ಬ್ರೇಕಿಂಗ್ ನ್ಯೂಸ್
16-07-22 12:31 pm HK News Desk ದೇಶ - ವಿದೇಶ
ಸಿನಾಲೋವಾ ಜು.16: ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡ ಘಟನೆ ಮೆಕ್ಸಿಕೋದ ಸಿನಾಲೋವಾದಲ್ಲಿ ನಡೆದಿದೆ.
ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಆದರೆ ಈ ಘಟನೆಗೂ ಶುಕ್ರವಾರ ಸಿನಾಲೋವಾದ ಮತ್ತೊಂದು ಭಾಗದಲ್ಲಿ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೊನನ್ನು ಬಂಧಿಸಿದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
1985 ರಲ್ಲಿ ಆಂಟಿ-ನಾರ್ಕೋಟಿಕ್ ಏಜೆಂಟ್‌ನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಕುಖ್ಯಾತ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೊನನ್ನು ನೌಕಾಪಡೆಯು ಶುಕ್ರವಾರ ಬಂಧಿಸಿತ್ತು.
1980 ರ ದಶಕದಲ್ಲಿ ಲ್ಯಾಟಿನ್ ಅಮೆರಿಕದ ಅತ್ಯಂತ ಶಕ್ತಿಶಾಲಿ ಮಾದಕವಸ್ತು ಕಳ್ಳಸಾಗಣೆ ಸಂಸ್ಥೆಗಳಲ್ಲಿ ಒಂದಾದ ಗ್ವಾಡಲಜರಾ ಕಾರ್ಟೆಲ್‌ನ ಸಹ-ಸಂಸ್ಥಾಪಕನಾಗಿದ್ದ ರಾಫೆಲ್ ಕ್ಯಾರೋ ಕ್ವಿಂಟೊರೊ ಅಮೆರಿಕದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿರುವ ನೌಕಾಪಡೆ, ವಿಮಾನ ಅಪಘಾತಕ್ಕೂ ಮಾದಕವಸ್ತು ಕಳ್ಳಸಾಗಣೆದಾರನ ಬಂಧನಕ್ಕೂ ಸಂಬಂಧ ಇರುವ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದೆ.
ಹಲವು ವರ್ಷಗಳಿಂದ ಪರಾರಿಯಾಗಿದ್ದ ಡ್ರಗ್ಸ್ ಸಾಗಣೆದಾರ ಕ್ಯಾರೊ ಕ್ವಿಂಟೆರೊ, ಸಿನಾಲೋವಾದ ಚೊಯಿಕ್ಸ್ ಪಟ್ಟಣದಲ್ಲಿ ಅಡಗಿಕೊಂಡಿದ್ದ. ಸ್ನಿಫರ್ ನಾಯಿಯಿಂದ ಆತನನ್ನು ಪತ್ತೆಮಾಡಲಾಯಿತು ಎಂದು ನೌಕಾಪಡೆ ತಿಳಿಸಿದೆ.
Fourteen people were killed when a military helicopter crashed on Friday in northwestern Mexico, the navy said. "A Black Hawk helicopter was involved in an accident, the cause of which is unknown at this time," a statement said.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm