ಬ್ರೇಕಿಂಗ್ ನ್ಯೂಸ್
17-07-22 11:10 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 17 : ಜುಲೈ 18 ರಿಂದ ದಿನಬಳಕೆಯ ವಿವಿಧ ವಸ್ತಗಳು ಮತ್ತು ಹಲವು ಅವಶ್ಯಕ ಸೇವೆಗಳ ಮೇಲೆ ಜಿ ಎಸ್ಟಿ ತೆರಿಗೆ ವಿಧಿಸಲು ಕೇಂದ್ರ ಸರಕಾರ ಮುಂದಾಗಿದೆ. ಆಹಾರ ಪದಾರ್ಥಗಳಿಂದ ಹಿಡಿದು ಬಟ್ಟೆ ಬರೆಗಳ ಮೇಲೂ ಹೆಚ್ಚುವರಿ ಜಿ ಎಸ್ ಟಿ ವಿಧಿಸಲಾಗ್ತದೆ. ಹೀಗಾಗಿ ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯಗಳು, ಮಂಡಕ್ಕಿ, ಸಾವಯವ ಗೊಬ್ಬರ, ಪ್ಯಾಕ್ ಮಾಡಿದ ಬ್ರಾಂಡೆಡ್ ಭೂಪಟ, ಚಾರ್ಟ್ , ಅಟ್ಲಾಸ್ , ಸೋಲಾರ್ ವಾಟರ್ ಹೀಟರ್, ಮುದ್ರಣ, ಬರ ಚಿತ್ರಕಲೆಯ ಇಂಕ್, ಎಲ್ ಇಡಿ ಬಲ್ಬ್, ಎಲ್ ಇಡಿ ಲ್ಯಾಪ್ ಟಾಪ್ ದರ ಹೆಚ್ಚಲಿದೆ.
ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್ , ಜವಳಿ ಸೇವೆಗಳು, ಅಂಚೆ ಇಲಾಖೆ, ಬುಕ್ ಪೋಸ್ಟ್, 10 ಗ್ರಾಂಗಿಂತ ಕಡಿಮೆ ಇರುವ ಲಕೋಟೆ, ಚೆಕ್ ಬುಕ್, ನಿತ್ಯದ ಬಾಡಿಗೆ 1000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೂ ಇನ್ನು ಶೇ.12ರಷ್ಟು ತೆರಿಗೆ ಜಾರಿ.
- ದಿನಕ್ಕೆ 5000 ರು.ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು, ಮಾಸಿಕ 2500 ರು.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿ ಎಸ್ ಟಿ ಜಾರಿಯಾಗಲಿದೆ. ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು, ವಸತಿ ಕಟ್ಟಡಗಳನ್ನು ಬಾಡಿಗೆಗಾಗಿ ನೀಡಿದ್ದರೆ ಅದಕ್ಕೆ ಈವರೆಗೆ ಇದ್ದ ವಿನಾಯಿತಿ ರದ್ದಾಗಲಿದೆ.
ಬ್ಲಡ್ ಬ್ಯಾಂಕ್‌ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯ್ತಿಯೂ ರದ್ದುಪಡಿಸಲಾಗಿದೆ. ಈಗಾಗಲೇ ಪ್ರತಿ ವಸ್ತುವಿನ ಬೆಲೆ ದುಬಾರಿಯಾಗಿದೆ. ಇನ್ನು ಸೋಮವಾರದಿಂದ ಎಲ್ಲ ವಸ್ತುಗಳ ಬೆಲೆ ಇನ್ನಷ್ಟು ಗಗನಕ್ಕೇರಲಿದೆ. ಹೀಗಾಗಿ ಜನರು ಕಂಗಾಲಾಗಿದ್ದು, ಅಸಾಮಾಧಾನ ಹೊರಹಾಕ್ತಿದ್ದಾರೆ.
From next week, several household items including hotels and bank services among other things, will get costlier after the GST rates were hiked for several items in the 47th Goods and Services Tax meeting in Chandigarh last month. The GST rate hike on these items will be implemented from Monday, July 18, after which the common man will have to pay extra to buy day to day items, further increasing their kitchen budget. Products like curd, lassi, buttermilk, paneer, wheat, rice etc which are pre-packaged and labelled, will attract a GST of 5% from 18 July.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm