ಪಿಎಫ್ಐ ನಿಷೇಧ ಆಗುತ್ತಾ..? ದೇಶಾದ್ಯಂತ ಬೇರುಬಿಟ್ಟ ಮತ್ತೊಂದು ‘’ಸಿಮಿ’’ಯೇ ಪಾಪ್ಯುಲರ್ ಫ್ರಂಟ್ ? ಕೇರಳದಿಂದ ಯುಪಿ, ದೆಹಲಿ, ಅಸ್ಸಾಂ ಹರಡಿದ್ದು ಹೇಗೆ ತೀವ್ರವಾದ ?!

22-09-22 10:29 pm       HK News Desk   ದೇಶ - ವಿದೇಶ

ದಲಿತ, ದಮನಿತರ, ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಹೋರಾಡುವ ಉದ್ದೇಶದಿಂದ 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಲಾಭ ರಹಿತ ಸಂಸ್ಥೆಯಾಗಿ ಹುಟ್ಟಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಕಾರ್ಯ ಚಟುವಟಿಕೆಯ ಕಾರಣಕ್ಕಾಗಿಯೇ ದೇಶದ ಭದ್ರತೆಗೆ ಸವಾಲಾಗುವ ರೀತಿ ಬದಲಾಗಿದ್ದು, ಭಾರತದಲ್ಲಿ ಸಂಘಟನೆಯೇ ನಿಷೇಧವಾಗುವ ಸನಿಹಕ್ಕೆ ಬಂದಿದೆ.

ನವದೆಹಲಿ, ಸೆ.22: ದಲಿತ, ದಮನಿತರ, ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಹೋರಾಡುವ ಉದ್ದೇಶದಿಂದ 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಲಾಭ ರಹಿತ ಸಂಸ್ಥೆಯಾಗಿ ಹುಟ್ಟಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಕಾರ್ಯ ಚಟುವಟಿಕೆಯ ಕಾರಣಕ್ಕಾಗಿಯೇ ದೇಶದ ಭದ್ರತೆಗೆ ಸವಾಲಾಗುವ ರೀತಿ ಬದಲಾಗಿದ್ದು, ಭಾರತದಲ್ಲಿ ಸಂಘಟನೆಯೇ ನಿಷೇಧವಾಗುವ ಸನಿಹಕ್ಕೆ ಬಂದಿದೆ. ಇಷ್ಟಕ್ಕೂ ಈ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹುಟ್ಟಿಕೊಂಡಿದ್ದು ಹೇಗೆ, ಸೀಮಿತ ಅವಧಿಯಲ್ಲಿ ಬೆಳೆದು ನಿಂತ ಪರಿ ಹೇಗೆ ಎನ್ನುವುದರ ಬಗ್ಗೆ ಇಲ್ಲೊಂದು ಅವಲೋಕನ.

2007ರಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಮೂರು ತೀವ್ರವಾದಿ ಸಂಘಟನೆಗಳು ಒಟ್ಟುಗೂಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್ನುವ ಸಂಘಟನೆಯನ್ನು ಹುಟ್ಟುಹಾಕಿತ್ತು. ಕೇರಳದ ದಿ ನೇಶನಲ್ ಡೆಮಾಕ್ರಟಿಕ್ ಫ್ರಂಟ್ (ಎನ್ ಡಿಎಫ್), ಕರ್ನಾಟಕದಲ್ಲಿ ಕರ್ನಾಟಕ ಫಾರಮ್ ಫಾರ್ ಡಿಗ್ನಿಟಿ(ಕೆಎಫ್ ಡಿ) ಮತ್ತು ತಮಿಳುನಾಡಿನಲ್ಲಿ ಮನಿದಾ ನೀತಿ ಪಸರಾಯಿ (ಎಂಎನ್ ಪಿ) ಎನ್ನುವ ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್ಐ ಮಾಡಲಾಗಿತ್ತು. ಕೇರಳದ ಕೋಜಿಕ್ಕೋಡಿನಲ್ಲಿ 2006ರ ನವೆಂಬರ್ ನಲ್ಲಿ ನಡೆದ ಸಮಾವೇಶದಲ್ಲಿ ಈ ಮೂರು ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್ಐ ಅಸ್ತಿತ್ವಕ್ಕೆ ತರುವ ನಿರ್ಣಯ ಮಾಡಲಾಗಿತ್ತು.

PFI Grand Conference - Bengaluru - Full program - YouTube

ಬೆಂಗಳೂರಿನಲ್ಲಿ ಮೊದಲ ಸಮಾವೇಶ

2007ರ ಫೆಬ್ರವರಿ 16ರಂದು ಪಿಎಫ್ಐ ವತಿಯಿಂದ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಎಂಪವರ್ ಇಂಡಿಯಾ ಕಾನ್ಫರೆನ್ಸ್ ಹೆಸರಲ್ಲಿ ಸಮಾವೇಶ ನಡೆಸಲಾಗಿತ್ತು. ಜನಸಾಮಾನ್ಯನ ಹಕ್ಕು ಮತ್ತು ಸ್ವಾತಂತ್ರ್ಯಗಳ ಕುರಿತು ಅರಿವು ಮೂಡಿಸುವ ಶಿಬಿರಗಳು ಅದರಲ್ಲಿ ನಡೆದಿದ್ದವು. ಕೆಲವೇ ವರ್ಷಗಳಲ್ಲಿ ದಕ್ಷಿಣ ಭಾರತದಾದ್ಯಂತ ಪಿಎಫ್ಐ ಸಂಘಟನೆ ವಿಸ್ತರಣೆಯಾಗಿತ್ತು. ಹತ್ತು ವರ್ಷಗಳಲ್ಲಿ ದೇಶಾದ್ಯಂತ ಹರಡಿಕೊಂಡಿದ್ದು, ಸದ್ಯಕ್ಕೆ 22 ರಾಜ್ಯಗಳಲ್ಲಿ ಪಿಎಫ್ಐ ಕಚೇರಿಗಳನ್ನು ಹೊಂದಿದೆ. ಅಲ್ಲದೆ, ನಾಲ್ಕು ಲಕ್ಷ ಸದಸ್ಯರನ್ನು ಹೊಂದಿದ್ದಾಗಿ ಪಿಎಫ್ಐ ಹೇಳಿಕೊಂಡಿತ್ತು. ಆನಂತರ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷವನ್ನು ಅಸ್ತಿತ್ವಕ್ಕೆ ತಂದು ಪಿಎಫ್ಐ ಸಂಘಟನೆಯ ರಾಜಕೀಯ ಸ್ವರೂಪ ಎಂದು ಹೇಳಲಾಗಿತ್ತು.

ಆದರೆ ಆನಂತರದ ವರ್ಷಗಳಲ್ಲಿ ಪಿಎಫ್ಐ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾಗಿ ಬೆಳೆದು ನಿಂತಿತ್ತು. ಕಾನೂನು ಪ್ರಾಧಿಕಾರಗಳು ಪಿಎಫ್ಐ ಕಾರ್ಯ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾರಂಭಿಸಿದ್ದವು. ವಿವಿಧ ಕಡೆಗಳಲ್ಲಿ ಪಿಎಫ್ಐ ಕಾರ್ಯಕರ್ತರು ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಾಗ ಸಂಘಟನೆಯ ಬಗ್ಗೆ ಪ್ರಶ್ನೆಗಳು ಮೂಡಲಾರಂಭಿಸಿದ್ದವು. ಇದಲ್ಲದೆ, ಇಪ್ಪತ್ತು ವರ್ಷಗಳ ಹಿಂದೆ ಮೂಲಭೂತವಾದ ಕಾರಣಕ್ಕೆ ನಿಷೇಧಗೊಂಡಿದ್ದ ಸಿಮಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದವರು ಪಿಎಫ್ಐ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಿಮಿ ಸಂಘಟನೆಯನ್ನು 2001ರಲ್ಲಿ ದೇಶದಲ್ಲಿ ನಿಷೇಧ ಮಾಡಲಾಗಿತ್ತು. ಅದರಲ್ಲಿ ತೊಡಗಿಸಿದ್ದ ಹಲವಾರು ಪ್ರಮುಖರನ್ನು ಬಂಧಿಸಿ, ಅವುಗಳ ಕಚೇರಿಯನ್ನು ಜಪ್ತಿ ಮಾಡಲಾಗಿತ್ತು.

'I Don't Hate My Attackers Like I Don't Hate The Axe They Used To Chop My  Hand': TJ Joseph

ಪ್ರೊಫೆಸರ್ ಕೈ ಕಡಿದಿದ್ದ ಪಿಎಫ್ಐ ಗೂಂಡಾಗಳು

ಕೇರಳದಲ್ಲಿ ಪಿಎಫ್ಐ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹಲವು ಸಂದರ್ಭಗಳಲ್ಲಿ ಸಾಬೀತಾಗಿತ್ತು. 2010ರಲ್ಲಿ ಕೋಜಿಕ್ಕೋಡ್ ನಲ್ಲಿ ಮಲಯಾಳಂ ಪ್ರೊಫೆಸರ್ ಆಗಿದ್ದ ಟಿಜೆ ಜೋಸೆಫ್ ಎಂಬವರ ಕೈಯನ್ನು ಕಡಿದು ಹಾಕಿದ್ದು ಪಿಎಫ್ಐ ಗೂಂಡಾಗಳ ಕೃತ್ಯ ಎನ್ನುವುದು ಕಂಡುಬಂದಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ ಆಗುವ ರೀತಿ ಪ್ರಶ್ನೆಗಳನ್ನು ನಮೂದಿಸಿದ್ದು ಟೆಜೆ ಜೋಸೆಫ್ ಎನ್ನುವ ಕಾರಣಕ್ಕೆ ಪಿಎಫ್ಐ ಕಾರ್ಯಕರ್ತರು ನಡುಬೀದಿಯಲ್ಲೇ ಅಡ್ಡಗಟ್ಟಿ ಅವರ ಬಲ ಕೈಯನ್ನೇ ಕಡಿದು ಹಾಕಿದ್ದರು.

Don't Criticise Judiciary, State: Kerala HC on Social Media Use

ನಿಷೇಧಿತ ಸಿಮಿಯ ಪಡಿಯಚ್ಚು ಎಂದಿದ್ದ ಕೇರಳ

ಪಿಎಫ್ಐ ಸಂಘಟನೆ ಅಸ್ತಿತ್ವಕ್ಕೆ ಬಂದ ಕೇವಲ ಐದು ವರ್ಷಗಳಲ್ಲೇ ಕೇರಳ ಸರಕಾರ ಹೈಕೋರ್ಟಿಗೆ ಅಪಿಡವಿಟ್ ಮಾಡಿತ್ತು. ಪಿಎಫ್ಐ ಅನ್ನುವುದು ನಿಷೇಧಿತ ಸಿಮಿಯ ಪಡಿಯಚ್ಚು ಅಲ್ಲದೇ ಬೇರೇನೂ ಅಲ್ಲ ಎಂದು ಹೇಳಿದ್ದಲ್ಲದೆ, 2012ರ ವರೆಗಿನ ಅವಧಿಯಲ್ಲಿ ಪಿಎಫ್ಐ ಕಾರ್ಯಕರ್ತರು ಎಸಗಿದ ಅಪರಾಧ ಕೃತ್ಯಗಳ ಬಗ್ಗೆ ವರದಿ ನೀಡಿದ್ದರು. 27 ಕೊಲೆ ಪ್ರಕರಣಗಳಲ್ಲಿ ಸಿಪಿಎಂ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಕೊಲೆಗೈಯಲಾಗಿತ್ತು. 86 ಕೊಲೆಯತ್ನ ಪ್ರಕರಣ, 125 ಕೋಮು ಗಲಭೆ ಪ್ರಕರಣಗಳಲ್ಲಿ ಪಿಎಫ್ಐ ಪಾತ್ರ ಇರುವ ಬಗ್ಗೆ ಕೇರಳ ಸರಕಾರ ಅಫಿಡವಿಟ್ ನೀಡಿತ್ತು. 2013ರ ವೇಳೆಗೆ 21 ಮಂದಿ ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಿಎಫ್ಐ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಸರಣಿ ಮಾತ್ರ ನಿಂತಿರಲಿಲ್ಲ.

Here's why slain RSS member Sharath Madiwala will thank Ravoof

ಕೋಮು ಗಲಭೆ, ಕೊಲೆ ಸರಣಿಗೆ ಕಾರಣ  

2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣದಲ್ಲಿಯೂ ಪಿಎಫ್ಐ ಕೈವಾಡ ಕಂಡುಬಂದಿತ್ತು. ಇಬ್ಬರು ಸಕ್ರಿಯ ಪಿಎಫ್ಐ ಕಾರ್ಯಕರ್ತರು ಪ್ರಕರಣದಲ್ಲಿ ಬಂಧಿತರಾಗಿದ್ದರು. ಆನಂತರ ದೆಹಲಿ ಗಲಭೆ, ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಗಳಲ್ಲಿಯೂ ಪಿಎಫ್ಐ ಕೈವಾಡ ಕೇಳಿಬಂದಿತ್ತು. ದೇಶದ ಹಲವೆಡೆ ನಡೆದ ಕೊಲೆ ಕೃತ್ಯಗಳಲ್ಲಿ ಪಿಎಫ್ಐ ಸಂಘಟನೆ ಕೈಯಾಡಿಸಿದ್ದು ಕಂಡುಬಂದಿತ್ತು. 2018ರಲ್ಲಿ ಎನ್ಐಎ ಅಧಿಕಾರಿಗಳು ಕೇಂದ್ರಕ್ಕೆ ನೀಡಿದ್ದ ಆಂತರಿಕ ವರದಿಯಲ್ಲಿ ದೇಶಾದ್ಯಂತ ಪಿಎಫ್ಐ, ಯುವಕರನ್ನು ತಾಲಿಬಾನ್ ಬ್ರಾಂಡಿನ ಇಸ್ಲಾಮಿನಡಿ ಪ್ರೇರಿಸುತ್ತಿರುವುದು, ಭಾರತದಲ್ಲಿ ರಾಜಕೀಯವನ್ನು ಕಮ್ಯುನಲ್ ಆಗಿಸುವುದರ ಬಗ್ಗೆ ವರದಿ ನೀಡಿದ್ದರು.

Karantaka govt mulling on ban of PFI, SDPI - INDIA - GENERAL | Kerala  Kaumudi Online

2017ರಲ್ಲಿ ಪಿಎಫ್ಐ ನಿಷೇಧದ ಬಗ್ಗೆ ಚರ್ಚೆ

2017 ಅಕ್ಟೋಬರ್ ನಲ್ಲಿ ಕೇಂದ್ರ ಗೃಹ ಸಚಿವಾಯಲಕ್ಕೆ ಬಂದ ವರದಿಗಳ ಆಧರಿಸಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕೇ, ಬೇಡವೇ ಎನ್ನುವ ಬಗ್ಗೆ ಅಧಿಕಾರಿಗಳು ಹಲವು ಸುತ್ತಿನ ಮಹತ್ವದ ಚರ್ಚೆಯನ್ನೂ ನಡೆಸಿದ್ದರು. ಪಿಎಫ್ಐ ವಿರುದ್ಧ ದಾಖಲಾಗಿರುವ ಕೇಸುಗಳ ಬಗ್ಗೆಯೂ ವಿಮರ್ಶೆ ನಡೆಸಿದ್ದರು. ಆದರೆ, ಪಿಎಫ್ಐ ನಿಷೇಧಿಸುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. 2018ರ ಮೇ 8ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಫ್ಐ ಮೇಲಿನ ಅಕ್ರಮ ಹಣಕಾಸು ನಿರ್ವಹಣೆಯನ್ನು ಪತ್ತೆ ಮಾಡಿದ್ದರು. ಟೆರರ್ ಫಂಡಿಂಗ್ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ್ದನ್ನು ಪತ್ತೆ ಮಾಡಿ ಪಿಎಫ್ಐ ವಿರುದ್ಧ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿತ್ತು.

Jharkhand government bans radical Islamist outfit Popular Front of India  for alleged links to ISIS

2018ರಲ್ಲಿ ಜಾರ್ಖಂಡಿನಲ್ಲಿ ಬ್ಯಾನ್ ಆಗಿತ್ತು

ಇದೇ ವೇಳೆಗೆ, ಬಿಜೆಪಿ ಆಡಳಿತದ ರಾಜ್ಯಗಳು ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ಒತ್ತಾಯ ಮಂಡಿಸಿದ್ದವು. ಜಾರ್ಖಂಡ್ ಸರಕಾರ 2018ರಲ್ಲಿ ಪಿಎಫ್ಐ ಸಂಘಟನೆ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿರುವುದು ಖಾತ್ರಿಯಾಗಿರುವುದರಿಂದ ರಾಜ್ಯದಲ್ಲಿ ಬ್ಯಾನ್ ಮಾಡುವುದಾಗಿ ಪ್ರಕಟಿಸಿತ್ತು. ಸಿರಿಯಾದ ಐಸಿಸ್ ನಿಂದ ಪ್ರೇರಿತಗೊಂಡು ಪಿಎಫ್ಐ ಕಾರ್ಯ ಚಟುವಟಿಕೆ ನಡೀತಿದೆ ಎಂದು ಹೇಳಿತ್ತು. ಆದರೆ, ಪಿಎಫ್ಐ ಜಾರ್ಖಂಡ್ ಸರಕಾರದ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆನಂತರ ನಿಷೇಧವೂ ತೆರವಾಗಿತ್ತು. 2018ರಲ್ಲಿ ಮದ್ರಾಸ್ ಹೈಕೋರ್ಟಿಗೆ ಪಿಎಫ್ಐ ಸಂಘಟನೆ ನಿಷೇಧಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರ್ಟಿ ಪಿಐಎಲ್ ಸಲ್ಲಿಕೆಯಾಗಿತ್ತು. ಸಮಾಜದ ಶಾಂತಿ ಕದಡುವಲ್ಲಿ ಪಿಎಫ್ಐ ಪಾತ್ರ ಇದೆ, ಅದೊಂದು ಕಮ್ಯುನಲ್ ವಿಷ ಬೀಜ ಬಿತ್ತುವ ಸಂಘಟನೆ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.

64 Arrested, FIR Against More Than 5000 Across Gujarat After Anti-CAA  Protests | NewsClick

ಸಿಎಎ ಪ್ರತಿಭಟನೆ ನೆಪದಲ್ಲಿ ಕೋಮು ಗಲಭೆ

2019ರ ಡಿಸೆಂಬರಿನಲ್ಲಿ ಸಿಎಎ ಪ್ರತಿಭಟನೆ ನೆಪದಲ್ಲಿ ಉತ್ತರ ಪ್ರದೇಶ ರಾಜ್ಯದಾದ್ಯಂತ ಗಲಭೆ, ಹಿಂಸಾಚಾರ ನಡೆಸಿದ ಪ್ರಕರಣಗಳಲ್ಲಿ 25ಕ್ಕೂ ಹೆಚ್ಚು ಮಂದಿ ಪಿಎಫ್ಐ ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಹಾಗಾಗಿ ಪೊಲೀಸರು ಪಿಎಫ್ಐ ಬ್ಯಾನ್ ಮಾಡುವಂತೆ ಉತ್ತರ ಪ್ರದೇಶ ಸರಕಾರವನ್ನು ಕೋರಿದ್ದರು. 2020ರಲ್ಲಿ ಕರ್ನಾಟಕ ಸರಕಾರವೂ ಎಸ್ಡಿಪಿಐ ಮತ್ತು ಪಿಎಫ್ಐ ಬ್ಯಾನ್ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿತ್ತು. ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡದ ಬಗ್ಗೆ ರಾಜ್ಯ ಸರಕಾರ ಕೇಂದ್ರದ ಗಮನಕ್ಕೆ ತಂದಿದ್ದರೂ, ಪಿಎಫ್ಐ ಸಂಘಟನೆ ಬ್ಯಾನ್ ಮಾಡುವತ್ತ ಕೇಂದ್ರ ಮುಂದಾಗಿರಲಿಲ್ಲ.

Unlawful Activities and Prevention Act, 1967: A Regime against Freedom of  Speech and Expression - iPleaders

ಸಂಘಟನೆ ನಿಷೇಧ ಹೇಗಾಗುತ್ತದೆ ?

ಯಾವುದೇ ಸಂಘಟನೆ ನಿಷೇಧಗೊಳ್ಳಲು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸಾಬೀತಾಗಬೇಕು. ಯಾವುದೇ ಸಂಸ್ಥೆ, ಸಂಘಟನೆಯು ದೇಶದ್ರೋಹದ ಕೆಲಸದಲ್ಲಿ ತೊಡಗಿರುವುದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದಲ್ಲಿ ಕೇಂದ್ರ ಸರಕಾರ ಯುಎಪಿಎ ಕಾಯ್ದೆಯ 3ರಡಿ ಆ ಸಂಘಟನೆಯನ್ನು ನಿಷೇಧಿಸಲು ಅವಕಾಶವಿದೆ. ಈ ಬಗ್ಗೆ ಗಜೆಟ್ ನೋಟಿಫಿಕೇಶನ್ ಹೊರಡಿಸಬೇಕಾಗುತ್ತದೆ.

The Popular Front of India (PFI) that came into existence as a non-profit organisation with an aim to fight for the rights of minorities, Dalits, and marginalised communities is now on the verge of getting banned for allegedly indulging in actions detrimental to the overall national security.In the ‘largest-ever’ investigation, the crackdown on PFI on Thursday across India debunks the outfit’s claims of being a neo-social movement committed to empowering people to ensure justice, freedom, and security.