ಕಾಣೆಯಾಗಿದ್ದ ಬದಿಯಡ್ಕದ ದಂತವೈದ್ಯರ ಶವ ಹಟ್ಟಿಯಂಗಡಿ ಬಳಿ ಪತ್ತೆ ; ಆತ್ಮಹತ್ಯೆ ಶಂಕೆ 

11-11-22 01:52 pm       HK News Desk   ದೇಶ - ವಿದೇಶ

ಬದಿಯಡ್ಕದಿಂದ ನಾಪತ್ತೆಯಾಗಿದ್ದ ದಂತವೈದ್ಯ ಡಾ. ಎಸ್. ಕೃಷ್ಣಮೂರ್ತಿ ಅವರ ಮೃತದೇಹ ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಬಳಿ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಕೃಷ್ಣಮೂರ್ತಿ ಕುಟುಂಬಸ್ಥರು ಕುಂದಾಪುರಕ್ಕೆ ತೆರಳಿ ಶವದ ಗುರುತು ಪತ್ತೆ ಹಚ್ಚಿದ್ದಾರೆ.

ಕಾಸರಗೋಡು, ನ.11 : ಬದಿಯಡ್ಕದಿಂದ ನಾಪತ್ತೆಯಾಗಿದ್ದ ದಂತವೈದ್ಯ ಡಾ. ಎಸ್. ಕೃಷ್ಣಮೂರ್ತಿ ಅವರ ಮೃತದೇಹ ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಬಳಿ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಕೃಷ್ಣಮೂರ್ತಿ ಕುಟುಂಬಸ್ಥರು ಕುಂದಾಪುರಕ್ಕೆ ತೆರಳಿ ಶವದ ಗುರುತು ಪತ್ತೆ ಹಚ್ಚಿದ್ದಾರೆ.

ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿದ್ದ ಕೃಷ್ಣಮೂರ್ತಿ ನವಂಬರ್ 8 ರಂದು ಮಧ್ಯಾಹ್ನ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹುಡುಕಾಟದ ವೇಳೆ ವೈದ್ಯರ ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು. ಕೃಷ್ಣಮೂರ್ತಿ ಅವರು ಕುಂದಾಪುರಕ್ಕೆ ತೆರಳಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಮೊಬೈಲನ್ನು ಕ್ಲಿನಿಕ್ ನಲ್ಲೇ ಬಿಟ್ಟು ತೆರಳಿದ್ದರಿಂದ ಎಲ್ಲಿ ಹೋಗಿದ್ದಾರೆಂದು ತಿಳಿಯದಾಗಿತ್ತು. ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ವೈದ್ಯರಿಗೆ ಬೆದರಿಕೆ ಒಡ್ಡಿತ್ತು ಎನ್ನಲಾಗಿದೆ. ಇದಲ್ಲದೆ, ಮಹಿಳೆಯೂ ಪೊಲೀಸರಿಗೆ ದೂರು ನೀಡಿದ್ದರು. ಈ ಬೆಳವಣಿಗೆ ಬಳಿಕ ಡಾ.ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. 

ನಾಪತ್ತೆ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು. ವೈದ್ಯರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿ ದಂತ ವೈದ್ಯರ ಸಂಘಟನೆ ಸದಸ್ಯರು ಕಾಸರಗೋಡು ಘಟಕದ ನೇತೃತ್ವದಲ್ಲಿ ಗುರುವಾರ ಬದಿಯಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸಿತ್ತು. ನೂರಾರು ಸ್ಥಳೀಯರು ಸೇರಿ ಬದಿಯಡ್ಕ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.‌

ಬದಿಯಡ್ಕದಲ್ಲಿ ದಂತವೈದ್ಯರ ನಾಪತ್ತೆ ಸಂಚಲನ ; ಬೆದರಿಕೆ ಹಾಕಿದ್ದ ಮುಸ್ಲಿಂ ಲೀಗ್ ನಾಯಕರು, ಪೊಲೀಸರ ನಿರ್ಲಕ್ಷ್ಯ, ಸ್ಥಳೀಯರ ಪ್ರತಿಭಟನೆ 

The mangled body of the Badiadka based dentist Dr Krishnamurthy who was reported missing was found beside the railway tracks at Ajji Mane, Hittiangadi village. His shredded body was found about 50 meters away from the head.Dr Krishnamurthy who was running a clinic in Badiadka had been practicing for the past 30 years. He was reported missing after Tuesday morning. His wife had lodged a missing complaint at the Badiadka police station. The police department which began the search operations found his mobile phone in his clinic. However his motorcycle was found parked at Kumble.