆಗಳಂತೆ, ಇಲ್ಲಿಯೂ ಕರಾಟೆ, ಮಾರ್ಶಲ್ ಆರ್ಟ್ ರೀತಿಯ ತರಬೇತಿಗಳನ್ನು ನೀಡುತ್ತಾರೆ ಎಂದು ಪಾಟ್ನಾ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಬಿಹಾರದಲ್ಲಿ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಫ್ಐ ಅನ್ನು ಆರೆಸ್ಸೆಸ್ ಶಾಖೆಗೆ ಹೋಲಿಸಿರುವ ಪೊಲೀಸ್ ಅಧಿಕಾರಿಗೆ ಮೆಂಟಲ್ ಸರಿ ಇಲ್ಲವೆಂದು ಟೀಕಿಸಿದ್ದಾರೆ.
ಪಾಟ್ನಾ ನಗರದ ಸೀನಿಯರ್ ಸುಪರಿಡೆಂಟ್ ಆಫ್ ಪೊಲೀಸ್ ಮಾನವ್ ಜಿತ್ ಸಿಂಗ್ ಧಿಲ್ಲೋನ್ ಬಿಹಾರದಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸರಕಾರದ ಕಡೆಯಿಂದ ಶೋಕಾಸ್ ನೋಟೀಸ್ ಜಾರಿಯಾಗಿದೆ. ಪ್ರಧಾನಿ ಆಗಮನ ಸಂದರ್ಭದಲ್ಲಿ ದೇಶದ್ರೋಹಿ ಚಟುವಟಿಕೆಯಲ್ಲಿ ನಿರತವಾಗಿದ್ದ ಪ್ರಕರಣ ಸಂಬಂಧಿಸಿ ಗುರುವಾರ ಮಾಧ್ಯಮ ಗೋಷ್ಠಿ ನಡೆಸಿದ್ದ ಪಾಟ್ನಾ ಎಸ್ಎಸ್ಪಿ ಮಾನವ್ ಜಿತ್ ಸಿಂಗ್ ಧಿಲ್ಲೋನ್, ಪಿಎಫ್ಐ ಸಂಘಟನೆ ಕೂಡ ಮದ್ರಸಾ ಮತ್ತು ಮಸೀದಿಗಳನ್ನು ಟಾರ್ಗೆಟ್ ಮಾಡಿಕೊಂಡು ಅಲ್ಲಿ ಯುವಕರಿಗೆ ಮೂಲಭೂತವಾದ ಬಿತ್ತುತ್ತಿದೆ. ಇವರ ವರ್ತನೆ, ಗುರಿಗಳನ್ನು ನೋಡಿದರೆ, ಆರೆಸ್ಸೆಸ್ ನವರು ಶಾಖೆಗಳನ್ನು ಮಾಡಿದಂತೆ ಇವರೂ ಮಾಡುತ್ತಿದ್ದಾರೆ ಅನಿಸುತ್ತಿದೆ. ಯುವಕರಿಗೆ ದೈಹಿಕ ಶಿಕ್ಷಣ ನೀಡುವ ನೆಪದಲ್ಲಿ ತಮ್ಮ ಅಜೆಂಡಾಗಳನ್ನು ಹೇರುತ್ತಿದ್ದಾರೆ. ತರಬೇತಿ ಶಿಬಿರದಲ್ಲಿ ಮಾರ್ಶಲ್ ಆರ್ಟ್, ಕತ್ತಿ, ದೊಣ್ಣೆಗಳ ಬಳಕೆ ಬಗ್ಗೆ ಹೇಳುತ್ತಿರುವುದರ ಬಗ್ಗೆ ನಮಗೆ ಸಾಕ್ಷ್ಯಗಳು ಸಿಕ್ಕಿವೆ. ಬ್ರೇನ್ ವಾಶ್ ಮಾಡಿ ಯುವಕರನ್ನು ಎತ್ತಿ ಕಟ್ಟುವುದು, ಕೋಮು ಧ್ರುವೀಕರಣಕ್ಕೆ ಪ್ರೇರಣೆ ನೀಡುತ್ತಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದರು.
ಯಾವುದೇ ಮುಂಚೂಣಿ ಧಾರ್ಮಿಕ ಸಂಘಟನೆಗಳು, ಸಂಸ್ಥೆಗಳು ಇದರಲ್ಲಿ ಶಾಮೀಲಾಗಿರುವುದು ಕಂಡುಬಂದಿಲ್ಲ. ಆರೋಪಿಗಳು ಈ ಹಿಂದೆ ಸಿಮಿ ಕಾರ್ಯಕರ್ತರಾಗಿದ್ದು, ಸಮಾಜದ ಮುಖ್ಯ ವಾಹಿನಿಯಿಂದ ದೂರ ಇದ್ದವರು. ಪಿಎಎಫ್ಐ ರೀತಿಯ ಸಂಘಟನೆಗಳಡಿ ಹಲವಾರು ಭೂಗತ ಸೆಲ್ ಗಳು ಕಾರ್ಯ ನಿರ್ವಹಿಸುತ್ತವೆ. ಆರೋಪಿಗಳು ತಮ್ಮ ಕಾರ್ಯಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅವರ ಮುಖ್ಯ ಅಜೆಂಡಾ ಏನಂದ್ರೆ, ಮುಸ್ಲಿಮರು ಹೆಚ್ಚೆಚ್ಚು ಕಿರುಕುಳ, ಹಿಂಸೆಗೆ ಒಳಗಾದರೆ ಅವರು ತಮ್ಮ ಸ್ವರಕ್ಷಣೆಗಾಗಿ ಇಂತಹ ಸಂಘಟನೆಗಳನ್ನು ಸೇರುತ್ತಾರೆ ಎನ್ನುವುದು ಎಂಬುದಾಗಿ ಮಾನವ್ ಜಿತ್ ಧಿಲ್ಲೋನ್ ಹೇಳಿದ್ದರು.
ಪೊಲೀಸ್ ಅಧಿಕಾರಿ ಆರೆಸ್ಸೆಸ್ ಬಗ್ಗೆ ಹೋಲಿಕೆ ಮಾಡಿರುವುದನ್ನು ಟೀಕಿಸಿರುವ ಬಿಜೆಪಿ ಶಾಸಕ ಹರೀಶ್ ಭೂಷಣ್ ಠಾಕೂರ್, ಇದು ಆತ ಮತಿಭ್ರಮಣೆಗೊಂಡಿರುವುದನ್ನು ಸೂಚಿಸುತ್ತದೆ. ಮಾನಸಿಕವಾಗಿ ಸರಿಯಾಗಿಲ್ಲ ಎನ್ನುವುದನ್ನು ಹೇಳುತ್ತದೆ. ಅಧಿಕಾರಿ ಕೂಡಲೇ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಹರಿಹಾಯ್ದಿದ್ದಾರೆ.
Banned outfit PFI trains youth in martial arts just like RSS shakhas, a senior Patna Police officer said, fuelling a massive political outrage in a state where the BJP is part of the ruling coalition with the JD(U). A show cause notice has been issued, asking the senior cop to explain his comments within 48 hours.Patna’s Senior Superintendent of Police (SSP) Manavjit Singh Dhillon is at the eye of the storm caused by his comments at a media briefing this afternoon.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm