ಬ್ರೇಕಿಂಗ್ ನ್ಯೂಸ್
25-07-22 01:09 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 25 : ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 10.15ಕ್ಕೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೂತನ ರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸಿದರು.
ದ್ರೌಪದಿ ಮುರ್ಮು ಅವರು, ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಹಾಗೂ ಎರಡನೆಯ ಮಹಿಳಾ ರಾಷ್ಟ್ರಪತಿಯಾಗಿ ಹೊರಹೊಮ್ಮಿದ್ದಾರೆ. ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ದ್ರೌಪದಿ ಮುರ್ಮು, ಬೆಳಗ್ಗೆ ರಾಜ್ ಘಾಟ್ಗೆ ಭೇಟಿ ನೀಡಿ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಪ್ರಮಾಣವಚನದ ಬಳಿಕ ಮಾತನಾಡಿದ ನೂತನ ಮುರ್ಮು, ಸ್ವತಂತ್ರ ಭಾರತವು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಾನು ರಾಷ್ಟ್ರಪತಿಯಾಗಿರುವುದು ತುಂಬಾ ಸಂತಸ ತಂದಿದೆ. ನನ್ನ ಗ್ರಾಮದಲ್ಲಿ ಕಾಲೇಜಿಗೆ ಹೋದ ಮೊದಲ ಮಹಿಳೆ ನಾನು. ವಾರ್ಡ್ ಕೌನ್ಸಿಲರ್ನಿಂದ ರಾಷ್ಟ್ರಪತಿ ಹುದ್ದೆಗೆ ಬಂದಿದ್ದೇನೆ. ಭಾರತದ ಪ್ರಭಾಪ್ರಭುತ್ವದ ಶಕ್ತಿಯಿಂದ ಇದೆಲ್ಲವೂ ಸಾಧ್ಯವಾಗಿದೆ. ದೇಶದ ಬಡವರು, ಮಹಿಳೆಯರ ಪ್ರತಿನಿಧಿಯಾಗಿ ಇರುತ್ತೇನೆ ಎಂದು ಹೇಳಿದರು.
ಸಂತಾಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಕುಸುಮಿ ಪ್ರದೇಶದಲ್ಲಿ 1958ರ ಜೂ.20ರಂದು ಜನಸಿದರು. ಅವರ ತಂದೆ ಮತ್ತು ತಾತ ಗ್ರಾಮ ಪಂಚಾಯಿತಿ ಮುಖ್ಯಸ್ಥರಾಗಿದ್ದರು. ಕಲಾ ವಿಷಯದಲ್ಲಿ ಪದವೀಧರೆಯಾದ ದ್ರೌಪದಿ, ಕೆಲವು ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. 1997ರಲ್ಲಿ ರಾಯರಂಗಾಪುರ ನಗರ ಪಂಚಾಯಿತಿಗೆ ಆಯ್ಕೆ ಆಗುವ ಮೂಲಕ ರಾಜಕೀಯ ಪ್ರವೇಶ. ನಂತರ ಒಡಿಶಾ ವಿಧಾನಸಭೆಗೆ ಎರಡು ಸಾರಿ ಆಯ್ಕೆ ಆಗಿದ್ದರು. 2000ರಿಂದ 2004ರ ವರೆಗೆ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದರು. 2015ರಿಂದ 2021ರ ವರೆಗೆ ಜಾರ್ಖಂಡ್ ರಾಜ್ಯಪಾಲೆ ಆಗಿ ಸೇವೆ ಸಲ್ಲಿಸಿದ್ದರು.
ಮುರ್ಮು ಅವರು ತಮ್ಮ ಕುಟುಂಬದಲ್ಲಿ ಎದುರಾದ ದುರಂತಗಳ ಮಧ್ಯೆಯೂ ರಾಜಕೀಯ ಜೀವನದಲ್ಲಿ ಮುಂದುವರಿದಿದ್ದರು. ಅವರ ಓರ್ವ ಪುತ್ರ 2009ರಲ್ಲಿ ನಿಗೂಢ ಸಾವನ್ನಪ್ಪಿದರೆ, ಇನ್ನೊಬ್ಬ ಮಗ 2012ರಲ್ಲಿ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟಿದ್ದ. ದ್ರೌಪದಿ ಅವರ ಪತಿ ಶ್ಯಾಮಚರಣ ಮುರ್ಮು ಅವರು ಇದರ ನಡುವೆಯೇ ಹೃದಯಾಘಾತದಿಂದ ಅಸುನೀಗಿದ್ದರು. ಏಕಮಾತ್ರ ಪುತ್ರಿ ಇದ್ದು, ಆಕೆ ಪತಿಯೊಂದಿಗೆ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಒಡಿಶಾ ರಾಜ್ಯದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲಿಗರು ಮುರ್ಮು. ಭಾರತದಲ್ಲಿ 700ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, 10 ಕೋಟಿಗೂ ಅಧಿಕ ಜನಸಂಖ್ಯೆ ಇದೆ.
Droupadi Murmu was sworn-in as the 15th President of India on Monday by the Chief Justice of India NV Ramana. The CJI administered the oath of office to Droupadi Murmu at the Central Hall of the Parliament in New Delhi tomorrow at 10.15 AM.Murmu, 64, was declared the winner of the Presidential elections on July 21 after defeating opposition presidential candidate Yashwant Sinha to become the first tribal and the second woman to hold the top constitutional post.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am