ಬ್ರೇಕಿಂಗ್ ನ್ಯೂಸ್
19-07-22 10:33 pm HK News Desk ದೇಶ - ವಿದೇಶ
ಲಂಡನ್, ಜುಲೈ 19: ಭಾರತ ಮೂಲದ ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿ ಸ್ಥಾನಕ್ಕೆ ಇನ್ನೂ ಹತ್ತಿರವಾಗಿದ್ದಾರೆ. ಸಂಸದರ ನಾಲ್ಕನೇ ಸುತ್ತಿನ ಓಟಿಂಗಲ್ಲಿ ರಿಷಿ ಸುನಕ್ ಅತಿ ಹೆಚ್ಚು ಮತಗಳನ್ನು ಪಡೆದು ಟಾಪರ್ ಆಗಿದ್ದಾರೆ.
ನಾಲ್ಕನೇ ಸುತ್ತಿನಲ್ಲಿ ರಿಷಿ ಸುನಕ್ 118 ಮತಗಳನ್ನು ಪಡೆದಿದ್ದಾರೆ. ಅವರ ಜೊತೆಗೆ ಸ್ಪರ್ಧೆಯಲ್ಲಿರುವ ಮಾಜಿ ರಕ್ಷಣಾ ಸಚಿವ ಪೆನ್ನಿ ಮೋರ್ಡಾಂಟ್ 92, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಲಿಸ್ ಟ್ರೆಸ್ 86 ಮತ್ತು ಸಂಸದ ಕೆಮಿ ಬೆಡ್ನೋಚ್ 54 ಮತಗಳನ್ನು ಪಡೆದಿದ್ದಾರೆ. ಈ ಸುತ್ತಿನಲ್ಲಿ ಬೆಡ್ನೋಚ್ ಕಡಿಮೆ ಮತಗಳನ್ನು ಪಡೆದಿರುವುದರಿಂದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ರಿಷಿ ಸುನಕ್ ಮೂರನೇ ಸುತ್ತಿನಲ್ಲಿ 115 ಮತಗಳನ್ನು ಪಡೆದಿದ್ದು, ನಾಲ್ಕನೇ ಸುತ್ತಿನಲ್ಲಿ ಇನ್ನೂ ಹೆಚ್ಚು ಮತಗಳನ್ನು ಪಡೆದು ಪ್ರಧಾನಿ ಸ್ಥಾನದತ್ತ ಹತ್ತಿರವಾಗಿದ್ದಾರೆ.
ಜುಲೈ 20ರಂದು ಐದನೇ ಸುತ್ತಿನ ಸ್ಪರ್ಧೆ ನಡೆಯಲಿದ್ದು, ಮೂರು ಮಂದಿಯ ಸ್ಪರ್ಧೆಯಲ್ಲಿ ಒಬ್ಬರು ಹೊರಬೀಳುತ್ತಾರೆ. ಆಬಳಿಕ ಕನ್ಸರ್ವೇಟಿವ್ ಪಕ್ಷದಲ್ಲೇ ಇಬ್ಬರು ಪ್ರಧಾನಿ ಆಕಾಂಕ್ಷಿಗಳ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಒಂದು ತಿಂಗಳ ಕಾಲ ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ರಿಷಿ ಸುನಕ್ ಸದ್ಯಕ್ಕೆ ಸಂಸದರ ಪೈಕಿ ಮೂರನೇ ಎರಡರಷ್ಟು ಹತ್ತಿರತ್ತಿರ ಮತಗಳನ್ನು ಪಡೆದಿದ್ದು, ಭಾರೀ ಅಂತರದಿಂದ ಗೆಲ್ಲುವ ಸುಳಿವು ನೀಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ 1.80 ಲಕ್ಷ ಸದಸ್ಯರು ಮತಗಳನ್ನು ಹಾಕಲಿದ್ದು, ಅದರ ಫಲಿತಾಂಶ ಸೆಪ್ಟಂಬರ್ 5ರಂದು ಹೊರಬೀಳಲಿದೆ.
ಈಗಾಗಲೇ ಇಂಗ್ಲೆಂಡಿನಲ್ಲಿ ರಿಷಿ ಸುನಕ್ ಪರವಾಗಿ ಪ್ರಚಾರ ಕಾರ್ಯ ನಡೆಯುತ್ತಿದ್ದು ಭಿತ್ತಿಪತ್ರಗಳು ಕಂಡುಬಂದಿವೆ. ಎಲ್ಲವೂ ಅಂದ್ಕೊಂಡ ರೀತಿಯಲ್ಲೇ ಆದಲ್ಲಿ ಭಾರತ ಮೂಲದ ಅದರಲ್ಲೂ ಕರ್ನಾಟಕದ ಅಳಿಯ ಇಂಗ್ಲೆಂಡ್ ಪ್ರಧಾನಿಯಾಗೋದು ಖಚಿತ. ಅಂದಹಾಗೆ, ರಿಷಿ ಸುನಕ್ ಇನ್ಫೋಸಿಸ್ ಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿಯವರ ಅಳಿಯ.
Former Chancellor Rishi Sunak on Monday topped the latest round of voting among the Conservative Party members of Parliament as the race to replace Boris Johnson as Prime Minister narrowed down to four, with Tom Tugendhat out of the contest after receiving the lowest votes.The British Indian former finance minister received 115 votes in the third round of voting, with Trade Minister Penny Mordaunt holding on to the second spot with 82 votes followed by Foreign Secretary Liz Truss with 71 votes, and former equalities minister Kemi Badenoch at 58 votes.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 05:45 pm
HK News Desk
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
22-10-25 04:30 pm
Mangalore Correspondent
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm